ಸಿ.ಇ.ಟಿ. ಅರ್ಜಿ ಸಲ್ಲಿಕೆ ಕಾಲಾವಧಿ ಮಾ.5ರವರೆಗೆ ವಿಸ್ತರಣೆ

ಬೆಂಗಳೂರು : 2001ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಕೋರಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಬಯಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ಕರ್ನಾಟಕೇತರ ಅಭ್ಯರ್ಥಿಗಳು ಅಂಚೆ ಮೂಲಕ ಸಿ.ಇ.ಟಿ. ಘಟಕಕ್ಕೆ ಹಾಗೂ ಕರ್ನಾಟಕದ ವಿದ್ಯಾರ್ಥಿಗಳು ಕಾಲೇಜುಗಳ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್‌ ತಿಂಗಳ 5. ಹೀಗಾಗಿ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳು ಬ್ರೋಷರ್‌ ಹಾಗೂ ಅರ್ಜಿಗಳನ್ನು ಫೆ.23ರಿಂದ ಆಯಾ ಶಾಲಾ - ಕಾಲೇಜುಗಳಿಂದ ಪಡೆಯಬಹುದಾಗಿದೆ.

ಈ ವರೆಗೆ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕ ಕರ್ನಾಟಕೇತರ ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿ, ಸುಮಾರು 63 ಸಾವಿರ ಹಾಗೂ ಕರ್ನಾಟಕದ ಸುಮಾರು 37 ಸಾವಿರ ವಿದ್ಯಾರ್ಥಿಗಳಿಗೆ ಅರ್ಜಿ ಮತ್ತು ಬ್ರೋಷರ್‌ ವಿತರಿಸಿದೆ ಎಂದು ಸಿ.ಇ.ಟಿ. ಘಟಕದ ಪ್ರಕಟಣೆ ತಿಳಿಸಿದೆ.

ನಿಯಮ ಸಡಿಲಿಕೆ : ಸಿ.ಇ.ಟಿ. 2001ರ ಪರೀಕ್ಷೆಯ ಅರ್ಜಿಯಲ್ಲಿ ಕಡ್ಡಾಯವಾಗಿ ಪಿ.ಯು.ಸಿ. ಪರೀಕ್ಷೆಯ ರಿಜಿಸ್ಟರ್‌ ಸಂಖ್ಯೆ ನಮೂದಿಸಲೇ ಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪಿ.ಯು.ಸಿ. ಪರೀಕ್ಷೆಗೆ ಕುಳಿತಿರುವ ವಿದ್ಯಾರ್ಥಿಗಳಿಗೆ ಈ ನಿಬಂಧನೆಯಿಂದ ವಿನಾಯಿತಿ ನೀಡಲಾಗಿದೆ.

ಆದರೆ, ಎರಡನೇ ಬಾರಿಗೆ ಹಾಗೂ ಖಾಸಗಿಯಾಗಿ ಪರೀಕ್ಷೆಗೆ ಕುಳಿತಿರುವವರು ಮಾತ್ರ ಕಡ್ಡಾಯವಾಗಿ ಪಿ.ಯು.ಸಿ. ರಿಜಿಸ್ಟರ್‌ ಸಂಖ್ಯೆ ನಮೂದಿಸಬೇಕು ಎಂದು ಘಟಕ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+