ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ- ಮ್ಯಾನೇಜ್‌ಮೆಂಟ್‌ ಜಗಜ್ಜಾಣರಿಗೆ 67ಲಕ್ಷ ರು.ಜಿಇ ವಿದ್ಯಾರ್ಥಿ ವೇತನ

By Super
|
Google Oneindia Kannada News

ಬೆಂಗಳೂರು : ಜನರಲ್‌ ಇಲೆಕ್ಟ್ರಿಕ್‌ ಕಂಪನಿಯು ಜನೋಪಯೋಗಿ ಕೆಲಸಕ್ಕೆಂದೇ ಸ್ಥಾಪಿಸಿರುವ ಜಿಇ ದತ್ತಿ 67 ಲಕ್ಷ ರುಪಾಯಿ ಭಾರಿ ಮೊತ್ತದ ವಿದ್ಯಾರ್ಥಿ ವೇತನ ಯೋಜನೆಯಾಂದನ್ನು ಸೋಮವಾರದಿಂದ ಪ್ರಾರಂಭಿಸಿದೆ. ಭಾರತದ 40 ಜಾಣ ವಿದ್ಯಾರ್ಥಿಗಳಿಗೆ ವೇತನ ನೀಡುವುದರೊಂದಿಗೆ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬರಲಿದೆ.

ವಿಜ್ಞಾನ, ತಂತ್ರಜ್ಞಾನ ಹಾಗೂ ಮ್ಯಾನೇಜ್‌ಮೆಂಟ್‌ ವಿಷಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಮಾಡಬಯಸುವ ಬುದ್ಧಿವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ. ಆದರೆ ಯಾವುದೋ ವಿದೇಶಕ್ಕೆ ಹಾರಿ ಕಲಿಯಲು ಅಲ್ಲ ; ನಮ್ಮ ದೇಶದಲ್ಲೇ ಕಲಿತು, ಉದ್ಧಾರ ಮಾಡಲು.

ಜಿಇ- ಭಾರತದ ಅಧ್ಯಕ್ಷ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಆರ್‌.ಬೇಮನ್‌ ಯೋಜನೆಯನ್ನು ಜಾರಿಗೆ ತಂದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಅಂತರರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆ (ಐಐಇ) ಈ ಯೋಜನೆಯ ಆಡಳಿತವನ್ನು ನೋಡಿಕೊಳ್ಳಲಿದೆ. ದೇಶದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಪೈಕಿ ಜಾಣಮರಿಗಳನ್ನು ಹೆಕ್ಕಿ, ವೇತನ ನೀಡಲಾಗುವುದು ಎಂದರು.

ಜಿಇ ಏನೆಲ್ಲಾ ಸಾಧಿಸಿರಬಹುದು. ಆದರೂ ಕಂಪನಿ ಇನ್ನೂ ಕಲಿಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಜಾಣರನ್ನು ಹೆಕ್ಕಿ, ಕಂಪನಿಗೆ ಸೇರಿಸಿಕೊಂಡು ಅವರಲ್ಲಿ ಇನ್ನಷ್ಟು ಜ್ಞಾನದ ಹಸಿವನ್ನು ಹುಟ್ಟು ಹಾಕುವುದು ನಮ್ಮ ಉದ್ದಿಶ್ಯ. ಈ ಯೋಜನೆಯೂ ನಮ್ಮ ಉದ್ದಿಶ್ಯದ ಒಂದಂಶ. ಪ್ರತಿಭಾ ಪಲಾಯನಕ್ಕೆ ಒತ್ತು ಕೊಡದೆ ಪ್ರತಿಭಾ ಸಂಪಾದನೆಗೆ ಕುಮ್ಮಕ್ಕು ಕೊಡುವುದೇ ಈ ಯೋಜನೆಯ ಗುರಿ ಎಂದು ಬೇಮನ್‌ ಹೇಳಿದರು.

ವಿದ್ಯಾರ್ಥಿ ವೇತನಕ್ಕೆ ಆರಿಸಲಾಗುವ ವಿದ್ಯಾರ್ಥಿಗಳು ಓದಿನಲ್ಲಿ ಮಾತ್ರ ಜಾಣರಿದ್ದರೆ ಸಾಲದು. ಅವರಲ್ಲಿ ದಕ್ಷ ನಾಯಕತ್ವದ ಗುಣಗಳು ಹುದುಗಿರಬೇಕು. ಒಟ್ಟಿನಲ್ಲಿ ಜಗಜ್ಜಾಣರಾಗಿರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆಯ್ಕೆಗೆ ವಿವಿಧ ಸ್ತರಗಳ ಪರೀಕ್ಷೆಗಳನ್ನು ಒಡ್ಡಲಾಗುತ್ತದೆ ಎಂದು ಐಐಇ, ಭಾರತದ ಸಂಪರ್ಕಾ ಪ್ರೊಫೆಸರ್‌ ಪಿ.ಜೆ.ಲಾವಕರೆ ತಿಳಿಸಿದರು.

ಈ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ವೇತನ ಪಡೆಯಲು ಅರ್ಹರು :

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ (ಬೆಂಗಳೂರು), ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇನ್‌ಫರ್ಮೇಶನ್‌ ಟೆಕ್ನಾಲಜಿ (ಬೆಂಗಳೂರು), ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಕೋಲ್ಕತಾ, ಇಂದೂರ್‌ ಮತ್ತು ಕೊಳಿಕೋಡ್‌), ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಮಣಿಪಾಲ), ಬಿರ್ಲಾ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಚೆನ್ನೈ, ದೆಹಲಿ, ಕಾನ್ಪುರ, ಖರಗ್‌ಪುರ ಹಾಗೂ ಮುಂಬಯಿ), ಜಮ್ನಾಲಾಲ್‌ ಬಜಾಜ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ (ಮುಂಬಯಿ) ಹಾಗೂ ಫ್ಯಾಕಲ್ಟಿ ಆಫ್‌ ಸ್ಟಡೀಸ್‌ (ನವದೆಹಲಿ)

English summary
40 IT brillient students to be benifited with the scholarship
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X