ಆರ್‌ಎಸ್‌ಎಸ್‌ನಿಂದ ಗುಜರಾತ್‌ನ 25 ಹಳ್ಳಿಗಳ ಪುನರ್ ನಿರ್ಮಾಣ
ಅಹಮದಾಬಾದ್ : ಭೂಕಂಪದಿಂದ ನಾಮಾವಶೇಷವಾಗಿರುವ ಗುಜರಾತ್‌ನ 25 ಹಳ್ಳಿಗಳ ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲು ಆರ್‌ಎಸ್‌ಎಸ್ ನಿರ್ಧರಿಸಿದೆ.
ಈ ಹಳ್ಳಿಗಳಲ್ಲಿ ನಾಮಾವಶೇಷಗೊಂಡ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳನ್ನು ಪುನರ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ತಿಳಿಸಿದ್ದಾರೆ. ಆದಾಗ್ಯೂ, ಸಂಘ ಯಾವ ಯಾವ ಹಳ್ಳಿಗಳ ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪ್ರತಿ ಹಳ್ಳಿಯ ಪುನರ್ ನಿರ್ಮಾಣಕ್ಕೆ ಮೂರು ಕೋಟಿ ರೂಪಾಯಿ ವೆಚ್ಚವಾಗಲಿದೆ . ಈ ಹಣದಲ್ಲಿ ಅರ್ಧದಷ್ಟನ್ನು ಗುಜರಾತ್ ಸರಕಾರ ಭರಿಸಲಿದೆ. ಉಳಿದುದನ್ನು ಸಂಘ ಭರಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಪ್ರವೀಣ್ ಭಾಯಿ ಮನಿಯಾರ್ ಹೇಳಿದರು.
ಒಟ್ಟು 75 ಕೋಟಿ ರೂಪಾಯಿಗಳನ್ನು ಪುನರ್‌ವಸತಿಗಾಗಿ ಸಂಘ ನೀಡಲಿದೆ. ದೇಶದಲ್ಲಿರುವ ಸ್ವಯಂ ಸೇವಕರಿಂದಲೇ ಸುಮಾರು 25 ಕೋಟಿ ರೂಪಾಯಿ ಸಂಗ್ರಹಿಸಲಾಗುವುದು. ಉಳಿದ ಹಣವನ್ನು ಎನ್ ಆರ್‌ಐಗಳ ದೇಣಿಗೆ ಮೂಲಕ ಜಮಾಯಿಸಲಾಗುವುದು ಎಂದು ಪ್ರವೀಣ್ ಭಾಯ್ ಹೇಳಿದರು. ನೂರು ಸಮುದಾಯ ಭವನ, 50 ಪ್ರಾಥಮಿಕ ಶಾಲಾ ಕಟ್ಟಡಗಳು ನಿರ್ಮಾಣ ದ ಜವಾಬ್ದಾರಿಯನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಪಟ್ಟಣದಿಂದ ದೂರ ಇರುವ ಹಳ್ಳಿಗಳಲ್ಲಿ ಮೊಬೈಲ್ ಮೆಡಿಕಲ್ ಘಟಕಗಳನ್ನು ತೆರೆಯಲಾಗಿದೆ.
(ಯುಎನ್‌ಐ)
| ಮುಖಪುಟ |












Click it and Unblock the Notifications