Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಕಲ್ಪನೆಗೆ ಮೀರಿದ್ದು ಮತ್ತೇನೂ ಇಲ್ಲ. ನಿಮ್ಮ ಮನಸ್ಸು ಎಲ್ಲೆಲ್ಲೋ ಸಂಚರಿಸುತ್ತಿದೆ. ನೀವದನ್ನು ಹಿಡಿತದಲ್ಲಿಟ್ಟರೆ, ಯಶಸ್ಸು ಖಂಡಿತ.

ವೃಷಭ : ಆಸೆಯೇ ದುಃಖಕ್ಕೆ ಕಾರಣ, ನಿಕ್ಷೇಪ - ನಿಧಿಯ ಅನ್ವೇಷಣೆ ಬಿಟ್ಟು, ಶ್ರಮದಿಂದ ಸಾಧನೆಯ ದಾರಿ ಹಿಡಿಯಿರಿ. ವ್ಯಾಪಾರ ಕೈಕೊಟ್ಟೀತು ಎಚ್ಚರ.

ಮಿಥುನ : ಚಂಚಲತೆಯಿಂದ ಕಾರ್ಯ ವಿಕಲ್ಪ. ಅಂದುಕೊಂಡಿದ್ದೆಲ್ಲಾ ನಡೆಯುತ್ತಿಲ್ಲ ಎಂದು ಬೇಸರ ಬೇಡ. ವ್ಯಾಪಾರದಲ್ಲಿ ಲಾಭದ ಸೂಚನೆ. ಮಿತ್ರರನ್ನು ನಂಬಿ ಮೋಸ ಹೋಗಬೇಡಿ.

ಕಟಕ : ವಿಪರೀತ ಕೆಲಸ, ದೈಹಿಕ ಶ್ರಮ. ಶ್ರಮಕ್ಕೆ ತಕ್ಕ ಬೆಲೆ ಸಿಗುವ ಕಾಲ. ಹೆಚ್ಚು ಶ್ರಮದಿಂದ ಯಶಸ್ಸು. ಆರೋಗ್ಯದ ಕಡೆ ಕೊಂಚ ಗಮನ ನೀಡಿ.

ಸಿಂಹ : ನೌಕರಿಯ ಸ್ಥಳದಲ್ಲಿ ಕಿರಿಕಿರಿ, ಹಿರಿಯ ಅಧಿಕಾರಿಯಿಂದ ಉಪದ್ರವ, ಹೊಸ ಯೋಜನೆಗಳಿಗೆ ಇಂದು ಸಕಾಲ ಅಲ್ಲ. ದೇವರ ಪೂಜೆ ಮಾಡುವುದು ಮರೆಯಬೇಡಿ.

ಕನ್ಯಾ : ಪ್ರೇಮಿಗಳಿಗೆ ಶುಭದಿನ. ಮನೆಯಲ್ಲಿ ಬಂಧುಗಳ ಸಂಭ್ರಮ, ಅಭ್ಯಾಗತರ ಆಗಮನ, ಸಡಗರ, ಭೂ ವ್ಯವಹಾರದಲ್ಲಿ ಭಾರಿ ನಷ್ಟ.

ತುಲಾ : ನೀವು ಬೇಡ ಬೇಡ ಎಂದರೂ ಪ್ರಯಾಣ ಹೋಗೇ ಹೋಗುತ್ತೀರಿ. ವಿದ್ಯಾರ್ಥಿಗಳಿಗೆ ಯಶಸ್ಸು, ಶುಭ ಸುದ್ದಿಯ ಆಗಮನ.

ವೃಶ್ಚಿಕ : ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು ಎಂಬಂತೆ ನಿಮ್ಮ ಮನಸ್ಸು ಅತ್ತಿಂದಿತ್ತ ಎಳೆದಾಡುತ್ತಿದೆ. ಸ್ಥಿತಪ್ರಜ್ಞತೆ ಕಾಪಾಡಿಕೊಂಡರೆ ಮಾತ್ರ ಗೆಲವು.

ಧನಸ್ಸು : ಧನಲಕ್ಷ್ಮೀ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ರತ್ನಗಂಬಳಿ ಹಾಸಿ, ಒಳಗೆ ಬರಮಾಡಿಕೊಳ್ಳಿ, ಪೂಜಿಸಿ, ಆರಾಧಿಸಿ. ಇಂದಂತೂ ನಿಮಗೆ ಶುಭದಿನ.

ಮಕರ : ಆರಂಭದ ಅಡ್ಡಿಯ ನಡುವೆಯೂ ಪ್ರವಾಸದ ಆನಂದ ಇಂದು ಅಮಿತವಾಗಿದೆ. ಬಂಧು ಬಾಂಧವರೊಂದಿಗೆ ಸುಂದರ ದಿನ. ಮನಸ್ಸಿಗೆ ನೆಮ್ಮದಿ.

ಕುಂಭ : ಷೇರು ವ್ಯವಹಾರದಲ್ಲಿ ಅಸಮಾಧಾನ. ಶತ್ರು ಭಯ. ವ್ಯವಹಾರದಲ್ಲಿ ನಿರಾಶೆ. ಕುಲದೇವರ ಪೂಜೆಯಿಂದ ಸಂಕಷ್ಟಗಳ ಪರಿಹಾರ.

ಮೀನ : ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆಲಸ್ಯದಿಂದ ಅಮೃತವೂ ವಿಷವಾಗುತ್ತದೆ. ವೈದ್ಯರ ಸಲಹೆ ಪಡೆಯಿರಿ. ಗೆಳೆಯರ ಸಲಹೆಯಿಂದ ಗೌರವ ಪ್ರಾಪ್ತಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+