ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಡೈರಿ ಹಾಲಿನ ದರ 1 ರುಪಾಯಿ ಏರಿಕೆ ಸಂಭವ

By Staff
|
Google Oneindia Kannada News

ಬೆಂಗಳೂರು : ಡೈರಿ ಕಾರ್ಮಿಕರ ಸಂಬಳ ಸಾರಿಗೆಯ ಹೆಚ್ಚಳ ಹಾಗೂ ಡೀಸೆಲ್‌ಬೆಲೆ ಏರಿಕೆಯಿಂದ ಉಂಟಾಗಿರುವ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಡೈರಿ ಹಾಲಿನ ಬೆಲೆಯನ್ನು ಲೀಟರ್‌ಗೆ ಒಂದು ರುಪಾಯಿ ಏರಿಸಲು ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ಧರಿಸಿದ್ದು, ಬೆಲೆ ಏರಿಸುವ ಪ್ರಸ್ತಾವನೆಯನ್ನು ಅನುಮೋದನೆಗಾಗಿ ರಾಜ್ಯ ಹಾಲು ಮಹಾಮಂಡಳಕ್ಕೆ ಕಳುಹಿಸಿಕೊಟ್ಟಿದೆ.

ಈಗಾಗಲೇ ವಿದ್ಯುತ್‌ ದರ ಹೆಚ್ಚಳದಿಂದ ಆಘಾತಕ್ಕೊಳಗಾಗಿರುವ ಬೆಂಗಳೂರು ನಾಗರಿಕರು ದಿನ ನಿತ್ಯದ ಅಗತ್ಯಗಳಲ್ಲಿ ಒಂದಾದ ಹಾಲಿಗೂ ಹೆಚ್ಚುವರಿ ಬೆಲೆ ತೆರಲು ಸಜ್ಜಾಗುವುದು ಈಗ ಅನಿವಾರ್ಯವಾಗಿದೆ. ಜನವರಿ 26ರಂದು ಗುಜರಾತ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಹಿನ್ನೆಲೆಯಲ್ಲಿ ಇದೇ ತಿಂಗಳ 28ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ ಕೂಡ ಕಠಿಣವಾಗಿರುತ್ತದೆ.

ಪ್ರಧಾನಿ ವಾಜಪೇಯಿ ಅವರು ಕೇಂದ್ರ ಬಜೆಟ್‌ ಕಠಿಣವಾಗಿರುತ್ತದೆ ಎಂಬ ಸುಳಿವು ನೀಡಿದ ಬೆನ್ನಲ್ಲೇ ರಾಜ್ಯದ ಬಜೆಟ್‌ ಕೂಡ ಈ ಬಾರಿ ಕಠೋರವಾಗಿರುತ್ತದೆ ಎಂದು ಮುಖ್ಯಮಂತ್ರಿ ಕೃಷ್ಣ ತಿಳಿಸಿದ್ದರು. ಹೆಚ್ಚುವರಿ ತೆರಿಗೆ ಪಾವತಿಸಲು ಸಜ್ಜಾಗುವಂತೆ ಕೇಂದ್ರ ವಿತ್ತ ಸಚಿವರೂ ಅಪ್ಪಣೆ ಕೊಡಿಸಿದ್ದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಬಹುತೇಕ ಎಲ್ಲ ಬೆಲೆಯನ್ನು ಏರಿಸಲು ಮುಂದಾಗಿರುವಾಗ ತಾನೇಕೆ ಹಿಂದೆ ಬೀಳಬೇಕು ಎಂದು ಬೆಂಗಳೂರು ಹಾಲು ಒಕ್ಕೂಟ ಸಹ ಹಾಲಿನ ಬೆಲೆಯನ್ನು ಅದೂ ಲೀಟರ್‌ಗೆ ಒಂದು ರುಪಾಯಿಯಷ್ಟು ಏರಿಸುವ ತೀರ್ಮಾನ ಕೈಗೊಂಡಿದೆ. ಈ ವಿಷಯವನ್ನು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಮಂಜುನಾಥ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಬೆಂಗಳೂರಲ್ಲಿ ಹಾಲು ದರ ಹೆಚ್ಚಿದ ಮೇಲೆ ರಾಜ್ಯಾದ್ಯಂತ ಹೆಚ್ಚದೇ ಇರಲು ಸಾಧ್ಯವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X