Get Updates
Get notified of breaking news, exclusive insights, and must-see stories!

ತೆಹಲ್ಕಾ ಹಗರಣದ ಹಿಂದೆ ಹಿಂದೂಜಾ ಕೈವಾಡ:ಜಾರ್ಜ್‌ ಆರೋಪ

ರಾಂಚಿ : ತೆಹಲ್ಕಾ ಹಗರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಇತ್ತ ಕೇಂದ್ರದ ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಈ ಹಗರಣದ ಹಿಂದೆ ಹಿಂದೂಜಾಗಳ ಕೈವಾಡ ಇದೆ ಎಂದು ಇಲ್ಲಿ ಆರೋಪಿಸಿದ್ದಾರೆ. ಬೊಫೋರ್ಸ್‌ ಪ್ರಕರಣದ ಹಿನ್ನೆಲೆಯಲ್ಲಿ ಇಡೀ ಪ್ರಕರಣ ನಡೆದಿದೆ ಎಂಬುದೂ ಜಾರ್ಜ್‌ ಆಪಾದನೆ.

ಈ ಹಗರಣದ ಹಿಂದೆ ಶಸ್ತ್ರಾಸ್ತ್ರ ಮಾರಾಟಗಾರರ ಅತಿ ದೊಡ್ಡ ಲಾಬಿಯೇ ಇದೆ. 1989ರಿಂದ ನಡೆಯುತ್ತಿರುವ ಶಸ್ತ್ರಾಸ್ತ್ರ ಖರೀದಿ ವ್ಯವಹಾರಗಳ ಬಗ್ಗೆ ನಡೆಯುತ್ತಿರುವ ತನಿಖೆಗೆ ಹೆದರಿ ತೆಹಲ್ಕಾ ರಕ್ಷಣಾ ನಕಲಿ ಹಗರಣ ಸೃಷ್ಟಿಸಲಾಗಿದೆ ಎಂದು ಎನ್‌ಡಿಎ ಇಲ್ಲಿ ಏರ್ಪಡಿಸಿದ್ದ ಸಮರ್ಥನಾ ರ್ಯಾಲಿಯಲ್ಲಿ ಜಾರ್ಜ್‌ ಹೇಳಿದರು.

ಈ ಇಡೀ ಪ್ರಕರಣ ರಾಷ್ಟ್ರದ ಸೇನಾ ಪಡೆಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಉನ್ನತ ಮಟ್ಟದ ಸಂಚಾಗಿದೆ. ಇದು ರಾಷ್ಟ್ರದ ಭದ್ರತಾ ಸಿದ್ಧತೆಗಳನ್ನು ಮಂಕುಗೊಳಿಸುವ ದುಷ್ಟ ಪ್ರಯತ್ನ ಎಂದೂ ಅವರು ಬಣ್ಣಿಸಿದರು. ಆದರೆ, ಕೇಂದ್ರ ಸರಕಾರವು ಇಂತಹ ಸಂಚುಗಳು ಬೆಳೆಯಲು ಅವಕಾಶ ನೀಡುವುದಿಲ್ಲ ಎಂದೂ ಜಾರ್ಜ್‌ ಫರ್ನಾಂಡಿಸ್‌ ನುಡಿದರು.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+