Get Updates
Get notified of breaking news, exclusive insights, and must-see stories!

ಷಾಕ್‌ ಕೊಟ್ಟ ರಿಸರ್ವ್‌ ಬ್ಯಾಂಕ್‌ : ಬಡ್ಡಿ ದರದಲ್ಲಿ 0.5 ರಷ್ಟು ಕಡಿತ

ಮುಂಬೈ : ಬಜೆಟ್‌ ಮಂಡನೆಗೆ ಇನ್ನು 15 ದಿನ ಬಾಕಿ ಇರುವಂತೆಯೇ ಬ್ಯಾಂಕುಗಳ ಬಡ್ಡಿ ದರ ಹಾಗೂ ನಗದು ಮೀಸಲು ನಿಷ್ಪತ್ತಿ (ಸಿಆರ್‌ಆರ್‌) ಪ್ರಮಾಣ ದಲ್ಲಿ 0.5ರಷ್ಟು ಕಡಿತ ಮಾಡಿರುವ ಆದೇಶವನ್ನು ರಿಸರ್ವ್‌ ಬ್ಯಾಂಕ್‌ ಶುಕ್ರವಾರ ಹೊರಡಿಸಿ ಶಾಕ್‌ ಕೊಟ್ಟಿದೆ.

ಈಗಿರುವ ಬಡ್ಡಿ ದರ ಶೇ. 8ನ್ನು ಶೇ. 7.5ಕ್ಕೆ ಇಳಿಸಲಾಗಿದ್ದು, ಈ ದರ ಶುಕ್ರವಾರದಿಂದಲೇ ಅನ್ವಯವಾಗಲಿದೆ. ಶೇ. 8.5ರಷ್ಟಿರುವ ನಿಷ್ಪತ್ತಿ ದರ ಇನ್ನು ಮುಂದೆ ಶೇ. 8 ಆಗಲಿದೆ. ನಿಷ್ಪತ್ತಿ ದರದ ಕಡಿತ 2 ಹಂತಗಳಲ್ಲಿ ಫೆಬ್ರವರಿ 24 ಹಾಗೂ ಮಾರ್ಚ್‌ 10ರಿಂದ ಜಾರಿಗೆ ಬರಲಿದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

ಸಿಆರ್‌ಆರ್‌ ಕಡಿತದಿಂದ ವಾಣಿಜ್ಯ ಬ್ಯಾಂಕುಗಳಿಗೆ 2050 ಕೋಟಿ ರುಪಾಯಿಯಷ್ಟು ಸಂಪನ್ಮೂಲ ತುಂಬಲಿದೆ. ಡಾಲರ್‌ ವಿರುದ್ಧ ರುಪಾಯಿ ಮೌಲ್ಯ ಕುಸಿತವನ್ನು ತಡೆಗಟ್ಟಲು ಕಳೆದ ವರ್ಷ ಜುಲೈ 21ರಂದು ಬ್ಯಾಂಕ್‌ ಬಡ್ಡಿ ದರವನ್ನು ಶೇ. 1ರಷ್ಟು ಏರಿಸಲಾಗಿತ್ತು. ನಗದು ಮೀಸಲು ನಿಷ್ಪತ್ತಿಯನ್ನೂ ಎರಡು ಹಂತಗಳಲ್ಲಿ ಹೆಚ್ಚಿಸಿದ್ದರಿಂದ ಅದರ ಪ್ರಮಾಣ ಶೇ. 8.5ರಷ್ಟಾಗಿತ್ತು.

ದರಗಳ ಇಳಿಕೆಯನ್ನು ಬ್ಯಾಂಕಿಂಗ್‌ ಉದ್ಯಮ ಸ್ವಾಗತಿಸಿದೆ. ಮಧ್ಯಮ ಹಾಗೂ ದೀಘಾವಧಿಯ ಸರ್ಕಾರಿ ಬಾಂಡ್‌ ದರಗಳ ಮೇಲೆ ಬಡ್ಡಿ ದರ ಕಡಿತ ತಕ್ಷಣವೇ ಪರಿಣಾಮ ಬೀರಲಿದೆ. ಬ್ಯಾಂಕ್‌ಗಳ ಬಡ್ಡಿ ದರ ಕಡಿತದಿಂದ ಜಾಗತಿಕ ಮಟ್ಟದಲ್ಲಿ ಭಾರತ ಉತ್ತಮ ಸ್ಥಿತಿ ತಲುಪಲು ಸಾಧ್ಯವಾಗಲಿದೆ ಎಂದು ಆರ್‌ಬಿಐ ಗವರ್ನರ್‌ ಬಿಮಲ್‌ ಜಲನ್‌ ಅಭಿಪ್ರಾಯ ಪಟ್ಟರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+