ಕಳ್ಳರ ಹಿಡಿಯಲು ಹೊಯ್ಸಳ, ವಿದ್ಯುತ್ ಕಳ್ಳರ ಹಿಡಿಯಲು ಪುಲಿಕೇಶಿ
ಬೆಂಗಳೂರು : ಹಿಂದೆ ವೈಭವದಿಂದ ಕರ್ನಾಟಕ ಸಂಸ್ಥಾನವನ್ನಾಳಿದ ರಾಜರು ಇಂದು ಕಳ್ಳರ ಹಿಡಿಯುವ ಕಾಯಕದಲ್ಲಿ ತೊಡಗಿದ್ದಾರೆ. ಕರ್ನಾಟಕವನ್ನು ಶಿಲ್ಪಕಲೆಯ ತವರನ್ನಾಗಿ ಮಾಡಿದ ಹೊಯ್ಸಳರ ಮೂಲ ಪುರುಷ ಹುಲಿಯನ್ನು ಕೊಂದು ಹೊಯ್ಸಳ ಎನಿಸಿಕೊಂಡ ಸಳ ಇಂದು ಕಳ್ಳರ ಹಿಡಿಯಲು ಬೆಂಗಳೂರೆಲ್ಲಾ ಸಂಚರಿಸುವ ಪೊಲೀಸ್ ವಾಹನವಾಗಿಹ.
ಈಗ ಇದೇ ಮಾದರಿಯಲ್ಲಿ ಕರುನಾಡನ್ನಾಳಿದ ಪುಲಿಕೇಶಿ ವಿದ್ಯುತ್ ಕಳ್ಳರನ್ನು ಹಿಡಿಯುವ ವಾಹನಕ್ಕೆ ಹೆಸರಾಗಿಹ. ಶನಿವಾರ ವಿದ್ಯುತ್ ಕಳವು ಮಾಡುವವರನ್ನು ಪತ್ತೆಹಚ್ಚಲು ನಿಯೋಜಿಸಲಾಗಿರುವ ಪಡೆಗೆ ಹಾಗೂ ಅದಕ್ಕೆ ನೀಡಲಾದ ಟಾಟಾ ಸುಮೋಗೆ ಪುಲಿಕೇಶಿ ಎಂದು ನಾಮಕರಣ ಮಾಡಲಾಗಿದೆ.
ಈ ಪಡೆಯಲ್ಲಿ ಜಾಗೃತ ದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪೊಲೀಸ್ ಇನ್ಸ್‌ಪೆಕ್ಟರ್, ಲೆಕ್ಕಾಧಿಕಾರಿ, ಎಆರ್‌ಎಂ ಸೆಲ್ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಹಾಗೂ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಇರುತ್ತಾರೆ. ಇವರು ವಿದ್ಯುತ್ ಕಳವಿನ ಸುಳಿವು ದೊರೆತೊಡನೆ, ಪುಲಿಕೇಶಿ ವಾಹನದಲ್ಲಿ ತೆರಳಿ, ವಿದ್ಯುತ್ ಕಳವು ಪತ್ತೆ ಹಚ್ಚಿ, ಕಳ್ಳರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಾರೆ.
ಸಂಜಯ್‌ಖಾನ್ ಪ್ರಕರಣದ ಪ್ರೇರಣೆ : ಖ್ಯಾತ ಹಿಂದಿ ಚಲನಚಿತ್ರ ನಟ ಸಂಜಯ್ ಖಾನ್ ಅವರು ಬೆಂಗಳೂರಿನ ಹೊರ ವಲಯದ ನರಗೂರು ಬಳಿ ಹೊಂದಿರುವ ರೆಸಾರ್ಟ್ ನಿರ್ಮಾಣ ಕಾಲದಲ್ಲಿ ಸುಮಾರು 37 ಲಕ್ಷ ರುಪಾಯಿ ಮೌಲ್ಯದ ವಿದ್ಯುತ್ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಈಗ ರಚಿಸಲಾಗಿರುವ ಪುಲಿಕೇಶಿ ಪಡೆಗೆ ಈ ಪ್ರಕರಣವೇ ಪ್ರೇರಣೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮುಂದೆ ಇಂತಹ ವಿದ್ಯುತ್ ಕಳವು ಪ್ರಕರಣಗಳು ಜರುಗದಂತೆ ಈ ಪಡೆ ಎಚ್ಚರ ವಹಿಸುತ್ತದೆ. ಈ ಪಡೆಗೆ ಆಪಾದಿತರನ್ನು ಬಂದಿಸಲೂ ಅಧಿಕಾರ ನೀಡಲಾಗಿದೆ. ಈ ವಿಷಯವನ್ನು ವಿದ್ಯುತ್ ಖಾತೆ ರಾಜ್ಯ ಸಚಿವ ವೀರಕುಮಾರ ಪಾಟೀಲ್ ತಿಳಿಸಿದ್ದಾರೆ. ಶನಿವಾರ ಅವರು ಪುಲಿಕೇಶಿ ಪಡೆಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭಲ್ಲಿ ಕೆಪಿಟಿಸಿಎಲ್ ಅಧ್ಯಕ್ಷ ವಿ.ಪಿ. ಬಾಳಿಗಾರ್ ಹಾಜರಿದ್ದರು.
ಪ್ರತಿ ವಲಯಕ್ಕೂ ಒಂದು ವಾಹನ : ವಿದ್ಯುತ್ ನಿಗಮದ ಪ್ರತಿ ವಲಯಕ್ಕೂ ಒಂದು ಪುಲಿಕೇಶಿ ವಾಹನ ನೀಡಲಾಗುತ್ತಿದ್ದು, ಹಾಲಿ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ವಲಯಕ್ಕೆ ವಾಹನ ಒದಗಿಸಲಾಗಿದೆ. ಜನವರಿ ಅಂತ್ಯದೊಳಗೆ ಎಲ್ಲ ವೃತ್ತಗಳಿಗೂ ವಾಹನ ಒದಗಿಸುವ ಉದ್ದೇಶ ಇದೆ. ಪ್ರಸಕ್ತ ರಾಜ್ಯದಲ್ಲಿ ಪ್ರತಿಶತ 10.5ರಷ್ಟು ವಿದ್ಯುತ್ ಸೋರಿಕೆ ಆಗುತ್ತಿದೆ.
ನಾಗರಿಕರಲ್ಲಿ ಮನವಿ : ನಾಗರಿಕರಿಗೆ ಯಾವುದೇ ವ್ಯಕ್ತಿ ವಿದ್ಯುತ್ ಕಳವು ಮಾಡುತ್ತಿರುವ ಬಗ್ಗೆ ಸುಳಿವು ದೊರೆತರೆ ಕೂಡಲೇ 9845035902, 9845041843, 9845033091 ದೂರವಾಣಿಗಳಿಗೆ ಫೋನ್ ಮಾಡಿ ದೂರು ಸಲ್ಲಿಸಲು ಕೋರಲಾಗಿದೆ. ವಿದ್ಯುತ್ ಕಳವು ಪ್ರಕರಣಗಳಲ್ಲಿ ಇಲಾಖೆಯ ನೌಕರರು ಭಾಗಿಗಳಾಗಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ನಿಗಮದ ಅಧ್ಯಕ್ಷರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications