ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ 36 ಹೊಸ ಎಂಜಿನಿಯರಿಂಗ್‌ ಕಾಲೇಜುಗಳಸ್ಥಾಪನೆಗೆ ಒಪ್ಪಿಗೆ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕದಲ್ಲಿ 36 ಹೊಸ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ರಾಜ್ಯ ಮಂತ್ರಿಮಂಡಲ ಶುಕ್ರವಾರ ಒಪ್ಪಿಗೆ ನೀಡಿದೆ.

ಬರಲಿರುವ ಶೈಕ್ಷಣಿಕ ವರ್ಷದಿಂದಲೇ ಹೊಸ ಎಂಜನಿಯರಿಂಗ್‌ ಕಾಲೇಜುಗಳು ಕಾರ್ಯ ನಿರ್ವಹಿಸಲಿವೆ. ಶುಕ್ರವಾರ ನಡೆದ ಮಂತ್ರಿ ಪರಿಷತ್‌ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ವಾರ್ತಾ ಸಚಿವ ಪ್ರೊ.ಬಿ.ಕೆ. ಚಂದ್ರೇಶೇಖರ್‌ ಹೇಳಿದರು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿ (ಎಐಸಿಟಿಇ) ಯ ಅನುಮತಿ ಪಡೆದು, ವಿಶ್ವ ವಿದ್ಯಾಲಯದ ‘ಯಾವುದೇ ಆಕ್ಷೇಪಣೆ ಇಲ್ಲ’ (ಎನ್‌ಓಸಿ) ಎಂಬ ಪತ್ರ ಪಡೆಯುವ ಯಾರೇ ಹೊಸ ಕಾಲೇಜು ಸ್ಥಾಪಿಸಲು ಸರ್ಕಾರವನ್ನು ಕೋರಿದಲ್ಲಿ, ಇನ್ನು ಮುಂದೆ ಅನುಮತಿ ದೊರೆಯಲಿದೆ ಎಂದು ಸಚಿವರು ತಿಳಿಸಿದರು.

ಈ ಹೊಸ 36 ಕಾಲೇಜುಗಳ ಸ್ಥಾಪನೆಯಿಂದ ಇನ್ನೂ 7960 ಎಂಜಿನಿಯರಿಂಗ್‌ ಸೀಟುಗಳು ಲಭ್ಯವಾಗಲಿವೆ. ಪ್ರಸ್ತುತ ಇರುವ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮಾಹಿತಿ ತಂತ್ರಜ್ಞಾನದ ಹೊಸ ಕೋರ್ಸನ್ನು ಪರಿಚಯಿಸಿದ ಕಾರಣ 2260 ಸೀಟುಗಳು ಹೆಚ್ಚಾಗಿವೆ. ಹೊಸ ಕಾಲೇಜುಗಳ ಸ್ಥಾಪನೆಗೆ ಒಟ್ಟು 72 ಅರ್ಜಿಗಳು ಬಂದಿದ್ದವು. ಅವುಗಳ ಪೈಕಿ 25 ಬೆಂಗಳೂರಿನ ಸುತ್ತಮುತ್ತ ಕಾಲೇಜು ಸ್ಥಾಪನೆಯ ಪ್ರಸ್ತಾವನೆ ಇಟ್ಟಿದ್ದವು. ಈಗ ಅನುಮತಿ ನೀಡಲಾಗಿರುವ ಕಾಲೇಜುಗಳು ಎಐಸಿಟಿಇ ಷರತ್ತುಗಳನ್ನು ಪೂರೈಸಿವೆ ಎಂದರು.

ಕರ್ನಾಟಕದಲ್ಲಿ ಪ್ರಸ್ತುತ 80 ಎಂಜಿನಿಯರಿಂಗ್‌ ಕಾಲೇಜುಗಳು, 199 ಡಿಪ್ಲೊಮಾ ಕಾಲೇಜುಗಳು, 68 ಎಂ.ಸಿ.ಎ ಹಾಗೂ 61 ಎಂ.ಬಿ.ಎ ಕಾಲೇಜುಗಳಿವೆ. ಆದರೆ ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಗೆ ಹೋಲಿಸಿದಲ್ಲಿ ನಮ್ಮ ರಾಜ್ಯದ ಕಾಲೇಜುಗಳ ಸಂಖ್ಯೆ ಕಡಿಮೆಯೇ ಎಂದು ಅಂಕಿಅಂಶಗಳೊಡನೆ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X