ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೊಂದು ಕ್ಲಾಸ್‌ ವರ್ಕು,ಹೋಂವರ್ಕು ಮೀರಿದ ಶಾಲೆ

By Oneindia Staff
|
Google Oneindia Kannada News

ಬೆಂಗಳೂರು : ಮೂರರಿಂದ 5 ವರ್ಷ ವಯೋಮಿತಿಯ ಮಕ್ಕಳಿಗೆ ಸಾಂಪ್ರದಾಯಿಕವಲ್ಲದ, ಆಧ್ಯಾತ್ಮಿಕ ಚಟುವಟಿಕೆಗೆ ಒತ್ತು ಕೊಡುವಂಥ ಶಿಕ್ಷಣ ಸಂಸ್ಥೆ, ರವಿಶಂಕರ್‌ ವಿದ್ಯಾಮಂದಿರವನ್ನ್ನು ಪ್ರಾರಂಭಿಸುವುದಾಗಿ ದಿ ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಶನ್‌ ಸೋಮವಾರ ಪ್ರಕಟಿಸಿದೆ.

ಬರೇ ಮಕ್ಕಿಕಾಮಕ್ಕಿ ಪಾಠ, ಹೋಂವರ್ಕು ಅನ್ನದೆ ಪುಟ್ಟ ಮಕ್ಕಳಲ್ಲಿ ಮಾನವೀಯತೆ ಬೆಳೆಸುವ ಉದ್ದಿಶ್ಯ ಪ್ರಾರಂಭವಾಗಲಿರುವ ಈ ಸಂಸ್ಥೆಯದು. ಈ ಶಿಕ್ಷಣ ಸಂಸ್ಥೆಯಲ್ಲಿ ದೊಣ್ಣೆ ಮಾತಾಡುವುದಿಲ್ಲ. ಮಕ್ಕಳು ಕೇವಲ ಹೋಂವರ್ಕು, ಬಾಯಿಪಾಠ ಒಪ್ಪಿಸಿ ಶಹಬ್ಬಾಸ್‌ಗಿರಿ ಪಡೆಯೋ ಕೇವಲವೆಂಬ ಅವಕಾಶ ಇದರ ಸೀಮೆಯಲ್ಲ. ಮಕ್ಕಳ ಮನದಾಳದ ಅಭಿವ್ಯಕ್ತಿಗಿದು ವೇದಿಕೆ. ಸುಪ್ತ ಪ್ರತಿಭೆಗೆ ಹಿಡಿವ ಕನ್ನಡಿ. ಕೆಳೆತನ, ನೈತಿಕ ಮೌಲ್ಯಗಳು, ಹಂಚಿಕೊಂಡು ಬಾಳುವ ಸಹಬಾಳ್ವೆ ಇವೆಲ್ಲವನ್ನೂ ಸಂಸ್ಥೆ ಕಲಿಸಲಿದೆ.

ನೂರಾಹತ್ತು ದೇಶಗಳಲ್ಲಿ ಮಾನವ ಚಾರಿತ್ರ್ಯಾಭಿವೃದ್ಧಿ ಕುರಿತಂತೆ ಕಮ್ಮಟಗಳನ್ನು ನಡೆಸಿರುವ ರವಿಶಂಕರ್‌ ನೇತೃತ್ವದ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಆರ್ಟ್‌ ಎಕ್ಸೆಲ್‌ ಎಂಬ ಮಕ್ಕಳಿಗಾಗೇ ವಿಶೇಷ ಕಾರ್ಯಕ್ರಮವೊಂದನ್ನು ಈಗ ನಡೆಸುತ್ತಾ ಬಂದಿದೆ. ನಗರದ ಕನಕಪುರ ರಸ್ತೆಯಲ್ಲಿನ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಫೌಂಡೇಶನ್‌ ಪೂರ್ಣ ಸವಲತ್ತುಳ್ಳ ಶಾಲೆಯಾಂದನ್ನು ಕಳೆದ 10 ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಇಂಥ ಶಾಲೆಗಳು ದೇಶದಲ್ಲಿ ಇನ್ನಷ್ಟು ತಲೆಯೆತ್ತಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X