Get Updates
Get notified of breaking news, exclusive insights, and must-see stories!

ಬೆಂಗಳೂರಿಗರೇ, ಹೊಸ ಟೆಲಿಫೋನ್‌ ಡೈರೆಕ್ಟರಿ ಬಿಡುಗಡೆಯಾಗಿದೆ

ಬೆಂಗಳೂರು : 2000ನೇ ವರ್ಷದ 2 ಸಂಚಿಕೆಗಳ ದೂರವಾಣಿ ನಿರ್ದೇಶಿಕೆಯನ್ನು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಶುಕ್ರವಾರ ಬಿಡುಗಡೆ ಮಾಡಿದರು.

ಇದೇ ಪ್ರಥಮ ಬಾರಿಗೆ ಗೃಹ ಹಾಗೂ ವಾಣಿಜ್ಯ ಸಂಸ್ಥೆಗಳ ದೂರವಾಣಿ ಸಂಖ್ಯೆಗಳನ್ನು ಪ್ರತ್ಯೇಕ ಸಂಚಿಕೆಗಳಲ್ಲಿ ಗೆಟಿಟ್‌ ಯಲ್ಲೋ ಪೇಜಸ್‌ ಮುದ್ರಿಸಿದೆ. ಮೊದಲ ಸಂಚಿಕೆಯಲ್ಲಿ ಗೃಹ ದೂರವಾಣಿ ಸಂಖ್ಯೆಗಳನ್ನು ನಗರ, ಗ್ರಾಮಾಂತರ ಮುಂತಾಗಿ ವಿಂಗಡಿಸಲಾಗಿದೆ. ಬದಲಾಗಿರುವ ದೂರವಾಣಿ ಸಂಖ್ಯೆಗಳನ್ನೂ ನಮೂದಿಸಲಾಗಿದೆ. 2ನೇ ಸಂಚಿಕೆಯಲ್ಲಿ ವಾಣಿಜ್ಯ- ವ್ಯಾಪಾರಿ ಸಂಸ್ಥೆಗಳ ದೂರವಾಣಿ ಸಂಖ್ಯೆಗಳು ಹಾಗೂ ಯೆಲ್ಲೋ ಪೇಜಸ್‌ ಇವೆ. 2800 ವಿಭಾಗಗಳಲ್ಲಿ ಸುಮಾರು 46 ಸಾವಿರ ಸಂಸ್ಥೆಗಳ ದೂರವಾಣಿ ಸಂಖ್ಯೆಗಳನ್ನು ಎಲ್ಲೋ ಪೇಜಸ್‌ ಒಳಗೊಂಡಿವೆ.

ಕಳೆದ 12 ವರ್ಷಗಳಿಂದ ಸುಧಾರಣೆ ಸಹಿತ ದೂರವಾಣಿ ನಿರ್ದೇಶಿಕೆಗಳನ್ನು ಮುದ್ರಿಸುತ್ತಾ ಬಂದಿರುವ ಗೆಟಿಟ್‌ ಯೆಲ್ಲೋ ಪೇಜಸ್‌ಅನ್ನು ಮುಖ್ಯಮಂತ್ರಿ ಕೃಷ್ಣ ಶ್ಲಾಘಿಸಿದರು.

ಯೆಲ್ಲೋ ಪೇಜಸ್‌ ತಂತ್ರವನ್ನು ಭಾರತದಲ್ಲಿ ಪ್ರಥಮ ಬಾರಿಗೆ ರೂಢಿಗೆ ತಂದದ್ದೇ ಗೆಟಿಟ್‌ ಯೆಲ್ಲೋ ಪೇಜಸ್‌. ಚೆನ್ನೈನ ಪ್ರತ್ಯೇಕ ಕಚೇರಿ ದೂರವಾಣಿ ನಿರ್ದೇಶಿಕೆಯನ್ನೂ ಮೊದಲ ಬಾರಿಗೆ ಇದೇ ಸಂಸ್ಥೆ 1997ರಲ್ಲಿ ಮುದ್ರಿಸಿತು. ಕೊಯಮತ್ತೂರು, ಎರ್ನಾಕುಲಂ, ಮೈಸೂರು, ದಕ್ಷಿಣ ಕನ್ನಡ, ವೆಲ್ಲೂರ್‌, ಜೈಪುರ, ತಿರುಪತಿ, ತಿರುನೆಲ್‌ವೇಲಿ, ಹಾಸನ, ಮಂಡ್ಯ ಮತ್ತು ಉತ್ತರ ಕನ್ನಡ ದೂರವಾಣ ನಿರ್ದೇಶಿಕೆಗಳ ಅಧಿಕೃತ ಪ್ರಕಾಶಕ ಸಂಸ್ಥೆ ಗೆಟಿಟ್‌ ಯೆಲ್ಲೋ ಪೇಜಸ್‌.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+