ಛಲದಂಕ ಮಲ್ಲರಿಗೆ ದಕ್ಕುವ ಬದುಕು
ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿ ನಿರ್ಮಲಾ ಎಂಬುದೊಂದು ಆರ್ಟ್ ಗ್ಯಾಲರಿ. ಅಲ್ಲೀಗ ನಡೆಯುತ್ತಿದೆ ಕುಶಾಲ್ ಕುಮಾರ್ ಎನ್ನುವ ಬಾಲಕನ ಚಿತ್ರಗಳ ಪ್ರದರ್ಶನ. ಕುಶಾಲ್ ಅಪ್ಪ ಪ.ಸ. ಕುಮಾರ್ ಪ್ರಸಿದ್ಧ ಕಲೆಗಾರ. ಮಗನಿಗೊ ಮೂತ್ರಪಿಂಡದ ತೊಂದರೆ. ಆಪರೇಷನ್ ಆಗಿದೆ. ದೈಹಿಕವಾಗಿ ಅಶಕ್ತತೆ. ಈ ಹಿನ್ನೆಲೆಯಲ್ಲಿ ಕುಶಾಲ್ ಅಂಟಿಸಿಕೊಂಡಿದ್ದು ಚಿತ್ರಕಲೆಯನ್ನು . ಧಾರೆಯೆರೆಯಲು ಅಪ್ಪ ಜೊತೆಯಲ್ಲೇ ಇದ್ದರು.
ಪ್ರದರ್ಶನವನ್ನು ನೋಡಿ ಬಂದವರ ಎದೆಯನ್ನು ಚಿತ್ರಗಳಿಗಿಂತಾ ಗಾಢವಾಗಿ ತಟ್ಟುವುದು- ಕಲ್ಪನೆಯ ಹಿಂದಿನ ಕಲಾವಿದ. ಅದ್ಯಾವ ಶಕ್ತಿ ಕುಶಾಲನಿಗೆ ಅದ್ಭುತ ಚೇತನವನ್ನು ತುಂಬಿದೆಯಾ ಅನ್ನುವ ಅಚ್ಚರಿ ಹಾಗೂ ಇಂಥಾ ಚೆಂದದ ಚಿತ್ರಗಳ ಹುಡುಗನ ಬಾಳಿನ ಗೆರೆಗಳು ಅಷ್ಟೇನೂ ನೆಟ್ಟಗಿಲ್ಲ ಅನ್ನುವ ವಿಷಾದ.
ಕುಶಾಲ ಮುಂದೆ ಏನೆಲ್ಲಾ ಹಂತಗಳನ್ನು ಮುಟ್ಟಬಹುದು. ಅವನ ಬದುಕುವ ಛಲ ಬಹಳ ಇಷ್ಟವಾಗುತ್ತದೆ. ಕುಶಾಲನ ಸೃಜನಶೀಲ ಬದುಕು ಬಹಳಷ್ಟು ಜನರಿಗೆ ಕಲಿಕೆಯ ದೀಪವಾಗಬೇಕು. ವೈಯಕ್ತಿಕ ದುರಂತಗಳನ್ನು ಮೆಟ್ಟಿ ನಿಲ್ಲುವ ಛಲವನ್ನು ರೂಢಿಸಿಕೊಳ್ಳುವವರಿಗಷ್ಟೇ ಏನನ್ನಾದರೂ ದಾಖಲಿಸಲು ಸಾಧ್ಯ. ಅಂಥಾ ಪ್ರಯತ್ನ ಕುಶಾಲನದು. ಅವನ ಪಥ ಇತರ ಪುಟ್ಟ ಪುಟ್ಟಿಯರಿಗೂ ಬೆಳಕ ತೋರಿಸಲಿ. ಸಾಧನೆಯ ಹಾದಿಯಲ್ಲಿ ಖಾಸಗಿ ಬದುಕಿನ ನೆರಳು ಕತ್ತಲಾಗಿ ಕಾಡದಿರಲಿ.
ಸೋಮವಾರದ ಬಿಸಿಲು- ಬಿಸಿ : ದಿನದ ಕನಿಷ್ಠ ತಾಪಮಾನ 13.7 ಡಿಗ್ರಿ ಸೆಲ್ಷಿಯಸ್ ಗುಲ್ಬರ್ಗಾದಲ್ಲಿ ದಾಖಲಾಗಿತ್ತು . ರಾಜ್ಯದಲ್ಲಿ ಒಣಹವೆಯದ್ದೇ ಮೇಲುಗೈ. ಕರಾವಳಿ ಹಾಗೂ ದಕ್ಷಿಣ ಕರ್ನಾಟಕದ ಒಳಭಾಗಗಳ ಕೆಲವು ಪ್ರದೇಶಗಳಲ್ಲಿ ದಿನದ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಉಂಟಾಗಿತ್ತು .
ಮುಂದಿನ ಎರಡು ದಿನಗಳಲ್ಲೂ ಉಷ್ಣಾಂಶದಲ್ಲಿ ಕಣ್ಕುಕ್ಕುವ ಬದಲಾವಣೆಗಳೇನೂ ಇಲ್ಲ . ಬೆಂಗಳೂರಿನಲ್ಲೂ ಶುಭ್ರಾಕಾಶವಿದ್ದು , ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿರುತ್ತದೆ ಎಂದು ಹವಾಮಾನ ಇಲಾಖೆಯ ವರದಿಗಳು ತಿಳಿಸಿವೆ. ಸೂರ್ಯನಿಗೆ ಕೂಡ ಸುಡು ಬಿಸಿಲನ್ನು ನಿತ್ಯವೂ ಚೆಲ್ಲುವ ಛಲ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications