ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ..
ಬೆಂಗಳೂರು : ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ ಕೆಲಕಾಲ ಮೋಡ ಮುಸುಕಿದ ವಾತಾವರಣ ಇತ್ತು. ಬಿಸಿಲ ಬೇಗೆಯಿಂದ ಬೆವರುತ್ತಿರುವ ಬೆಂಗಳೂರಿಗರು, ಮೋಡ ಕಂಡು ಖುಷಿಯಾಗಿದ್ದರು. ಇಂದಾದರೂ ಮಳೆ ಬಂದೀತು ಎಂದು ನಿರೀಕ್ಷಿಸಿದ್ದರು. ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ ಎಂದು ಪ್ರಾರ್ಥಿಸಿದರು.
ಅದೇಕೋ ಮೋಡಗಳಿಗೆ ಹಾಗೂ ವರುಣದೇವನಿಗೆ ಈ ಮೊರೆ ಮುಟ್ಟಲೇ ಇಲ್ಲ. ಮೋಡಗಳೆಲ್ಲಾ ಚದುರಿದವು. ಸೂರ್ಯ ಇಣುಕಿದ. ಬಿಸಿಲೋ, ಬಿಸಿಲು. ಮತ್ತೆ ಎಂದಿನಂತೆ ಬೆವರು ಹರಿಯತೊಡಗಿತು. ಆದರೆ, ರಾಜ್ಯದ ಕೆಲವು ಕಡೆ ಮಾತ್ರ ಚದುರಿದಂತೆ ಮಳೆ ಬಿದ್ದಿದೆ. ಉಳಿದಂತೆ ರಾಜ್ಯದ್ಯಂತ ಒಣಹವೆಯದೇ ಕಾರುಭಾರು. ಉತ್ತರ ಒಳನಾಡಿನ ಕೆಲವೆಡೆ ಗರಿಷ್ಠ ತಾಪಮಾನ ಕೊಂಚ ಕುಸಿದಿತ್ತು. ಕರಾವಳಿಯಲ್ಲಿ ಅಲ್ಪ ಬದಲಾಗಿತ್ತು. ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು.
ರಾಜ್ಯದಲ್ಲಿ ಅತಿ ಗರಿಷ್ಠ ತಾಪಮಾನ ಗುಲ್ಬರ್ಗಾದಲ್ಲಿ ದಾಖಲಾಗಿತ್ತು. ಅಲ್ಲಿ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಮುನ್ಸೂಚನೆಯ ಪ್ರಕಾರ ಶನಿವಾರ ಬೆಳಗ್ಗೆ ವರೆಗೆ ರಾಜ್ಯದಲ್ಲಿ ಒಣಹವೆಯೇ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಭ್ರ ಆಕಾಶ ಇದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ತಲುಪುವ ಸೂಚನೆ ಇದೆ.












Click it and Unblock the Notifications