Get Updates
Get notified of breaking news, exclusive insights, and must-see stories!

ಮಂಗಳವಾರ ನಡು ರಾತ್ರಿ ಬಾನಂಗಳದಲ್ಲಿ ಚಂದ್ರವಿಲಾಸ

ಬೆಂಗಳೂರು : ಹೊಸ ಕ್ಯಾಲೆಂಡರ್‌ ವರ್ಷದ ಮೊದಲ ಖಗ್ರಾಸ ಚಂದ್ರಗ್ರಹಣ ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ರಾತ್ರಿ 12.06 ಕ್ಕೆ ಪ್ರಾರಂಭವಾಗಿ 03.24 ಕ್ಕೆ ಕೊನೆಗೊಳ್ಳುವುದೆಂದು ಜವಾಹರ್‌ಲಾಲ್‌ ನೆಹರು ತಾರಾಲಯದ ಪ್ರಕಟಣೆ ತಿಳಿಸಿದೆ.

ಮಂಗಳವಾರ ರಾತ್ರಿ ರಾಜ್ಯದಲ್ಲಿ ಸ್ವಚ್ಛ ಆಕಾಶ ಇರುತ್ತದೆಂದು ಹವಾಮಾನ ಇಲಾಖೆಯ ವರದಿಗಳು ತಿಳಿಸಿದ್ದು, ಬಾನಂಗಳದ ಚಂದ್ರವಿಲಾಸ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆಗಳಿವೆ. ಈ ನಡುವೆ ಬೆಂಗಳೂರಿನಲ್ಲಿ ಗ್ರಹಣ ವೀಕ್ಷಣೆಗಾಗಿ ಖಗೋಳ ವಿಜ್ಞಾನಿಗಳು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ.

ಭಾರತ ಮಾತ್ರವಲ್ಲದೆ ಏಷ್ಯಾ, ಆಸ್ಟ್ರೇಲಿಯಾದ ಪಶ್ಚಿಮ ಭಾಗ, ಗ್ರೀನ್‌ಲ್ಯಾಂಡ್‌, ಕೆನಡಾದ ಉತ್ತರಭಾಗ, ಯುರೋಪ್‌, ಆಫ್ರಿಕಾಗಳಲ್ಲೂ ಗ್ರಹಣ ಸ್ಪಷ್ಟವಾಗಿ ಗೋಚರಿಸುವುದು. ಮುಂದಿನ 2 ವರ್ಷಗಳಲ್ಲಿ ಮತ್ತೆರಡು ಖಗ್ರಾಸ ಚಂದ್ರಗ್ರಹಣ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರಸ್ತುತದ ಚಂದ್ರಗ್ರಹಣ ಅಧ್ಯಯನ ದೃಷ್ಟಿಯಿಂದ ಖಗೋಳ ವಿಜ್ಞಾನಿಗಳಿಗೆ ಮಹತ್ವದ್ದೆನಿಸಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+