Get Updates
Get notified of breaking news, exclusive insights, and must-see stories!

ತಿರುವಳ್ಳುವರ್‌ ಪ್ರತಿಮೆ ಅನಾವರಣಕ್ಕೆ ನೆಡುಮಾರನ್‌ ಒತ್ತಾಯ

Nedumaranಬೆಂಗಳೂರು : ನಗರದಲ್ಲಿ ಶೀಘ್ರವೇ ತಿರುವಳ್ಳುವರ್‌ ಪ್ರತಿಮೆ ಅನಾವರಣಗೊಳಿಸುವಂತೆ ಕರ್ನಾಟಕ ಸರ್ಕಾರವನ್ನು ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ಪಿ. ನೆಡುಮಾರನ್‌ ಒತ್ತಾಯಿಸಿದ್ದಾರೆ.

ಭಾನುವಾರ ಕಿಕ್ಕಿರಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಪ್ಪನ್‌ನ ಕೆಲವು ಬೇಡಿಕೆಗಳನ್ನು ಉಭಯ ರಾಜ್ಯ ಸರ್ಕಾರಗಳು ಈಗಾಗಲೇ ಈಡೇರಿಸಿವೆ. ಕರ್ನಾಟಕದಲ್ಲಿ ತಮಿಳಿಗೆ ದ್ವಿತೀಯ ಭಾಷೆಯ ಸ್ಥಾನ ನೀಡುವ ವಿಷಯವನ್ನು ಕರ್ನಾಟಕ ಸರ್ಕಾರ ಇನ್ನೂ ನಿರ್ಧರಿಸಬೇಕಾಗಿದೆ. ತಮಿಳುನಾಡಿನಲ್ಲಿ ಈಗಾಗಲೇ ತೆಲುಗನ್ನು ದ್ವಿತೀಯ ಭಾಷೆಯಾಗಿ ಅಳವಡಿಸಿಕೊಳ್ಳುವ ಸರ್ಕಾರಿ ಆದೇಶವೊಂದು ಹೊರಬಿದ್ದಿದೆ ಎಂದರು.

ವೀರಪ್ಪನ್‌ಗೆ ಕ್ಷಮಾದಾನ ನೀಡಲು ಉಭಯ ರಾಜ್ಯ ಸರ್ಕಾರಗಳು ತಾವಾಗಿಯೇ ಮುಂದೆ ಬಂದಲ್ಲಿ ವೀರಪ್ಪನ್‌ ಶರಣಾಗತಿ ಪ್ರಯತ್ನಗಳನ್ನು ನಡೆಸಲು ತಾವು ಸಿದ್ಧ ಎಂದು ಪುನರುಚ್ಚರಿಸಿದ ನೆಡುಮಾರನ್‌, ಡಕಾಯಿತರ ರಾಣಿ ಪೂಲನ್‌ದೇವಿಗೆ ಭಾರತ ಸರ್ಕಾರ ಕ್ಷಮಾದಾನ ನೀಡಿರುವ ಉದಾಹರಣೆ ನಮ್ಮ ಮುಂದಿರುವಾಗ ವೀರಪ್ಪನ್‌ಗೆ ಕ್ಷಮೆ ನೀಡುವುದನ್ನು ಪರಿಶೀಲಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ನೆಡುಮಾರನ್‌ ಹೇಳಿದ್ದು ...

  • ವೀರಪ್ಪನ್‌ ವಿರುದ್ಧದ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿಲ್ಲ . ರಾಜ್‌ ಅಪಹರಣಕ್ಕೆ ಸಂಬಂಧಿಸಿದಂತೆ ಕೂಡ ಯಾವುದೇ ದಾವೆಯನ್ನು ಪೋಲೀಸರು ದಾಖಲಿಸಿಲ್ಲ
  • ತಮಿಳು ರಾಷ್ಟ್ರೀಯ ಸಂಘಟನೆಗೂ ರಾಜ್‌ಕುಮಾರ್‌ ಅಥವಾ ವೀರಪ್ಪನ್‌ಗೂ ಯಾವುದೇ ಸಂಬಂಧ ಇಲ್ಲ . ತಮಿಳುನಾಡು ಮುಖ್ಯಮಂತ್ರಿಯವರ ಕೋರಿಕೆಯ ಮೇರೆಗೆ ಹಾಗೂ ಮಾನವೀಯತೆ ಆಧಾರದ ಮೇಲೆ ರಾಯಭಾರ ವಹಿಸಿದೆ
  • ಶ್ರೀಲಂಕಾದಲ್ಲಿನ ತಮಿಳರ ಹಿತಾಸಕ್ತಿಗಾಗಿ ಹೋರಾಡುತ್ತಿರುವ ಏಕೈಕ ಸಂಘಟನೆಯಾಗಿರುವುದರಿಂದ ಎಲ್‌ಟಿಟಿಇಯ ಬೆಂಬಲಿಸುತ್ತಿದ್ದೇನೆ
  • ದಕ್ಷಿಣ ಶ್ರೀಲಂಕಾದ ದೊಡ್ಡ ಭಾಗ ಸೇರಿದಂತೆ ವಿಶಾಲ ಈಳಂ ರಚನೆಯ ವಿಷಯ ಎಲ್‌ಟಿಟಿಇ ಅಜೆಂಡಾದಲ್ಲಿ ಇರುವ ವಿಷಯ ಶುದ್ಧ ಸುಳ್ಳು, ಇದು ಎಲ್‌ಟಿಟಿಇ ವಿರುದ್ಧದ ಅಪಪ್ರಚಾರದ ತಂತ್ರ
  • ವೀರಪ್ಪನ್‌ ಶಿಕಾರಿ ವಿಷಯದಲ್ಲಿ ಎಸ್‌ಟಿಎಫ್‌ಗೆ ಸಹಕರಿಸುವುದು ನನ್ನ ಕೆಲಸವಲ್ಲ
  • ಭಾನುವಾರ ನಡೆಯಬೇಕಿದ್ದ ಸನ್ಮಾನ ಕಾರ್ಯಕ್ರಮ ಕನ್ನಡ ಸಂಘಟನೆಗಳ ವಿರೋಧದಿಂದ ರದ್ದಾದ ಬಗ್ಗೆ ವಿಷಾದವೇನಿಲ್ಲ . ಶನಿವಾರದ ಸನ್ಮಾನದಲ್ಲಿ ಅನೇಕ ಕನ್ನಡಿಗರು ಹಾಜರಿದ್ದುದು ಖುಷಿ ತಂದಿದೆ. ರಾಜ್‌ ಅಪಹರಣ ಪ್ರಕರಣ ಉಭಯ ರಾಜ್ಯಗಳ ಸಂಬಂಧ ವೃದ್ಧಿಗೆ ಕಾರಣವಾಯಿತು.
  • ತಮಿಳು ರಾಷ್ಟ್ರೀಯ ಆಂದೋಲನ ಚುನಾವಣಾ ಆಯೋಗದಿಂದ ನೋಂದಾಯಿಸಲ್ಪಟ್ಟ ರಾಜಕೀಯ ಪಕ್ಷವಾಗಿದೆ. ಆದರೆ, ಅದು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ . ಮಾನವೀಯ ಹಕ್ಕುಗಳಿಗಾಗಿ ಹೋರಾಟ ಹಾಗೂ ಮುಗ್ಧರ ಮೇಲಿನ ಹಿಂಸಾಚಾರದ ಪ್ರತಿಭಟನೆ ಆಂದೋಲನದ ಉದ್ದೇಶ. ಎಸ್‌ಟಿಎಫ್‌ ದೌರ್ಜನ್ಯಗಳನ್ನು ಮಾನವ ಹಕ್ಕುಗಳ ಆಯೋಗ ಕಡೆಗಣಿಸಿರುವುದು ವಿಷಾದನೀಯ.
ಮಾನವ ಹಕ್ಕುಗಳ ಕಾರ್ಯಕರ್ತರಾದ ಪ್ರೊ. ಕಲ್ಯಾಣಿ ಹಾಗೂ ಸುಕುಮಾರ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

(ಯುಎನ್‌ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+