ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಕನಸು, ದಿಟ್ಟಿ, ಧ್ಯಾನ ಇವೆಲ್ಲಾ ನಿಮ್ಮ ಜೀವನ ತುಂಬಿವೆ. ಮುಟ್ಟೋದೆಲ್ಲಾ ಚಿನ್ನ. ನೀವು ಕಲಿತಿರೋದನ್ನ ಗೆಳೆಯರಿಗೂ ಹೇಳಿಕೊಡಿ, ಶುಭಾಶಯ ಸ್ವೀಕರಿಸಿ.ವೃಷಭ :ಅತಿಯಾದ ತುಂಟತನ ನಿಮಗಿಂದು ಮುಳು. ಹುಚ್ಚು ಬಯಕೆ, ತುಡಿತಗಳಿಗೆ ಲಗಾಮು ಹಾಕಿ ಮಾನ ಕಾಪಿಟ್ಟುಕೊಳ್ಳಿ. ನಿಮ್ಮ ಮಾನ ನಿಮ್ಮದು.
ಮಿಥುನ : ಸಿಕ್ಕಾಪಟ್ಟೆ ಆಕಳಿಕೆಯಾ ? ಇತ್ತೀಚೆಗೆ ಸುಳ್ಳು ಹೇಳುವುದನ್ನು ಶುರು ಮಾಡಿದ್ದೀರಿ. ಉನ್ನತ ವ್ಯಾಸಂಗದಲ್ಲಿ ಪ್ರಗತಿಯಿದೆ. ರಾತ್ರಿ ಚೆಂದವಾದ ನಿದ್ದೆಯೂ.
ಕಟಕ : ನೆಚ್ಚಿನವರು ಕಷ್ಟಕ್ಕೆ ಸಿಲುಕಿದ್ದಾರೆ. ಕೈಹಿಡಿದು ಮೇಲೆತ್ತಿ. ದೇವರು ಕೊಟ್ಟಿರೋ ಅನುಕೂಲವನ್ನ ಒಳ್ಳೇದಕ್ಕೆ ಉಪಯೋಗಿಸಿದರೆ ನಾಳೆಯೂ ನಿಮ್ಮದೇ.
ಸಿಂಹ : ಅಡ್ಡದಾರಿಯಲ್ಲೇ ಓಡುವುದರಿಂದ ಗುರಿ ಮುಟ್ಟುವುದು ಸಾಧ್ಯವಿಲ್ಲ . ನಿಮ್ಮಿಬ್ಬರ ನಡುವಿನ ಸಮಸ್ಯೆ ಚರ್ಚೆಯಿಂದಲೇ ಬಗೆ ಹರಿಯಬೇಕು. ಸಮಾಲೋಚನೆಗೆ ನೀವೇ ಏಕೋ ಹಿಂಜರಿಯುತ್ತಿದ್ದೀರಿ.
ಕನ್ಯಾ : ಈ ದಿನ ಯೋಚನೆಗಳನ್ನು ಕಾರ್ಯ ರೂಪಕ್ಕಿಳಿಸುವ ಮುನ್ನ ಸ್ವಲ್ಪ ತಡೆದು ನಡೆಯುವುದೊಳ್ಳೆಯದು. ನಿಮ್ಮ ಪ್ರತಿಯಾಂದು ನಡೆಯನ್ನು ಮೇಲಿನವರು ಗಮನಿಸುತ್ತಿರುವುದರಿಂದ ಮೈಯ್ಯೆಲ್ಲಾ ಕಣ್ಣಾಗಿರಿ.
ತುಲಾ : ಕೆಲಸದ ಜಾಗದಲ್ಲಿ ಹೊಸ ಗೆಳೆಯರನ್ನು ಹುಡುಕಿಕೊಳ್ಳುತ್ತೀರಿ. ನಿಮ್ಮ ಅದ್ಭುತ ಐಡಿಯಾಗಳನ್ನು ಕಾರ್ಯರೂಪಕ್ಕಿಳಿಸಲಿದು ಸಕಾಲ. ಅದು ನಿಮ್ಮ ಆರ್ಥಿಕ ಮುಗ್ಗಟ್ಟನ್ನು ಬಗೆಹರಿಸಲೂ ಸಹಾಯವಾದೀತು.
ವೃಶ್ಚಿಕ : ಆರೋಗ್ಯ ಅಷ್ಟೇನು ಹಿತಕರವಾಗಿಲ್ಲ . ನಿಮ್ಮ ಬರುವಿನ ನಿರೀಕ್ಷೆಯಲ್ಲಿರುವ ಕುಟುಂಬದವರು ಸಹಜವಾಗಿಯೇ ಬೇಸರಗೊಳ್ಳುತ್ತಾರೆ. ಕಚೇರಿಯಲ್ಲಿ ಸಮಯ ತುಂಬಾ ಅಮೂಲ್ಯ ಅನ್ನಿಸುತ್ತದೆ.
ಧನಸ್ಸು :ಯಾವುದೇ ಹೊಸ ವಸ್ತು ಖರೀದಿಸಲು ಇದು ಅಷ್ಟೇನೂ ಒಳ್ಳೆಯ ಸಮಯವಲ್ಲವಾದ್ದರಿಂದ ಉದ್ದೇಶಿತ ಷಾಪಿಂಗ್ ಕೈಬಿಡಿ. ಬದಲಿಗೆ ಸಂಜೆಯ ಸುತ್ತಾಟ ಆಹ್ಲಾದ ತುಂಬುತ್ತದೆ.
ಮಕರ : ವೃತ್ತಿಯಲ್ಲಿ ಸೃಜನಶೀಲತೆ. ಕಚೇರಿಯಲ್ಲಿ ನೀವೇ ಮುಂದು. ಈ ನಡುವೆ ನೀವು ಮುಂದಾದಲ್ಲಿ ಕೊಂಚ ಮನರಂಜನೆಯೂ ಇದೆ, ಸರಿಯಾ.
ಕುಂಭ : ಯಾಂತ್ರಿಕ ಜೀವನದಿಂದ ಬೋರಾಗುತ್ತಿದೆ ಅಂದುಕೊಳ್ಳುತ್ತಿದ್ದೀರಿ. ಈ ವಾರದ ಕೊನೆಗೆ ಅನಿರೀಕ್ಷಿತವಾಗಿ ಕೂಡಿ ಬರುವ ಸುತ್ತಾಟ ನಿಮ್ಮ ಬೇಸರವನ್ನು ಕಳೆಯುತ್ತದೆ.
ಮೀನ : ನಿಮ್ಮ ಹಳೆಯ ಊರಿಗೆ ದರ್ಶನ ಕೊಡುವ ಮುಹೂರ್ತ ಹತ್ತಿರವಾಗುತ್ತಿದೆ. ಈ ದಿನ ಅತಿಥಿ ಸತ್ಕಾರದ ಯೋಗವೂ ಇದೆ. ಆರ್ಥಿಕವಾಗಿ ಅಷ್ಟೇನೂ ಲಾಭದಾಯಕವಲ್ಲದ ದಿನ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications