ಭೂಕಂಪ ಸಂತ್ರಸ್ತರ ನೆರವಿಗೆ ಅಜರ್‌ನೇತೃತ್ವದಲ್ಲಿ ಫ್ಯಾಷನ್ ಷೋ
ಹೈದರಾಬಾದ್ : ಕ್ರಿಕೆಟ್‌ನಲ್ಲಿ ಸಲ್ಲದ ನಾಣ್ಯ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಗುಜರಾತ್ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಲು ಮುಂದಿನ ವಾರ ಫ್ಯಾಷನ್ ಷೋ ಒಂದನ್ನು ಆಯೋಜಿಸಲು ನಿರ್ಧರಿಸಿದ್ದಾರೆ.
ಹೈದರಾಬಾದ್‌ನ ಪಂಚತಾರಾ ಹೋಟೆಲ್‌ನಲ್ಲಿ ಮಾರ್ಚ್ 11ರಂದು ಫ್ಯಾಷನ್ ಷೋ ಏರ್ಪಡಿಸಲಾಗಿದ್ದು, ಅಜರ್-ಸಂಗೀತಾ ಮ್ಯಾನೇಜ್‌ಮೆಂಟ್ ಸರ್ವಿಸ್ ಈ ಕಾರ್ಯಕ್ರಮವನ್ನು ಪ್ರಾಯೋಜಿಸಲಿದೆ. ಗುಜರಾತ್ ಭೂಕಂಪದಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ನೆರವಿಗಾಗಿ ಈ ಫ್ಯಾಷನ್ ಷೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಅಜರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಫ್ಯಾಷನ್ ಜಗತ್ತಿನ ತಾರೆಗಳಾದ ವೆನ್‌ಡಿಲ್ ರಾಡ್ರಿಕ್ಸ್, ಗೀತಾಂಜಲಿ ಕಾಶ್ಯಪ್, ಮನಿಷಾ ಮಲ್ಹೋತ್ರಾ , ದಿವ್ಯಾ ಮಿರ್ಜಾ, ಪೂಜಾ ಬಾತ್ರಾ, ಮಧು ಸಪ್ರೆ ಮತ್ತು ಜಾನ್ ಅಬ್ರಹಾಮ್ ಫ್ಯಾಷನ್ ಷೋದ ಮುಖ್ಯ ಆಕರ್ಷಣೆಯಾಗಲಿದ್ದಾರೆ. (ಯುಎನ್‌ಐ)












Click it and Unblock the Notifications