ವಿಧಾನ ಮಂಡಲದ ವೆಬ್ ಸೈಟ್‌ನಲ್ಲಿ ವಿಧಾನಸಭಾಕ್ಷೇತ್ರಾಭಿವೃದ್ಧಿವಿವರ
ಬೆಂಗಳೂರು : ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ನಿಖರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ರಾಜ್ಯ ವಿಧಾನಮಂಡಲ ತನ್ನದೇ ಆದ ಒಂದು ವೆಬ್ ಸೈಟನ್ನು ಆರಂಭಿಸಲಿದೆ ಎಂದು ವಿಧಾನಸಭಾಧ್ಯಕ್ಷ ಎಂ. ವಿ. ವೆಂಕಟಪ್ಪ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವೆಂಕಟಪ್ಪ, ಈ ವರ್ಷದೊಳಗೆ ವೆಬ್ ಸೈಟ್ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಕಂಪ್ಯೂಟರ್‌ಶಿಕ್ಷಣ ಇರುವ ಶಾಸಕರಿಗೆ ಕಂಪ್ಯೂಟರ್‌ಗಳನ್ನು ಒದಗಿಸಲಾಗುವುದು. ಇದರಿಂದ ಅವರಿಗೆ ತಮ್ಮ ಕ್ಷೇತದ ಸ್ಥಿತಿಗತಿಯ ಬಗ್ಗೆ ಸರಿಯಾದ ಮಾಹಿತಿ ದೊರೆಯುತ್ತದೆ ಎಂದು ಹೇಳಿದರು.
ಕಂಪ್ಯೂಟರ್ ಕೊಳ್ಳಲು ಶಾಸಕರಿಗೆ ಸಾಲ ನೀಡಲಾಗುವುದು. ವಿಧಾನ ಮಂಡಲದ ಅಧಿವೇಶನವನ್ನು ನೂರಕ್ಕಿಂತ ಹೆಚ್ಚು ದಿನ ನಡೆಸುವ ಬಗ್ಗೆ ಪರಿಶೀಲಿಸಲಾಗುವುದು ಎಂದ ಸಭಾಧ್ಯಕ್ಷರು ಫೆಬ್ರವರಿ 26ರಂದು ವಿಧಾನಮಂಡಲದ ಅಧಿವೇಶನ ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗಲಿದೆ ಎಂದು ಹೇಳಿದರು.
(ಇನ್ಫೋವಾರ್ತೆ)












Click it and Unblock the Notifications