ಹಗಲ ಹೂ ಕಾಂತಿ ಕಂದಿಸಿದ ಅಭ್ಯಾಗತ
ಯುಗಾದಿಗೆ ಹುಣಸೆ ಕಂಡ ತಾಮ್ರದಂತೆ ಬೆಂಗಳೂರು ಫಳಫಳಿಸುತ್ತಿದೆ. ಹೌದು, ಇದು ಯುಗಾದಿಯ ನಂತರದ್ದೇ ಮಳೆ. ಚಾಂದ್ರಮಾನದ ನಂತರ ಏರಿದ್ದ ಬಿಸಿಯನ್ನ ಸೌರಮಾನ ಕಳೆದಿದೆ.
ಭಾನುವಾರ ಹತ್ತರ ನಂತರ ಆಗಸದ ಅಳು ನಿಂತಿದೆ. ಹಗಲ ಹೂ ಸೂರ್ಯ ನಗುತ್ತಿದ್ದಾನೆ. ಆದರೆ, ಸಂಜೆ ಮತ್ತದೇ ಮಳೆ. ಮೂರು ದಿನಗಳ ರಜೆಯ ವಾರಾಂತ್ಯದ ಮೊದಲೆರಡು ದಿನ ಮನೆಯ ರಗ್ಗಿನೊಳಗೇ ಕಳೆದುಹೋದದ್ದು ಹಲವರಿಗೆ ಖುಷಿಯೇನನ್ನೂ ತಂದಿಲ್ಲ . ಗುಡ್ ಫ್ರೆೃಡೇ ಡಿನ್ನರ್ ಪಾರ್ಟಿ, ಶನಿವಾರದ ರಸಸಂಜೆ , ಈಸ್ಟರ್ ಸಂಡೆ ಎಲ್ಲವೂ ಮಳೆಯಲ್ಲಿ ಕೊಚ್ಚಿ ಹೋಯಿತು ಎಂದು ಕೆಲವರು ವಿಷಾದದಿಂದ ನಿಡುಸುಯ್ಲಿಟ್ಟರೆ, ಪ್ರೋಗ್ರಾಂಗಳ ಮನೆ ಹಾಳಾಗಲಿ, ಬೆವರ ಕಮಟನ್ನ ಮಳೆ ತೊಳೆಯಿತಲ್ಲಾ ಎಂಬ ಖುಷಿಯ ನಿಟ್ಟುಸಿರು ಕೆಲವರದು.
ಈ ನಡುವೆ ಮಳೆಯ ಅವಾಂತರಗಳೇನೂ ಕಡಿಮೆಯವಲ್ಲ . ಶೇಷಾದ್ರಿಪುರದ ಸೇತುವೆಯಾಂದರ ನೀರಲ್ಲಿ ಬಿಎಂಟಿಸಿ ಬಸ್ಸನ್ನ ಮುಳುಗಿಸಿ ಒದ್ದಾಡಿದ ಚಾಲಕ, ರಾಜಾಜಿನಗರದಲ್ಲಿ ಧುತ್ತೆಂದು ಮರದ ಟೊಂಗೆ ಬಿದ್ದು ಕಾರು ನುಜ್ಜುಗುಜ್ಜಾದುದನ್ನ ಜೀರ್ಣಿಸಿಕೊಳ್ಳಲಾಗದ ಒಡೆಯ, ಮನೆಗೆ ನೀರು ನುಗ್ಗಿ ಇದ್ದಬದ್ದದ್ದೆಲ್ಲಾ ತೊಳೆದೊಯ್ದದ್ದನ್ನ ರೆಪ್ಪೆ ಮಿಟುಕಿಸದೆ ಕಂಡ ಅಲಸೂರ ಮೂಕ ಪ್ರೇಕ್ಷಕ , ಇವರೆಲ್ಲಾ ಮಳೆಯ ಚಾವಟಿಗೆ ಬಲಿಯಾದವರು. ಇದರೊಂದಿಗೆ ಅನಿಯಮಿತ ವಿದ್ಯುತ್ ಕಡಿತದ ಹಾವಳಿ ಬೇರೆ. ಇದಕ್ಕೂ ಮಳೆಯತ್ತಲೇ ಬೆಟ್ಟು . ರವೀಂದ್ರನಾಥ್ ಠಾಗೂರ್ ನಗರ, ಸದಾಶಿವನಗರ, ವಸಂತನಗರ, ಇಂದಿರಾನಗರ, ಬಸವನಗುಡಿ, ಜಯನಗರ ಹಾಗೂ ಹಳೆ ಮದರಾಸು ರಸ್ತೆ ಪ್ರದೇಶಗಳು ಅನಿಯಮಿತ ವಿದ್ಯುತ್ ನಿಲುಗಡೆಯಿಂದ ಬಾಧೆಗೊಳಗಾದವು.
ಬೆಂಗಳೂರಿನಂಥದ್ದೇ ಪರಿಸ್ಥಿತಿ ರಾಜ್ಯದ ಅನೇಕ ಪ್ರದೇಶಗಳಲ್ಲಿ . ವರ್ಷಕ್ಕೊಮ್ಮೆ ಬಂದು ಹೋಗುವ ಅತಿಥಿಯಂತೆ ಕಾಣಿಸಿಕೊಳ್ಳುವ, ಶಿರಾದ ಜಾಜಿಕಟ್ಟೆಗೆ ನೀರಿನ ಸೆಲೆಯಾದ ಹಳ್ಳ ಮೈ ತುಂಬಿಕೊಂಡಿದೆ. ಅಲ್ಲಿಗೆ ಜಾಜಿಕಟ್ಟೆಯನ್ನು ನಂಬಿಕೊಂಡವರು ಈ ಬೇಸಗೆಯಲ್ಲಿ ಬಚಾವಾದರು ಎಂತಲೇ ಅರ್ಥ.
ಈ ನಡುವೆ, ಚಿಕ್ಕಮಗಳೂರು, ಗದಗ, ಚನ್ನಪಟ್ಟಣ, ಸುಬ್ರಹ್ಮಣ್ಯ ಮುಂತಾದ ಊರುಗಳಲ್ಲಿ ಮಳೆ ಮುಂದುವರಿದಿದೆ. ದಿನದ ಗರಿಷ್ಠ ತಾಪಮಾನದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಸೋಮವಾರ ಕೂಡ ರಾಜ್ಯದ ಆಕಾಶದಲ್ಲಿ ಒಂದಷ್ಟು ಮೋಡಗಳು ತಂಗಿ ಮಳೆಯಾಗಬಹುದೆನ್ನುವ ಲೆಕ್ಕಾಚಾರ ಹವಾಮಾನ ಇಲಾಖೆಯದು. ಅಲ್ಲಿಗೆ ತಂಪುಹವೆ ಮುಂದುವರಿಯಲಿದೆ. ಮಹಾಜನತೆ ಆರಾಮಾಗಿ ರಾತ್ರಿ ಕಳೆಯಬಹುದು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications