ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗಂಗೂಲಿ- ನಗ್ಮಾ ಸ್ನೇಹಕ್ಕೂ, ಆಟಕ್ಕೂ ಬೆಸುಗೆ ಹಾಕೋದು ತರವಲ್ಲ’

By Staff
|
Google Oneindia Kannada News

ಮುಂಬಯಿ : ಮಾಧ್ಯಮದವರು ಆಟಕ್ಕೂ, ಖಾಸಗಿ ಜೀವನಕ್ಕೂ ಸಂಬಂಧ ಕಲ್ಪಿಸಿ ಬರೆಯುವುದು ತರವಲ್ಲ ಎಂದು ಗಂಗೂಲಿ- ನಗ್ಮಾ ಪ್ರಕರಣದ ಹಿನ್ನೆಲೆಯಲ್ಲಿ ಉಚ್ಚಾಟಿತ ಕ್ರಿಕೆಟಿಗ ಅಜಯ್‌ ಜಡೇಜ ಹೇಳಿದ್ದಾರೆ.

ದೆಹಲಿಯಿಂದ ಜಾಮ್‌ ನಗರಕ್ಕೆ ತೆರಳುವ ಮಾರ್ಗದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತಿಗೆ ಸಿಕ್ಕ ಜಡೇಜ ಮುಜುಗರ ಪಟ್ಟಿಕೊಳ್ಳದೆ ತಮ್ಮ ಅಭಿಪ್ರಾಯಗಳನ್ನು ಬಿಚ್ಚಿಟ್ಟರು...

  • ಸಿನಿತಾರೆ ನಗ್ಮಾ ಜೊತೆ ಗಂಗೂಲಿ ಸ್ನೇಹಕ್ಕೂ, ಅವರ ಕ್ರಿಕೆಟ್‌ ನಾಯಕತ್ವಕ್ಕೂ ಯಾವ ಸಂಬಂಧವೂ ಇಲ್ಲ. ಹಾಗೆ ಸಂಬಂಧ ಕಲ್ಪಿಸಿ ಬರೆಯುವುದರಿಂದ ಆಟಗಾರನ ಮಾನಸಿಕ ಸಮತೋಲನದಲ್ಲಿ ಏರುಪೇರಾಗಿ, ಆಟದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ
  • ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ತಂಡಗಳ ವಿರುದ್ಧ ಆಡಿದ ಫಾರ್ಮ್‌ನಲ್ಲಿದ್ದ ಆಟಗಾರರನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಆಯದಿರಲು ಕಾರಣವೇನು? ಐದು ಬದಲಾವಣೆಯ ಅಗತ್ಯವಾದರೂ ಏನಿತ್ತು?
  • ಕರ್ನಾಟಕದ ಸುನಿಲ್‌ ಜೋಷಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಸಾಮರ್ಥ್ಯ ತೋರಿದ್ದರೂ, ಅವರ ಬದಲಿಗೆ ಸಾಂಘ್ವಿಯನ್ನು ಆರಿಸಿದ್ದು ಸರಿಯಲ್ಲ. ಸಾಂಘ್ವಿ ಯಾವ ಮ್ಯಾಜಿಕ್ಕನ್ನೂ ಮಾಡಲೇ ಇಲ್ಲ !
  • ನಾನು ರಾಷ್ಟ್ರೀಯ ತಂಡಕ್ಕೆ ಮರಳುವುದು ಕನಸಿನ ಮಾತು. ನನ್ನ ಮೇಲಿನ ನಿಷೇಧ ಸಾಕಷ್ಟು ಬೇಸರ ತಂದಿದೆ.
ಪ್ರಸ್ತುತ ಕ್ರಿಕೆಟ್ಟನ್ನು ಹೆಚ್ಚೂಕಮ್ಮಿ ಮರೆತಿರುವ ಜಡೇಜ, ಗುಜರಾತ್‌ ಸಂತ್ರಸ್ತರಿಗೆ ತಮ್ಮ ಕೈಲಾದ ನೆರವನ್ನು ಮಾಡುವ ಒಳ್ಳೆ ಕೆಲಸದಲ್ಲಿ ನಿರತರಾಗಿದ್ದಾರೆ. ಮೋಸದಾಟದ ಆರೋಪದ ಬಗೆಗೆ ಅವರು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ಮಾರ್ಚ್‌ 29ರಂದು ನ್ಯಾಯಾಲಯದಿಂದ ಹೊರಬೀಳಲಿದೆ.

(ಇನ್ಫೋ ವಾರ್ತೆ)

  • ಮುಖಪುಟ / ಇವತ್ತು... ಈ ಹೊತ್ತು...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X