ಬೆಂಗಳೂರಿಗರಿಗೆ ಈ ವರ್ಷವೇ ಟೆಲಿಕಾಂನ ಮೊಬೈಲ್ ಸೇವೆ
ಬೆಂಗಳೂರು : ಬೆಂಗಳೂರು ಟೆಲಿಕಾಂ ಜಿಲ್ಲೆ ಈ ವರ್ಷಾಂತ್ಯದೊಳಗೆ ಸುಲಭ ದರದಲ್ಲಿ ಭಾರತ್ ಸಂಚಾರ್ ನಿಗಮ್‌ನ ಮೊಬೈಲ್ ಫೋನ್ ಸೇವೆಯನ್ನು ಬೆಂಗಳೂರಿಗರಿಗೆ ಒದಗಿಸಲಿದೆ. 2001-2002ನೇ ಸಾಲಿನಲ್ಲಿ ಸುಮಾರು 25 ಸಾವಿರ ಸೆಲ್ಯುಲಾರ್ ಫೋನ್ ಸಂಪರ್ಕ ನೀಡುವ ಉದ್ದೇಶ ನಿಗಮಕ್ಕಿದೆ.
ಈ ವಿಷಯವನ್ನು ಬೆಂಗಳೂರು ದೂರಸಂಪರ್ಕ ಜಿಲ್ಲೆಯ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ಕೆ. ಪದ್ಮನಾಭನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿ.ಎಸ್.ಎನ್.ಎಲ್‌ನ ಮೊಬೈಲ್ ಫೋನ್ ಸೇವೆಗೆ ಹೆಚ್ಚಿನ ಬೇಡಿಕೆ ಬಂದಲ್ಲಿ ಸಂಪರ್ಕದ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದೂ ಅವರು ಹೇಳಿದರು. ದೂರವಾಣಿ ದರ ಹಾಗೂ ಶುಲ್ಕ ಕೂಡ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ಆಗಿರುತ್ತದೆ ಎಂದೂ ಅವರು ಹೇಳಿದರು.
ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಪ್ರತಿವರ್ಷವೂ ದೂರವಾಣಿ ಸಂಪರ್ಕ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಪ್ರತಿಶತ 20ರಷ್ಟು ಏರುತ್ತಲೇ ಇದೆ. ಆದರೆ, ಬೆಂಗಳೂರು ಮಹಾನಗರ ಪಾಲಿಕೆ ಭೂಮಿಯ ಒಳಗೆ ಕೇಬಲ್ ಅಳವಡಿಸುವ ಸಲುವಾಗಿ ರಸ್ತೆ ಅಗೆಯಲು ಅನುಮತಿ ನೀಡದ ಕಾರಣ ಸುಮಾರು 80 ಸಾವಿರಕ್ಕೂ ಹೆಚ್ಚು ಗ್ರಾಹಕರು ದೂರವಾಣಿ ಸಂಪರ್ಕಕ್ಕೆ ಕಾಯುವಂತಾಗಿದೆ ಎಂದರು.
ದೂರವಾಣಿಗೆ ಬೇಡಿಕೆ ಬಂದ ಒಂದೇ ವಾರದೊಳಗೆ ದೂರವಾಣಿ ಸಂಪರ್ಕ ನೀಡುವುದು ನಿಗಮದ ಉದ್ದೇಶವಾತ್ತು, ಆದರೆ ಪಾಲಿಕೆ ಇದಕ್ಕೆ ಅವಕಾಶ ನೀಡಿಲ್ಲ ಎಂದ ಅವರು, ಇದರಿಂದ ಹಲವು ಸಾಫ್ಟ್‌ವೇರ್ ಕಂಪನಿಗಳಗೂ ತೊಂದರೆಯಾಗಿದೆ ಎಂದರು.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications