ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಭಾನುವಾರದ ರಜೆಯ ಮಜೆಯನ್ನು ಅನುಭವಿಸಲಿಕ್ಕೆ ನಿಮ್ಮಲ್ಲಿ ಸಮಯವೇ ಇಲ್ಲ ಎನ್ನುವ ಸ್ನೇಹಿತರ ಕೊಂಕಿಗೆ ಮನಸ್ಸು ಕೆಡೆಸಿಕೊಂಡರೆ, ವೃತ್ತಿಯಲ್ಲಿ ಸೋಲುತ್ತೀರಿ. ಕೆಲವನ್ನು ಪಡೆಯಲಿಕ್ಕೆ ಕೆಲವನ್ನು ತ್ಯಾಗ ಮಾಡಲೇಬೇಕು.ವೃಷಭ : ಸೃಜನಶೀಲ ವ್ಯವಹಾರಗಳಲ್ಲಿ ಯಶಸ್ಸಿದೆ. ಅಂದಮಾತ್ರಕ್ಕೆ ಕಂಡಲ್ಲೆಲ್ಲಾ ಕೈ ಹಾಕುವ ಹುಂಬತನ ಬೇಡ. ಅನಿರೀಕ್ಷಿತ ಧನಲಾಭವೂ ಇರುವುದರಿಂದ ಈಸ್ಟರ್ ಸಂಡೆ ಸ್ಮರಣೀಯವೆನಿಸುತ್ತದೆ.
ಮಿಥುನ : ಈ ದಿನಕ್ಕೆ ನಿಮ್ಮ ರಜೆಯ ಅವಧಿ ಕೊನೆಯಾಯಿತು. ನಾಳೆಯ ಯಥಾಪ್ರಕಾರದ ಕೆಲಸಕ್ಕೆ ಇಂದೇ ಮನಸ್ಸನ್ನು ಹೊಂದಿಸಿಕೊಳ್ಳಿ. ಶಿಕ್ಷಣದತ್ತ ಹೆಚ್ಚಿನ ಗಮನ ಕೊಡುವುದು ಅತ್ಯಗತ್ಯ.
ಕಟಕ : ಮನೆ ಮಂದಿ ನೀವು ದೂರಾಗುತ್ತಿದ್ದೀರಿ ಎಂದು ದೂರುತ್ತಿದ್ದಾರೆ. ಕುಟುಂಬದ ಮಂದಿಗೆ ಕೆಲಕಾಲವನ್ನು ಮೀಸಲಿಡುವುದು ಅತ್ಯಗತ್ಯ. ಇಲ್ಲದಿದ್ದಲ್ಲಿ ಪ್ರೀತಿ ಪಾತ್ರರ ವಿಶ್ವಾಸಕ್ಕೆ ಎರವಾಗುತ್ತೀರಿ.
ಸಿಂಹ : ಹೊಸ ವಸ್ತ್ರ , ಒಡವೆ ಕೊಳ್ಳುವ ಅವಕಾಶವಿದೆ. ಅನಿರೀಕ್ಷಿತ ಅತಿಥಿಗಳ ಆಗಮನ ಮನಸ್ಸಿಗೆ ಖುಷಿ ನೀಡಲಿದೆ. ಈ ದಿನ ಒಂದೇ ಬೇಸರವೆಂದರೆ, ನಾಳೆ ಮತ್ತೆ ಕಚೇರಿಗೆ ಹೋಗಬೇಕೆನ್ನುವ ನೆನಪು.
ಕನ್ಯಾ : ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡುವುದು ಅಗತ್ಯ. ಇಷ್ಟದೇವರನ್ನು ಪೂಜಿಸಿ. ಇದರಿಂದಾಗಿ, ಪ್ರತಿಕೂಲವಾಗಿರುವ ಸಮಯ ನಿಮಗೆ ಅನುಕೂಲಕರವಾಗಿ ಪರಿಣಮಿಸಲಿದೆ.
ತುಲಾ : ಅಪ್ಪ ಅಮ್ಮನ ಮಾತಿಗೆ ಮನಸ್ಸು ಕೊಡದಿದ್ದಲ್ಲಿ ಪಶ್ಚಾತ್ತಾಪ ಪಡುವುದು ತಪ್ಪದು. ಹೆತ್ತವರು ನಿಮ್ಮ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ವ್ಯವಹರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ.
ವೃಶ್ಚಿಕ : ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ, ಗೆಳೆಯರನ್ನು ತೊಂದರೆಪಪಡಿಸಲು ಹೋಗಬೇಡಿ. ನಿಮ್ಮ ಬೇಸರ ನೀಗಲು ಹೊಸ ಮಾರ್ಗಗಳನ್ನು ಹುಡುಕಿಕೊಳ್ಳಿ. ಲಲಿತಕಲೆಗಳಲ್ಲಿ ಆಸಕ್ತಿ ವಹಿಸಿ.
ಧನಸ್ಸು : ಬಂದೇ ಬರುತಾವ ಕಾಲ ಎಂದು ಕಾಯುತ್ತಾ ಕೂರುವುದರಿಂದ ಉಪಯೋಗವಿಲ್ಲ . ಮುನ್ನುಗ್ಗುವ ಮನೋಭಾವದಿಂದ ಯಶಸ್ಸು ಗಳಿಸುತ್ತೀರಿ. ಪ್ರಣಯ ಸಂಬಂಧಗಳಲ್ಲಿ ಹಿನ್ನಡೆಯಿದೆ.
ಮಕರ : ನಿಮ್ಮನ್ನು ಗೋಳು ಹುಯ್ದುಕೊಳ್ಳಬೇಕೆಂದು ಬಂಧುಗಳು ಕಾಯುತ್ತಿದ್ದಾರೆ. ಸ್ವಲ್ಪ ರಾಜಿಯಾಗಿ, ನೀವೇ ದೊಡ್ಡವರು ಅನ್ನುವುದು ಒಳ್ಳೆಯದು. ಅಂದಹಾಗೆ, ಆರೋಗ್ಯ ಚೆನ್ನಾಗಿಟ್ಟುಕೊಂಡಿದ್ದೀರಿ ತಾನೇ ?
ಕುಂಭ : ಯಶಸ್ಸು ಹೊಸಿತಿಲಲ್ಲೇ ಇದೆ. ಬರಮಾಡಿಕೊಳ್ಳಲು ನೀವೇ ಮುಂದಾಗುತ್ತಿಲ್ಲ . ನಾಳೆ, ನಾಳಿದ್ದರಲ್ಲಿ ವೃತ್ತಿ ಸಂಬಂಧ ದೊಡ್ಡದೊಂದು ತಿರುವು ಕಾಣುತ್ತೀರಿ. ಸಂಜೆ ಮನರಂಜನೆಯಿದೆ.
ಮೀನ : ಕುಟುಂಬದೊಂದಿಗೆ ರಜೆಯನ್ನು ಖುಷಿಯಾಗಿ ಕಳೆಯುತ್ತೀರಿ. ಹೊಸ ಸವಾಲುಗಳಿಗೆ ತೆರೆದುಕೊಳ್ಳುವುದರಿಂದ ಬದುಕಲ್ಲಿ ಲವಲವಿಕೆ ಉಳಿಸಿಕೊಳ್ಳುತ್ತೀರಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications