ಭಾನುವಾರದಿಂದ 3ದಿನ ಬೆಂಗಳೂರಲ್ಲಿ ಬಯೋಟೆಕ್ ಮೇಳ
ಬೆಂಗಳೂರು : ಬಯೋಟೆಕ್ ನಗರಿ ಎಂದೂ ಖ್ಯಾತವಾಗಿರುವ ಬೆಂಗಳೂರು ಐಟಿ ಮೇಳದ ನಂತರ ಬಯೋಟೆಕ್ ಮೇಳಕ್ಕೆ ಅಣಿಯಾಗಿದೆ. ಇದಕ್ಕಾಗಿ ಬೆಂಗಳೂರು ಅರಮನೆ ಆವರಣ ಸಜ್ಜಾಗಿದೆ. ಬೆಂಗಳೂರು ಬಯೋ ಡಾಟ್ ಕಾಮ್ 2001 ಎಂಬ ಹೆಸರಿನಲ್ಲಿ ಮೇಳ ಏಪ್ರಿಲ್ 15ರಿಂದ 17ರವರೆಗೆ ನಡೆಯಲಿದೆ.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಈ ಮೇಳವನ್ನು ಉದ್ಘಾಟಿಸುತ್ತಿದ್ದು, ವಿಶ್ವದ 56ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಈ ಮೇಳವು ರಫ್ತು ಪ್ರೋತ್ಸಾಹಕ್ಕೆ ಉತ್ತಮ ವೇದಿಕೆ ಕಲ್ಪಿಸುತ್ತಿದೆ ಎಂದೂ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್.ಎಂ. ಕೃಷ್ಣ ನೇತೃತ್ವದ ರಾಜ್ಯ ಸರಕಾರ ಇತ್ತೀಚೆಗಷ್ಟೇ ಸಹಸ್ರಮಾನದ ಜೈವಿಕ ತಂತ್ರಜ್ಞಾನ ನೀತಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಮೇಳಕ್ಕೆ ವಿಶೇಷ ಮಹತ್ವ ಬಂದಿದೆ. ಈ ಹೊಸ ನೀತಿಯ ಅನುಷ್ಠಾನದಿಂದ ಜೈವಿಕ ತಂತ್ರಜ್ಞಾನ ಮಾರುಕಟ್ಟೆಗೆ ಹೊಸ ಆಯಾಮ ದೊರಕಲಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಮೇಳ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡುವವರಿಗೆ ಸೂಕ್ತ ವೇದಿಕೆ ಕಲ್ಪಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಮೇಳದಲ್ಲಿ ಆಗ್ರೋ ಇಂಡಿಯಾ, ಅಮರ್‌ಶಾಮ್ ಫಾರ್ಮಾಸಿಯಾ ಬಯೋಟೆಕ್, ಆಟೋಮೇಟೆಡ್ ಸಿಸ್ಟಮ್ಸ್, ಬಯೋಕಾನ್ ಇಂಡಿಯಾ, ಕ್ಯಾಲಿಫೋರ್ನಿಯಾ ಡಿಜಿಟಲ್ ಕಾರ್ಪೊರೇಷನ್, ಗ್ಲೋಬಲ್ ಇಂಟಿಗ್ರೇಟೆಡ್ ಸಾಫ್ಟ್‌ವೇರ್ ಸಲ್ಯೂಷನ್ಸ್ ಇಂಡಿಯಾ, ವಿಪೋ ಬಯೋಮೇಡ್ ಮೊದಲಾದ ಖ್ಯಾತ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ.
ಬಯೋಟೆಕ್ ಯುಗದ ಸುಪ್ರಭಾತ - ಹೊಸ ಜ್ಞಾನ, ಉತ್ತಮ ಆರೋಗ್ಯ, ರಿಕಾಂಬಿನೆಂಟ್ ಲಸಿಕೆ ಉತ್ಪಾದನೆ, ಹೆಚ್ಚು ಮೌಲ್ಯದ ಐ.ಪಿ.ಆರ್.ಗಾಗಿ ಬಯೋ ಟೆಕ್ ಬಳಕೆ, ಜೆನೋಮಿಕ್ಸ್ ಮತ್ತು ಇನ್‌ಫರ್ ಮ್ಯಾಟಿಕ್ಸ್, ಬಯೋ ಟೆಕ್ ವ್ಯವಹಾರ, ಪೇಟೆಂಟ್ಸ್ ಮತ್ತು ಐಪಿಆರ್ ಮೊದಲಾದುವು ಸಮ್ಮೇಳನದ ಪ್ರಸ್ತಾವನೆಗಳಾಗಿವೆ.
ಈ ವರ್ಷ ಜಾಗತಿಕ ಮಟ್ಟದಲ್ಲಿ ಜೈವಿಕ ತಂತ್ರಜ್ಞಾನ ಮಾರುಕಟ್ಟೆ 2.5 ಶತಕೋಟಿ ಅಮೆರಿಕನ್ ಡಾಲರ್‌ವರೆಗೆ ಏರುವ ಸೂಚನೆ ನೀಡಿದ್ದು, 2010ನೇ ಇಸವಿ ವೇಳೆಗೆ ಇದು 4.5 ಶತಕೋಟಿ ಡಾಲರ್ ಮುಟ್ಟುವ ಸಂಭವ ಇದೆ. ಭಾನುವಾರದಿಂದ ನಡೆಯಲಿರುವ ಮೇಳದಲ್ಲಿ ವ್ಯಾಪಾರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಬೆಂಗಳೂರನ್ನು ಜೈವಿಕ ತಂತ್ರಜ್ಞಾನ ರಾಜಧಾನಿಯನ್ನಾಗಿ ಮಾಡಲು ಹಾಗೂ ಮುಂಬರುವ ವರ್ಷಗಳಲ್ಲಿ ಭಾರತ ಜೈವಿಕ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಈ ಮೇಳ ಸರಕಾರಿಯಾಗಲಿದೆ. ವಿವರಗಳು ಮುಖಪುಟ / ಇವತ್ತು... ಈ ಹೊತ್ತು...
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications