ರಿkುೕ ಸಿನೆ ಪ್ರಶಸ್ತಿ ಯ 9 ವಿಭಾಗಗಳಲ್ಲಿ ‘ಕಹೋನಾ ಪ್ಯಾರ್ ಹೈ ’ ಪೋಟಿ
ಮುಂಬಯಿ : ನಾಲ್ಕನೆಯ ರಿkುೕ ಪ್ರಶಸ್ತಿಯ 15 ಜನಪ್ರಿಯ ವಿಭಾಗಗಳ ಪೈಕಿ 9 ವಿಭಾಗಗಳಿಗೆ ಕಹೋನಾ ಪ್ಯಾರ್ ಹೈ ನಾಮಿನೇಷನ್‌ಗೊಂಡಿದೆ.
ಮೊನ್ನೆ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಕಹೋನಾ ಪ್ಯಾರ್ ಹೈ ಈಗ ರಿkುೕ ಸ್ಪರ್ಧೆಯಲ್ಲಿ ಅಮಿತಾಬ್ ಬಚ್ಚನ್ ನಟಿಸಿರುವ ಮೊಹಬ್ಬತೇ ಚಿತ್ರಕ್ಕೆ ತೀವ್ರ ಪೈಪೋಟಿ ನೀಡಲಿದೆ. ಅತ್ಯುತ್ತಮ ನಟ ಪ್ರಶಸ್ತಿಗಾಗಿ ಶಾರುಖ್ ಮತ್ತು ಹೃತಿಕ್ ಸ್ಪರ್ಧೆ ಎದುರಿಸುತ್ತಿದ್ದರೆ, ಪುಕಾರ್ ಚಿತ್ರದ ಅನಿಲ್ ಕಪೂರ್, ಮಿಷನ್ ಕಾಶ್ಮೀರ್‌ನ ಸಂಜಯ್ ದತ್ ಕೂಡ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದಾರೆ.
ಅತ್ಯುತ್ತಮ ನಟಿ ಪ್ರಶಸ್ತಿಗೆ ಐಶ್ವರ್ಯಾ ರೈ( ಹಮಾರಾ ದಿಲ್ ಆಪ್‌ಕೆ ಪಾಸ್ ಹೈ), ಕರಿಶ್ಮಾ ಕಪೂರ್(ಫಿಜಾ), ಮಾಧುರಿ ದೀಕ್ಷಿತ್ (ಪುಕಾರ್), ಪ್ರೀತಿ ಜಿಂಟಾ(ಕ್ಯಾ ಕೆಹನಾ), ಮತ್ತು ತಬು (ಅಸ್ತಿತ್ವ) ಕಣದಲ್ಲಿದ್ದಾರೆ.
ಉತ್ತಮ ನಟ ಮತ್ತು ಉತ್ತಮ ನಿರ್ದೇಶಕ ಪ್ರಶಸ್ತಿಯೂ ಸೇರಿದಂತೆ, ಒಟ್ಟು 9 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಕಹೋನಾ ಪ್ಯಾರ್ ಹೈ ಚಿತ್ರ ಗೆದ್ದಿದೆ. ತಮ್ಮ ಚಿತ್ರಕ್ಕೆ ಸಂದಿರುವ ಪ್ರಶಸ್ತಿಗಳನ್ನು ಗುಜರಾತ್ ಭೂಕಂಪ ಸಂತ್ರಸ್ತರಿಗೆ ನೀಡುವುದಾಗಿ ನಿರ್ದೇಶಕ -ನಿರ್ಮಾಪಕ ರಾಕೇಶ್ ರೋಷನ್ ಮತ್ತು ನಾಯಕ ನಟ ಹೃತಿಕ್ ರೋಷನ್ ಹೇಳಿದ್ದಾರೆ.
(ಇನ್ಫೋ ವಾರ್ತೆ)












Click it and Unblock the Notifications