ತ್ಯಾಗರಾಜನಗರದಲ್ಲಿ ನಾಳೆ- ನಾಡಿದ್ದು ಹಾಲು ಕರೆಯೋ ಸ್ಪರ್ಧೆ !
ಬೆಂಗಳೂರು : ದಿನ ನಿತ್ಯ ಹಾಲು ಕರೆಯೋದು, ಡೈರಿ- ವರ್ತನೆ ಅಂತ ಹಂಚಿ, ಹೊಟ್ಟೆ ಹೊರೆಯೋದು. ಮುಂಜಾನೆ ಹಾಗೂ ಸಂಜೆ ಇದು ತಪ್ಪುವಂತೆಯೇ ಇಲ್ಲ. ಊರಿಗ್ಹೋದರೂ ಹಾಲು ಕರೆಯೋ ಹೊತ್ತಿಗೆ ಸರಿಯಾಗಿ ಹಾಜರಾಗಬೇಕು. ಕೆಲವು ಹಸುಗಳೋ ಕರೆಯೋ ಕೈಗಳು ಬದಲಾದರೆ ಸುತರಾಂ ಹಾಲು ಕೊಡವು. ಈ ದಿನಚರಿಯಲ್ಲೇ ಕಳೆದುಹೊಗಿರುವ ಜನರಿಗೊಂದು ವಿಶೇಷ ಸ್ಪರ್ಧೆ. ಅದು ಯಾವುದೋ ಅಥ್ಲೆಟಿಕ್ಕೋ, ಪ್ರಬಂಧ ಬರೆಯೋದೋ ಅಲ್ಲ. ಹಾಲು ಕರೆಯುವುದೇ !
ವರುಷದ ಅಂಚಿನಲ್ಲಿ ನಿಂತು ಒಂದಿಷ್ಟು ಮಜಾ ಅನುಭವಿಸಿ, ಹೊಸ ವರ್ಷ ಬರಮಾಡಿಕೊಳ್ಳೋ ಉತ್ಸಾಹ ಏನೆಲ್ಲಾ ಆಟಗಳನ್ನು ನಡೆಸುತ್ತಿದೆ. ಶನಿವಾರ (ಡಿ.30) ಹಾಗೂ ಭಾನುವಾರ (ಡಿ.31) ಇಂಥ ಒಂದು ವಿಭಿನ್ನ ಮಜಾ ನಡೆಯಲಿದೆ. ನೋಡಸೇರುವ ಮಂದಿಯಲ್ಲಿ ನೀವೂ ಒಬ್ಬರಾಗಬಹುದು. ಎರಡೂ ದಿನ ಮುಂಜಾನೆ 6.30 ಹಾಗೂ ಸಂಜೆ 5.30ಕ್ಕೆ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ; ತ್ಯಾಗರಾಜ ನಗರದ ಹತ್ತಿರದ ನಾಗಸಂದ್ರದ ಮಹಾನಗರ ಪಾಲಿಕೆ ಮೈದಾನದಲ್ಲಿ.
ಬಹುಮಾನದ ಮೊತ್ತ ಕೇಳಿ ಕಣ್ಣ ರೆಪ್ಪೆಗಳು ಒಂದರಿಂದೊಂದು ಇನ್ನಷ್ಟು ದೂರ ಸರಿದಾವು. ಮೊದಲ ಬಹುಮಾನ 20,001 ರುಪಾಯಿ. 2ನೇ ಬಹುಮಾನ 15,001 ರು. 3ನೇ ಬಹುಮಾನ 10,000 ಹಾಗೂ 4ನೇ ಬಹುಮಾನ 5 ಸಾವಿರ ರುಪಾಯಿ ! ನೆಚ್ಚಿದ ಹಸುಗಳು ಹಾಲು ಕರೆಯಲಿ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications