ರವೀಂದ್ರ ಕಲಾಕ್ಷೇತ್ರದಲ್ಲಿ ಜರ್ಮನೋತ್ಸವ ಸಾಂಸ್ಕೃತಿಕ ಸಂಜೆ
ಬೆಂಗಳೂರು : ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಜರ್ಮನ್ ಉತ್ಸವದ ಅಂಗವಾಗಿ ಗುರುವಾರ (ಫೆ.22) ಸಂಜೆ 6-30ಕ್ಕೆ ಜರ್ಮನಿಯ ಥಿಯೇಟರ್ ಡಿ. ಕ್ಲಾಂಜಿ ಸಾದರಪಡಿಸುವ ಮೆಕಾನಿಕಲ್ ಬ್ಯಾಲೆ ಅಂಡ್ ಲೂಡಸ್ ಡ್ಯಾನಿಯಲಿಸ್ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಜರ್ಮನಿಯ ಗಣತಂತ್ರ ಒಕ್ಕೂಟದ ವಿದೇಶ ಕಚೇರಿ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಮ್ಯಾಕ್ಸ್ ಮುಲ್ಲರ್ ಭವನ್ ಹಾಗೂ ಡೆಕ್ಕನ್ ಹೆರಾಲ್ಡ್ ಸಂಯುಕ್ತವಾಗಿ ಏರ್ಪಡಿಸಿವೆ.
1937ರಲ್ಲಿ ಮೊದಲ ಪ್ರದರ್ಶನ ನೀಡಿದ ಮೆಕ್ಯಾನಿಕಲ್ ಬ್ಯಾಲೆಗೆ ಕರ್ಟ್ ಸ್ಮಿತ್ ಅವರ ನೃತ್ಯ ಸಂಯೋಜನೆ ಇದೆ. ಕಥಕ್ ಹಾಗೂ ಭರತನಾಟ್ಯವನ್ನು ಸಹ ಈ ನೃತ್ಯ ರೂಪಕದಲ್ಲಿ ಅಳವಡಿಸಲಾಗಿದೆ. ಮೈಕೆಲ್ ಪಾಪ್ ಈ ನೃತ್ಯ ರೂಪಕ ರಚಿಸಿದ್ದಾರೆ.












Click it and Unblock the Notifications