ರೈಲ್ವೆ ಬಜೆಟ್ ಮಂಡನೆ: ಕರ್ನಾಟಕದ ಕಣ್ಣಿಗೆ ಮತ್ತೆ ಸುಣ್ಣ
ನವದೆಹಲಿ : ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಸೋಮವಾರ ಸಂಸತ್ತಿನಲ್ಲಿ 2001-2002ರ ಸಾಲಿನ ರೈಲ್ವೆ ಬಜೆಟ್ ಮಂಡಿಸಿದರು. ಪಂಡಿತರ ಎಲ್ಲಾ ಲೆಕ್ಕಾಚಾರವನ್ನೂ ಹುಸಿ ಮಾಡಿದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣ ದರದ ಏರಿಕೆಯ ಪ್ರಸ್ತಾಪವೇ ಇಲ್ಲ. ಆದರೆ, ಸುರಕ್ಷತೆ ಹಾಗೂ ಭದ್ರತೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಬೆಂಗಳೂರು - ವಾಸ್ಕೋ, ಯಶವಂತಪುರ ಹಾಗೂ ಹೌರಾ ನಡುವೆ ವಿಶೇಷ ರೈಲು, ಹೈದರಾಬಾದ್ - ಬೆಂಗಳೂರು ನಡುವೆ 7 ಹೆಚ್ಚುವರಿ ರೈಲು ಸಂಚಾರ. ಬೆಂಗಳೂರು - ಹೈದರಾಬಾದ್ ನಡುವೆ ವಿಶೇಷ ಕಾಲದ ಮಾತೃಭೂಮಿ ರೈಲು ಸಾಗಾಟವೂ ಸೇರಿದಂತೆ ರಾಷ್ಟ್ರಾದ್ಯಂತ ಒಟ್ಟು 24 ಹೊಸ ರೈಲುಗಳ ಸಂಚಾರ ಮತ್ತು 2 ರೈಲು ಓಡಾಟ ಮಾರ್ಗಗಳ ವಿಸ್ತರಣೆ ಬಜೆಟ್ ವಿಶೇಷ. ಕರ್ನಾಟಕ ಪಾಲಿಗಂತೂ ಪ್ರತಿಬಾರಿ ರೈಲ್ವೆ ಬಜೆಟ್‌ನಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕರ್ನಾಟಕದ ಜಾಫರ್ ಷರೀಫ್ ರೈಲ್ವೆ ಮಂತ್ರಿಯಾಗಿದ್ದಾಗಲೂ ಇದು ತಪ್ಪಲಿಲ್ಲ. ಈ ಬಾರಿಯ ಬಜೆಟ್ ಕೂಡ ಇದಕ್ಕೆ ಹೊರತಾಗಿಲ್ಲ.
ಗುಜರಾತ್ ಭೂಕಂಪ ಹಾನಿಯ ಹಿನ್ನೆಲೆಯಲ್ಲಿ ಈ ಬಾರಿ ರೈಲ್ವೆ ಸರಕು ಸಾಗಣೆ ಹಾಗೂ ಪ್ರಯಾಣ ದರದಲ್ಲಿ ಭಾರಿ ಹೆಚ್ಚಳ ಆಗಲಿದೆ ಎಂದು ಅರ್ಥಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದರು. ಆದರೆ, ಲೋಕಸಭೆಯಲ್ಲಿ ಸೋಮವಾರ ಮಮತಾ ಬ್ಯಾನರ್ಜಿ ಅವರು ಮಂಡಿಸಿದ 2001-02ರ ಸಾಲಿನ ರೈಲ್ವೆ ಬಜೆಟ್ ಈ ಎಲ್ಲ ಲೆಕ್ಕಾಚಾರವನ್ನೂ ತಲೆಕೆಳಗು ಮಾಡಿತು.
ಭಾರಿ ಸಂಖ್ಯೆಯಲ್ಲಿರುವ ಕೆಳ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರ ಹಿತದೃಷ್ಟಿಯಿಂದ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡಲಾಗಿಲ್ಲ ಎಂದು ತಿಳಿಸಿದರು. ಅಗತ್ಯ ವಸ್ತುಗಳಾದ ಸಕ್ಕರೆ, ಖಾದ್ಯತೈಲ, ಉಪ್ಪು, ದವಸಧಾನ್ಯ, ಸೀಮೆ ಎಣ್ಣೆ, ಹಣ್ಣು ತರಕಾರಿ ಹಾಗೂ ಎಲ್.ಪಿ.ಜಿ. ಸಾಗಣೆಯ ದರದಲ್ಲಿ ಕೂಡ ಯಾವುದೇ ಏರಿಕೆ ಮಾಡಲಾಗುವುದಿಲ್ಲ ಎಂಬ ಸುಳಿವು ನೀಡಿದರು. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
(ಇಂಡಿಯಾ ಇನ್‌ಫೋ ವರದಿ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications