‘ಇನ್ಫೋ ವರ್ಷದ ವ್ಯಕ್ತಿ’-ಚಞಟ ಎಸ್.ಎಂ.ಕೃಷ್ಣ ಮುಂದು
ಇನ್ಫೋ ‘ವರ್ಷದ ವ್ಯಕ್ತಿ ನನ್ನ ಆಯ್ಕೆ’ಯ ಅಂತಿಮ ಹಂತ ಸಮೀಪಿಸುತ್ತಿದ್ದು, ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮುಂದಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಬೆನ್ನಲ್ಲಿದ್ದಾರೆ.
ವರ್ಷದ ತುದಿಯಲ್ಲಿ ನಿಂತು ಕೃಷ್ಣಾಡಳಿತದತ್ತ ಕಿರುನೋಟ......
ಆಲಮಟ್ಟಿ ಅಣೆಕಟ್ಟೆ ಎತ್ತರ, ಹುಬ್ಬಳ್ಳಿ ಹೈಕೋರ್ಟ್ ಪೀಠ ಸ್ಥಾಪನೆ ಕಿರಿಕಿರಿ, ಚರ್ಚ್ ಬಾಂಬ್ ಸ್ಫೋಟ ಪ್ರಕರಣ - ಒಂದರ ಹಿಂದೊಂದರಂತೆ ಎರಗಿದ ಈ ಸಮಸ್ಯೆಗಳನ್ನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಹೀಗೂ ನಿಭಾಯಿಸಿ ನಿಟ್ಟುಸಿರು ಬಿಡುವಷ್ಟರಲ್ಲಿ ಧುತ್ತೆಂದು ರಾಜ್ ಅಪಹರಣವಾಯಿತು.
ಇವುಗಳ ಮಧ್ಯೆಯೇ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿದ ಕೃಷ್ಣ , ಬೊಗಸೆ ತುಂಬ ಯೋಜನೆಗಳನ್ನು ಸ್ವದೇಶೀ/ವಿದೇಶೀ ಕಂಪನಿಗಳಿಗೆ ಹಂಚಿ ಬಿಟ್ಟರು. ಯೋಜನೆಗಳು ಇನ್ನೂ ಕಾಗದದ ಮೇಲಿವೆಯಷ್ಟೇ ಅನ್ನೋದು ಬೇರೆ ಮಾತು. ರಾಜ್ ಅಪಹರಣದ ಸಂದರ್ಭದಲ್ಲೇ ಜಪಾನಿನ ಪ್ರಧಾನಿ ಯಾಶಿರೋ ಮೋರಿ ಭೇಟಿ, ಪ್ರಸಿದ್ಧ ಜಿ.ಇ. ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರ ಬೆಂಗಳೂರು ಭೇಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೃಷ್ಣ ವರ್ಚಸ್ಸನ್ನು ಹೆಚ್ಚಿಸಿತು. ವಿಶ್ವ ನಕಾಶೆಯಲ್ಲಿ ಬೆಂಗಳೂರು ಎದ್ದು ಕಾಣಿಸಿಕೊಂಡಿತು.
ಮಾಹಿತಿ ತಂತ್ರಜ್ಞಾನದ ಲೋಲುಪತೆಯ ಹೈಟೆಕ್ ಮುಖ್ಯಮಂತ್ರಿ ಕಣ್ಣಿಗೆ ರೈತರೇ ಕಾಣ ಬೀಳುವುದಿಲ್ಲ ಎಂಬ ಟೀಕಾ ಪ್ರಹಾರಕ್ಕೆ ತಕ್ಕಂತೆ ಕರ್ನಾಟಕದಲ್ಲಿ ಭತ್ತ, ಮೆಕ್ಕೆಜೋಳ, ಆಲೂಗಡ್ಡೆ ಬೆಂಬಲ ಬೆಲೆ ಪಾತಾಳ ಮುಟ್ಟಿದೆ. ಈಗ ಕೃಷ್ಣ ಮುಂದಿರುವ ಇನ್ನೊಂದು ಸವಾಲು ಇದು. ಕಂಪ್ಯೂಟರ್ ಒಡನಾಟದಲ್ಲೇ ಶಾಂತ ರೀತಿಯಲ್ಲಿ ಶುರುವಾದ ಕೃಷ್ಣಾಡಳಿತದ ಮೇಲೆ ನಂತರ ‘ಅವೆಲಾಂಚ್’ ಎರಗಿತು. ಎಲ್ಲಾ ವಿಷಯಗಳೂ ಬೇಲಿ ಮೇಲೆ ಬಿದ್ದ ಬಟ್ಟೆ ಎತ್ತುವಷ್ಟೇ ಸೂಕ್ಷ್ಮ.
ವರ್ಷ ಕಾಲದ ತಮ್ಮ ಆಡಳಿತದ ‘ಟೂ ಅಂಡ್ ಫ್ರೋ’ಗಳಲ್ಲಿ ಹೆಚ್ಚು ಫ್ರೋಗಳನ್ನೇ ಎದುರಿಸಿದ ಕೃಷ್ಣ ಅವರ ಐಟಿ ಪ್ರೇಮ, ಕಾಮನ್ ಸೆನ್ಸ್, ವಿಭಿನ್ನ ವ್ಯಕ್ತಿತ್ವ, ಕ್ರಿಯಾಶೀಲ ಚಿಂತನೆ, ಬೆಂಗಳೂರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಸ್ಥಾನ ಕೊಟ್ಟದ್ದು, ರಾಜ್ ಬಿಡುಗಡೆ ಮಾಡಿಸಿದ್ದು (?) ಕನ್ನಡ ಇನ್ಫೋ ಓದುಗರಿಗೆ ಹಿಡಿಸಿದೆ. ಕರ್ನಾಟಕ ಈವರೆಗೆ ಕಂಡಿರದ ಮುಖ್ಯಮಂತ್ರಿ ಕೃಷ್ಣ ಎಂಬುದು ಓದುಗರ ಅಭಿಪ್ರಾಯ. ಈವರೆಗೆ ಹರಿದು ಬಂದಿರುವ ವರ್ಷದ ವ್ಯಕ್ತಿಗಳ ಆಯ್ಕೆಯಲ್ಲಿ ಕೃಷ್ಣ ಮುಂದಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಎರಡನೇ ಸ್ಥಾನದಲ್ಲಿದ್ದು, ಇವರಿಗೆ ಅಷ್ಟೇನೂ ತುರುಸೆನ್ನುವಂಥ ಸ್ಪರ್ಧೆ ನೀಡುತ್ತಿಲ್ಲ. ಉಳಿದಂತೆ ಅಜೀಂ ಪ್ರೇಂಜಿ ಹಾಗೂ ಮೊನ್ನೆ ನಿಧನರಾದ ಧೀರೇಂದ್ರ ಗೋಪಾಲ್ ಅವರಿಗೆ ಕೆಲವು ಮತಗಳು ಸಿಕ್ಕಿವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಎನ್ನುವಂತೆ ವರನಟ ರಾಜ್ ಅವರಿಗೆ ಬೆರಳೆೆಣಿಕೆಯಷ್ಟು ಮತಗಳು ಸಂದಿವೆ.
ಜನವರಿ 2ನೇ ತಾರೀಖು ಕರ್ನಾಟಕದ ವರ್ಷದ ವ್ಯಕ್ತಿ ಯಾರೆಂಬುದನ್ನು ಇನ್ಫೋ ಪ್ರಕಟಿಸಲಿದೆ. ನೀವಿನ್ನೂ ಮತ ಹಾಕಿಲ್ಲವೆ? ಹಾಗಿದ್ದರೆ ಹರಿ ಅಪ್.
| ವರ್ಷದ ವ್ಯಕ್ತಿ - ನನ್ನ ಆಯ್ಕೆ |
| ಮತ ಹಾಕಿ |
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications