Get Updates
Get notified of breaking news, exclusive insights, and must-see stories!

ಬೆಂಗಳೂರು ಟೆಲಿಕಾಂನಿಂದ ಶೀಘ್ರದಲ್ಲೇ ಇಂಟರ್‌ನೆಟ್‌ ಸೇವೆ

ಬೆಂಗಳೂರು : ಬೆಂಗಳೂರು ಟೆಲಿಫೋನ್‌ ಘಟಕದ ರಾಷ್ಟ್ರೀಯ ಇಂಟರ್‌ನೆಟ್‌ ಜಾಲ ಅತಿ ಶೀಘ್ರದಲ್ಲೇ ತನ್ನ ವಾಣಿಜ್ಯ ಸೇವೆಯನ್ನು ಆರಂಭಿಸಲಿದೆ. ಇಂಟರ್‌ನೆಟ್‌ ಜಾಲದ ಆಧಾರ ಸ್ತಂಭದ ತಾಂತ್ರಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣವಾಗಿದ್ದು ಆದಷ್ಟು ಬೇಗ ಜಾಲವನ್ನು ವಾಣಿಜ್ಯ ಉದ್ದೇಶಕ್ಕೆ ಮುಕ್ತಗೊಳಿಸಲಾಗುವುದು ಎಂದು ಬೆಂಗಳೂರು ಟೆಲಿಕಾಂನ ಪ್ರಿನ್ಸಿಪಲ್‌ ಜನರಲ್‌ ಮ್ಯಾನೇಜರ್‌ ಕೆ. ಪದ್ಮನಾಭನ್‌ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ವಿಶ್ವದಲ್ಲಿ ತನ್ನ ತನದೊಂದಿಗೆ ಹೊರಹೊಮ್ಮುತ್ತಿರುವ ಬೆಂಗಳೂರು ಟೆಲಿಕಾಂ ಸಂಸ್ಥೆಯು ಮುಂದಿನ ವರ್ಷ ಸೆಲ್ಯುಲರ್‌ ಮೊಬೈಲ್‌ ಫೋನ್‌ ಸೇವೆಯನ್ನೂ ಆರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೇಡಿಕೆ ಬಂದೊಡನೆಯೇ ದೂರವಾಣಿ ಸಂಪರ್ಕ ಒದಗಿಸಲು ಸಕಲ ಪ್ರಯತ್ನಗಳೂ ಮುಂದುವರಿದಿದ್ದು, ಮುಂದಿನ ವರ್ಷ ಏಪ್ರಿಲ್‌ನಿಂದ ಇದು ಸಾಧ್ಯವಾಗುತ್ತದೆ ಎಂಬ ಆಶಾಭಾವನೆಯನ್ನೂ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 1ಲಕ್ಷ 25 ಸಾವಿರ ಹೊಸ ದೂರವಾಣಿ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. (ಯು.ಎನ್‌.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+