Get Updates
Get notified of breaking news, exclusive insights, and must-see stories!

ಕಡಲ ನಗರಿಗೆ ಬಂತು ಕಬ್ಬಿಣದ ನಂಟಸ್ತಿಕೆ

*ರಾಜು ಮಹತಿ

ಮಂಗಳೂರು : ಭಾರತ ಸರಕಾರದ ಉದ್ಯಮ ಕುದುರೆ ಮುಖ ಕಬ್ಬಿಣ ಅದಿರು ಸಂಸ್ಥೆ ಮಂಗಳೂರಿನಲ್ಲಿ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಘಟಕವನ್ನು ಸ್ಥಾಪಿಸಿದ್ದು, ಕಬ್ಬಿಣ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ.

ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಲಿಮಿಟೆಡ್‌(ಕೆಐಒಸಿಎಲ್‌)ನ್ನು ಮೆಟಲರ್ಜಿಕಲ್‌ ಆ್ಯಂಡ್‌ ಇಂಜಿನಿಯರಿಂಗ್‌ ಕನ್ಸಲ್‌ಟೆಂಟ್ಸ್‌ ಇಂಡಿಯಾ ಲಿಮಿಟೆಡ್‌ ಮತ್ತು ಮೆ. ಎಂಎಸ್‌ಟಿಸಿಲಿ ಜಂಟಿ ಸಹಯೋಗದಲ್ಲಿ ನಿರ್ಮಿಸಲಾಗಿದೆ. ನಿರ್ಮಾಣಕ್ಕೆ ತಗುಲಿದ ವೆಚ್ಚ 300 ಕೋಟಿ ರೂಪಾಯಿ. ದಿನಕ್ಕೆ 450 ಟನ್‌ ಕಬ್ಬಿಣ ತಯಾರಿಸಿ ಸುರಿಯುವ ಸಾಮರ್ಥ್ಯ ಘಟಕಕ್ಕಿದೆ.

ಈ ಘಟಕ ಮಂಗಳೂರಿನ ಕೈಗಾರಿಕಾ ಪ್ರದೇಶ, ಬೈಕಂಪಾಡಿಯಲ್ಲಿದೆ. ಇದರ ಆವರಣದಲ್ಲಿಯೇ ಮೆದುಕಬ್ಬಿಣ ಕೊಳವೆ ತಯಾರಿಕಾ ಘಟಕವನ್ನು ಸದ್ಯದಲ್ಲಿ ತೆರೆಯಲಾಗುವುದು. ಅದಕ್ಕೆಂದೇ 150 ಕೋಟಿ ರೂಪಾಯಿಯನ್ನು ಎತ್ತಿಡಲಾಗಿದೆ.

ಈಗ ಪ್ರಾಯೋಗಿಕವಾಗಿ ಉತ್ಪಾದನೆ ಆರಂಭಿಸಿರುವ ಕುದುರೆಮುಖ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಘಟಕ ವಾರ್ಷಿಕ 2.3 ಲಕ್ಷ ಟನ್‌ ಬೀಡುಕಬ್ಬಿಣವನ್ನು ಉತ್ಪಾದಿಸಿ ರಾಶಿ ಹಾಕಬಲ್ಲುದು. ಪ್ರಸ್ತುತ ಇದು ಅತ್ಯುತ್ತಮ ಗುಣಮಟ್ಟದ ಬೀಡುಕಬ್ಬಿಣವನ್ನು ಉತ್ಪಾದಿಸುತ್ತಿದೆ ಎಂದು ಘಟಕದ ಜನರಲ್‌ ಮ್ಯಾನೇಜರ್‌ ಚಂದ್ರಯ್ಯ ಹೇಳುತ್ತಾರೆ.

ಅತ್ಯುತ್ತಮ ಗುಣಮಟ್ಟದ ಕಬ್ಬಿಣದ ಅದಿರಿನ ಉತ್ಪಾದನೆ

ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ಕುದುರೆಮುಖ ಬೆಟ್ಟದಲ್ಲಿ ತೆಗೆಯುವ ಅದಿರು ಸಂಸ್ಕರಿಸಲ್ಪಟ್ಟು, ನವ ಮಂಗಳೂರು ಬಂದರಿನಲ್ಲಿರುವ ಘಟಕಕ್ಕೆ ಕೊಳವೆ ಮಾರ್ಗದ ಮೂಲಕ ರವಾನೆಯಾಗುತ್ತದೆ.

ಉಳಿದ ಅದಿರು ಉಂಡೆಗಳಾಗಿ ರೂಪಿಸಲ್ಪಡುತ್ತದೆ. ಈ ಉಂಡೆಯನ್ನು ಕಚ್ಚಾ ವಸ್ತುವಾಗಿ ಬಳಸುವ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಬೀಡು ಕಬ್ಬಿಣ ತಯಾರಿಸುತ್ತದೆ ಎಂದು ಕುದುರೆಮುಖದ ಕಬ್ಬಿಣ ಅದಿರುಕಾರ್ಖಾನೆಯ ಸಂಪರ್ಕಾಧಿಕಾರಿ ರಾಮಪ್ಪ.

ಕುದುರೆ ಮುಖ ಕಂಪೆನಿಯ ಕಬ್ಬಿಣದ ಅದಿರು ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶವನ್ನೊಳಗೊಂಡಿದೆ. ಅಂದರೆ ರಂಜಕ ಮತ್ತು ಗಂಧಕದ ಅಂಶ ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಕಬ್ಬಿಣ ತಯಾರಿಕೆಗೆ ಇದು ಉತ್ತಮ ಕಚ್ಚಾ ವಸ್ತು. ಕುದುರೆಮುಖ ಅದಿರು ಸಂಸ್ಥೆಯ ಕಬ್ಬಿಣದ ಅದಿರು ಉಂಡೆಗಳು ಕನ್ವೇಯರ್‌ ಬೆಲ್ಟ್‌ ಮೂಲಕ ಕಬ್ಬಿಣ ತಯಾರಿಕಾ ಘಟಕಕ್ಕೆ ರವಾನೆಯಾಗುತ್ತದೆ.

ಕಬ್ಬಿಣ ತಯಾರಿಕಾ ಘಟಕದಲ್ಲಿರುವ ಬೃಹತ್‌ ಗಾತ್ರದ ಊದು ಕುಲುಮೆಯಲ್ಲಿ 5000 ಡಿಗ್ರಿ ಸೆಂಟಿಗ್ರೇಡ್‌ ಉಷ್ಣತೆಯಲ್ಲಿ ದ್ರವ ರೂಪಕ್ಕೆ ತಿರುಗುವ ಕಬ್ಬಿಣದ ಅದಿರುಂಡೆಗಳು ಸಂಸ್ಕರಿಸಲ್ಪಟ್ಟು, ಬೀಡು ಕಬ್ಬಿಣವಾಗಿ ಹೊರಬರುತ್ತದೆ. ಅಲ್ಲಿಂದ ಅದು ವಿವಿಧ ಕಬ್ಬಿಣದ ಕೈಗಾರಿಕೆಗಳಿಗೆ ರವಾನೆಯಾಗುತ್ತದೆ. ಸಂಸ್ಥೆಯ ಉದ್ದೇಶಿತ ಮೆದು ಕಬ್ಬಿಣದ ಕೊಳವೆ ತಯಾರಿಕಾ ಘಟಕದ ಪ್ರಾಯೋಗಿಕ ಹಂತಗಳೆಲ್ಲ ಮುಗಿದು ಅದು ಅಸ್ತಿತ್ವಕ್ಕೆ ಬಂದರೆ ದೇಶದ ಎರಡನೇ ಮೆದುಕಬ್ಬಿಣ ತಯಾರಿಕಾ ಘಟಕವಾಗಲಿದೆ. ಮೊದಲ ಸ್ಥಾವರ ಬಂಗಾಳದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+