Get Updates
Get notified of breaking news, exclusive insights, and must-see stories!

ಕಾಲ್ಚೆಂಡಿನಾಟದ ಸಂತೆಯಲ್ಲಿ ಹೋದ ಜೀವಗಳ ಸಂಖ್ಯೆ 43!

ಡರ್ಬಾನ್‌ : ಕಾಲ್ಚೆಂಡಿನಾಟದ ಮೋಹ ಸಾರಾಸಗಟಾಗಿ 43 ಜನರನ್ನು ಬಲಿತೆಗೆದುಕೊಂಡಿದೆ. ದಕ್ಷಿಣ ಆಫ್ರಿಕದ ಇತಿಹಾಸದಲ್ಲೇ ಇದು ನಡೆದಿರಲಿಲ್ಲ. ಬುಧವಾರ, ಏಪ್ರಿಲ್‌ 11 ಕರಾಳದಿನ.

ಅದು ದೇಶ- ದೇಶಗಳ ನಡುವಿನ ಪಂದ್ಯವಲ್ಲ. ಒಂದೇ ಮನೆಯ ಮಕ್ಕಳಂತಿರುವ 2 ಕ್ಲಬ್ಬುಗಳ ನಡುವಿನ ಪಂದ್ಯ. ಕೈಸರ್‌ ಚೆಪ್ಸ್‌ ಮತ್ತು ಒರ್ಲಾಂಡೋ ಪಿರೇಟ್ಸ್‌ - ಇವು ತಂಡಗಳು. ಎಲಿಸ್‌ಪಾರ್ಕ್‌ ಕ್ರೀಡಾಂಗಣದಲ್ಲಿನ ಬುಧವಾರ ರಾತ್ರಿಯ ಪಂದ್ಯ ಅದು.

ಕ್ರೀಡಾಂಗಣದಲ್ಲಿ 63 ಸಾವಿರ ಮಂದಿಗೆ ಮಾತ್ರ ಕೂರಲು ಜಾಗೆ ಇತ್ತು. ಪಂದ್ಯ ಶುರುವಾಗುವ ಎಷ್ಟೋ ಹೊತ್ತು ಮೊದಲೇ ಅಭಿಮಾನಿಗಳು ಬಂದು ಕೂತಿದ್ದರು. ಅಂಗಣದ ಹೊರಗೆ ನಿಂತ ಪೊಲೀಸರಿಗೆ ಎದುರಾದದ್ದು ಜನಪ್ರವಾಹ. ಅದನ್ನು ತಡೆವ ಸಾಮರ್ಥ್ಯ ಪೊಲೀಸರಲ್ಲಿರಲಿಲ್ಲ.

ಆಟ ನೋಡಲು ಒಳಹೊಕ್ಕ ಜನಸಂಖ್ಯೆ ಒಂದೂಕಾಲು ಲಕ್ಷಕ್ಕೂ ಮೀರಿತು. ಆಟ ಪ್ರಾರಂಭವಾಗಿ ಅರ್ಧ ಗಂಟೆಯಾಗಿತ್ತಷ್ಟೆ. ಎರಡೂ ಕ್ಲಬ್ಬುಗಳು ತಲಾ ಒಂದು ಗೋಲು ಗಳಿಸಿದ್ದವು. ಹಿಪ್‌ ಹಿಪ್‌ ಹುರ್ರೆ ಕೂಗಿನ ನಡುವೆ ಜನತುಳಿತಕ್ಕೆ ಸಿಕ್ಕ ಮಗುವೊಂದರ ಅಳಲು ಬಯಲಾಗಲೇ ಇಲ್ಲ. ಅದರ ಅಮ್ಮನ ಉಸಿರೂ ನಿಂತಿತ್ತು. ಹೀಗೆ ದೊಡ್ಡ ಕ್ರೀಡಾ ಸಂತೆಯಲ್ಲಿ 43 ಜನ ಪ್ರಾಣ ಕಳಕೊಂಡರು. 100ಕ್ಕೂ ಹೆಚ್ಚು ಮಂದಿ ಈ ಹೊತ್ತೂ ಆಸ್ಪತ್ರೆಯ ಹಾಸಗೆ ಮೇಲೆ ಮಲಗಿದ್ದಾರೆ.

ಕಾಲ್ಚೆಂಡಿನಾಟ ಎದೆಯಾಟ. ಗುಂಡಿಗೆ ಒಡೆಯುತ್ತದೆ, ಉಸಿರುಗಟ್ಟಿಸುತ್ತದೆ, ಇಡೀ ದೇಶದ ಜಂಘಾಬಲವನ್ನೇ ಉಡುಗಿಸುತ್ತದೆ. ಇಷ್ಟಾದರೂ ಮತ್ತೆ ಹಿಪ್‌ ಹಿಪ್‌ ಹುರ್ರೇ ಕೂಗುತ್ತಾ ಕ್ರೀಡಾಂಗಣಕ್ಕೆ ಮಂದಿ ಎಡತಾಕುತ್ತಾರೆ. ಇದಕ್ಕೆ ನೀವೇನಂತೀರಿ?

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+