ಚಿತ್ತಾಪುರ: ಜನರಿಂದಲೇ ಮಂತ್ರವಾದಿಯ ಬಂಧನ
ಚಿತ್ತಾಪುರ: ಬಾನಾಮತಿ ಮಾಡಿ ಜನರನ್ನು ಪೀಡಿಸುತ್ತಿದ್ದ ಮಾಂತ್ರಿಕನೊಬ್ಬನನ್ನು ಊರಿನ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಪ್ರಕರಣ ಇಲ್ಲಿಗೆ ಸಮೀಪದ ಮರಗೊಳದಿಂದ ವರದಿಯಾಗಿದೆ.
ಆದಪ್ಪ ಎಂಬ ಮಾಂತ್ರಿಕನು ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ಮನೆಯ ಮಾಳಿಗೆಯ ಮೇಲೆ ಕುಳಿತು ಮಾಟಾ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇದೇ ಗ್ರಾಮದ ಮಹಿಳೆಯಾಬ್ಬರಿಗೆ ಮಾಟ ಮಾಡಿ ಕೈಕಾಲು ಸ್ವಾಧೀನ ಇಲ್ಲದ ರೀತಿ ಮಾಡಿದ್ದ ಎಂದೂ ಆರೋಪಿಸಲಾಗಿದೆ.
ಗ್ರಾಮದಲ್ಲಿ ಹಲವಾರು ಕುರಿಗಳು, ದನಕರುಗಳು ಮರಣ ಹೊಂದಿದ್ದು, ಇದಕ್ಕೆ ಮಾಂತ್ರಿಕನೇ ಕಾರಣ ಎಂಬುದು ಊರಿನವರ ಆರೋಪ. ಯಾದಗಿರಿ ತಾಲೂಕಿನವನಾದ ಮಾಂತ್ರಿಕನು ಬಳಸುತ್ತಿದ್ದ ತಲೆ ಬುರುಡೆಗಳು, ಖಡ್ಗ, ದೇವರ ಫೋಟೋ, ಮಂತ್ರದ ಪುಸ್ತಕಗಳು, ಓಲೆ ಗರಿಗಳು, ಮಣ್ಣಿನ ಬೊಂಬೆಗಳು, ನಿಂಬೇ ಹಣ್ಣುಗಳು ಹಾಗೂ ಸೂಜಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾನು ಆನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಪರವಾಗಿ ಪೂಜೆ ಮಾಡುತ್ತಿದ್ದೆನೇ ವಿನಾ ಮಾಟ ಮಾಡುತ್ತಿರಲಿಲ್ಲ ಎಂದು ಮಾಂತ್ರಿಕ ಹೇಳಿಕೆ ನೀಡಿದ್ದಾನೆ. ಆದರೆ, ಇದನ್ನು ನಂಬದ ಊರಿನ ಜನರು, ಮಂತ್ರವಾದಿ ಬಳಸುತ್ತಿದ್ದ ವಸ್ತುಗಳನ್ನು ಮಂತ್ರವಾದಿಯ ತಲೆಯ ಮೇಲೆ ಹೊರಿಸಿಕೊಂಡು ಚಿತ್ತಾಪುರ ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಿದ್ದಾರೆ. ದೂರೂ ದಾಖಲಿಸಿದ್ದಾರೆ. ಈಗ ಈ ಮಂತ್ರವಾದಿಯನ್ನು ಗುಲ್ಬರ್ಗಾ ಕಾರಾಗೃಹದಲ್ಲಿರಿಸಲಾಗಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications