ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್‌ ರೆಸಿಡೆನ್ಸಿಯಲ್ಲಿ ಎರಡು ದಿನಗಳ ಯುಕೆ ಎಜುಕೇಶನ್‌ ಫೇರ್‌

By Staff
|
Google Oneindia Kannada News

ಬೆಂಗಳೂರು : ಭಾರತೀಯ ವಿದ್ಯಾರ್ಥಿಗಳಿಗೆ ಇಂಗ್ಲೆಂಡ್‌ನಲ್ಲಿನ ಶಿಕ್ಷಣಾವಕಾಶಗಳನ್ನು ಪರಿಚಯಿಸುವ ಎರಡು ದಿನಗಳ ಯುಕೆ ಎಜುಕೇಷನ್‌ ಫೇರ್‌ ಬೆಂಗಳೂರಿನ ತಾಜ್‌ ರೆಸಿಡೆನ್ಸಿಯಲ್ಲಿ ಶನಿವಾರ ಆರಂಭವಾಗಿದ್ದು, ಭಾನುವಾರವೂ ನಡೆಯಲಿದೆ.

ಬ್ರಿಟಿಷ್‌ ಕೌನ್ಸಿಲ್‌ನ ದಕ್ಷಿಣ ಭಾರತ ವಲಯದ ನಿರ್ದೇಶಕಿ ಇಯುನೀಸ್‌ ಕ್ರೂಕ್‌ ಈ ವಿಷಯವನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇಂಗ್ಲೆಂಡ್‌ನ ಸುಮಾರು 60ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಮತ್ತು 50ಕ್ಕೂ ಹೆಚ್ಚು ಸಂಸ್ಥೆಗಳು ಸ್ಟಾಲ್‌ಗಳನ್ನು ಮೇಳದಲ್ಲಿ ತೆರೆಯಲಿವೆ.

ಉತ್ತಮ ಜಾಗತಿಕ ವಿದ್ಯಾಭ್ಯಾಸವನ್ನು ವಿದ್ಯಾರ್ಥಿಗಳಿಗೆ ನೀಡಲು ಇಂಗ್ಲೆಂಡ್‌ ಪ್ರಯತ್ನಿಸುತ್ತಿರುವ ನಿಟ್ಟಿನಲ್ಲಿ , ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶ ಈ ಮೇಳದ ಹಿಂದಿದೆ ಎಂದು ಇಯುನೀಸ್‌ ಕ್ರೂಕ್‌ ಹೇಳಿದ್ದಾರೆ. ಈಗಾಗಲೇ ಸುಮಾರು ಆರು ಸಾವಿರ ಮಂದಿ ಭಾರತೀಯ ವಿದ್ಯಾರ್ಥಿಗಳು ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಇಂಗ್ಲೆಂಡ್‌ನ 60 ವಿದ್ಯಾಸಂಸ್ಥೆಗಳಡಿಯಲ್ಲಿ ಸಕ್ರಿಯವಾಗಿರುವ ಸುಮಾರು 100 ಶಾಲಾ ಕಾಲೇಜಿನ ತಂಡಗಳು ಎರಡು ದಿನಗಳ ಮೇಳದಲ್ಲಿ ಭಾಗವಹಿಸಲಿವೆ. ಈ ಮೇಳದಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಆಯ್ಕೆಯ ಬಗ್ಗೆ ವಿವರವಾದ ಮಾಹಿತಿ ನೀಡಲಾಗುವುದು. ಇಂಗ್ಲೆಂಡ್‌ನಲ್ಲಿ ವಿದ್ಯಾಸಂಸ್ಥೆಗಳ ಪ್ರವೇಶ ಪ್ರಕ್ರಿಯೆಯ ಬಗ್ಗೆಯೂ ಅಲ್ಲಿನ ವಿದ್ಯಾಸಂಸ್ಥೆಗಳ ನಿರ್ದೇಶಕರೊಂದಿಗೆ ಆಸಕ್ತ ವಿದ್ಯಾರ್ಥಿಗಳು ಚರ್ಚಿಸಬಹುದು. ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಇಂಜಿನಿಯರಿಂಗ್‌ ಕೋರ್ಸ್‌ಗಳೂ ಸೇರಿದಂತೆ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಆರಂಭವಾಗಿರುವ ಹೊಸ ಕೋರ್ಸ್‌ಗಳು ಮತ್ತು ವೀಸಾ ಪಡೆಯುವ ಬಗ್ಗೆಯೂ ಉಪನ್ಯಾಸ ನೀಡಲಾಗುವುದು.

ಇಂತಹುದೇ ಎಜುಕೇಶನ್‌ ಫೇರ್‌ ಫೆ. 20 ಮತ್ತು 21ರಂದು ಚೆನ್ನೈಯಲ್ಲಿಯೂ ನಡೆಯಲಿದೆ. 50 ರೂಪಾಯಿ ಪ್ರವೇಶ ಶುಲ್ಕ ಇರುತ್ತದೆ. ಆಸ್ಟನ್‌, ಬರ್ಮಿಂಗ್‌ ಹ್ಯಾಮ್‌, ಬ್ರಿಸ್ಟೋಲ್‌, ಬ್ರಾಡ್‌ಫೋರ್ಡ್‌, ಡೆರ್ಬಿ, ಮ್ಯಾಂಚೆಸ್ಟರ್‌, ಲ್ಯೂಟನ್‌ ವಿಶ್ವ ವಿದ್ಯಾಲಯಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಳನ್ನು ಇ- ಮೇಲ್‌ ಮೂಲಕ ಪಡೆದುಕೊಳ್ಳಬಹುದು. [email protected]

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X