ಕ್ರಿಕೆಟ್ ವಿಶ್ವದ ಮಹಾನ್ ತಾರೆ ಸರ್ ಡಾನ್ ಬ್ರಾಡ್ಮನ್ ಇನ್ನಿಲ್ಲ
ಸಿಡ್ನಿ : ಕ್ರಿಕೆಟ್ ಜಗತ್ತಿನ ಧ್ರುವತಾರೆ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸರ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ ಅವರು ಅಡಿಲೇಡ್ನ ತಮ್ಮ ಸ್ವಗೃಹದಲ್ಲಿ ಭಾನುವಾರ ನಿಧನರಾದರು. ಬ್ರಾಡ್ಮನ್ ಅವರಿಗೆ 92 ವರ್ಷ ವಯಸ್ಸಾಗಿತ್ತು. 20ನೇ ಶತಮಾನದ 30 ಹಾಗೂ 40ರ ದಶಕದಲ್ಲಿ ತಮ್ಮ ಕ್ರಿಕೆಟ್ ಕೌಶಲ ಮೆರೆದ ಬ್ರಾಡ್ಮನ್ ಮಾಡಿದ ಸಾಧನೆ, ಮುರಿದ ದಾಖಲೆ ನೂರಾರು.
ಬ್ರಾಡ್ಮನ್ ಅವರಿಗೆ ಒಬ್ಬ ಪುತ್ರ, ಓರ್ವ ಪುತ್ರಿ ಇದ್ದಾರೆ. 1997ರಲ್ಲಿ ಬ್ರಾಡ್ಮನ್ರ ಪತ್ನಿ ಜೆಸ್ಸಿ ನಿಧನರಾಗಿದ್ದರು. ಕಳೆದ ಕೆಲದಿನಗಳಿಂದ ಬ್ರಾಡ್ಮನ್ ನಿಮೋನಿಯಾದಿಂದ ಬಳಲುತ್ತಿದ್ದರು. ಅವರ ಸಾವಿಗೆ ವಾರ್ಧಕ್ಯವೇ ಕಾರಣ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಪ್ರಕಟಣೆ ತಿಳಿಸಿದೆ.
ಮಹಾನ್ ಸಾಧಕ : 30 ಹಾಗೂ 40ರ ದಶಕದಲ್ಲಿ ಕಿಕೆಟ್ ವಿಶ್ವದಲ್ಲಿ ಧ್ರುವತಾರೆಯಂತೆ ಮಿನುಗಿದ ಮಹಾನ್ ತಾರೆ ಬ್ರಾಡ್ಮನ್. 1948ರಲ್ಲಿ ಕ್ರಿಕೆಟ್ಗೆ ವಿದಾಯ ಹೇಳಿದ ಬ್ರಾಡ್ಮನ್ 52 ಟೆಸ್ಟ್ಗಳಲ್ಲಿ 99.94 ಸರಾಸರಿಯ 6,996ರನ್ಗಳನ್ನು ಗಳಿಸಿ ಸ್ಥಾಪಿಸಿರುವ ವಿಶ್ವದಾಖಲೆಯನ್ನು ಅಳಿಸುವ ವೀರರು ಇನ್ನೂ ಹುಟ್ಟಿಲ್ಲ. ಮುಂದೆ ಹುಟ್ಟುತ್ತಾರೆ ಎಂದು ನಿರೀಕ್ಷಿಸುವುದೂ ಕಷ್ಟ ಸಾಧ್ಯವೇ.
1908ರಲ್ಲಿ ಜನಿಸಿದ ಬ್ರಾಡ್ಮನ್ ಕ್ರಿಕೆಟ್ ವಿಶ್ವದ ದಂತಕತೆ ಎನಿಸಿದ್ದರು. ಅವರು ಅಜಾತಶತ್ರು. ಬ್ರಾಡ್ಮನ್ ಅವರ ಸಾಧನೆಯನ್ನು ಮೆಚ್ಚದ, ಹೊಗಳದ ಹಾಗೂ ಬ್ರಾಡ್ಮನ್ರ ಬಗ್ಗೆ ಅರಿಯದ ಕ್ರಿಕೆಟ್ ಪ್ರೇಮಿಯೇ ಇಲ್ಲ ಎಂಬುದು ಅತಿಶಯೋಕ್ತಿಯ ಮಾತಲ್ಲ. ಬಾಡಿಲೈನ್ ಸೀರೀಸ್ ಬ್ರಾಡ್ಮನ್ರ ಸುಪ್ತ ಕ್ರಿಕೆಟ್ ಕೌಶಲವನ್ನು ವಿಶ್ವಕ್ಕೇ ಪರಿಚಯಿಸಿತು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications