ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ನಿನ ‘ಚಾನೆಲ್‌ 4’ರಲ್ಲಿ ಮಹಾಕುಂಭ ಮೇಳ ದ ನೇರ ಪ್ರಸಾರ

By Staff
|
Google Oneindia Kannada News

*ಶ್ಯಾಮ್‌ ಭಾಟಿಯಾ

ಲಂಡನ್‌ : ಮುಂದಿನ ವರ್ಷ ಜನವರಿ 6ರಿಂದ ಭಾರತದ ಅಲಹಾಬಾದಿನಲ್ಲಿ ನಡೆಯಲಿರುವ ಜನಪ್ರಿಯ ಮಹಾ ಕುಂಭ ಮೇಳವನ್ನು ಬ್ರಿಟನ್ನಿನ ಧಾರ್ಮಿಕ ವ್ಯವಹಾರಗಳ ಇಲಾಖೆಯ ಚಾನೆಲ್‌ ಫೋರ್‌ ಟಿವಿ ಚಾನೆಲ್‌ ನೇರ ಪ್ರಸಾರ ಮಾಡಲಿದೆ.

ಗಂಗಾ, ಯಮುನ ಹಾಗೂ ಸರಸ್ವತಿ ನದಿಗಳ ಸಂಗಮದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳಕ್ಕೆ ಸುಮಾರು ಒಂದೂವರೆ ಕೋಟಿ ಜನ ಆಗಮಿಸುವ ನಿರೀಕ್ಷೆಯಿದೆ. ಈ ಮೂರೂ ನದಿಗಳ ಸಂಗಮ, ಸ್ವರ್ಗದಿಂದ ಧರೆಗಿಳಿದ ಸಾಕ್ಷಾತ್‌ ಅಮೃತ ಎಂಬುದು ಸಂಪ್ರದಾಯಸ್ಥ ಹಿಂದೂಗಳ ನಂಬುಗೆ.

ಪುಣ್ಯಾಹ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ಇಲ್ಲಿ ನಡೆಯುತ್ತವೆ. ಜೊತೆಗೆ ಪ್ರತಿ 144 ವರ್ಷಗಳಿಗೊಮ್ಮೆ ನಕ್ಷತ್ರಗಳು ಸ್ಥಾನ ಪಲ್ಲಟಗೊಳ್ಳಲಿದ್ದು, ಬರುವ ವರ್ಷ ಈ ಶುಭ ಸಂದರ್ಭವೂ ಇರುವುದರಿಂದ ಭಕ್ತಾದಿಗಳ ಸಂಖ್ಯೆ ಹಿಂದೆಂದಿನ ಮಹಾ ಕುಂಭ ಮೇಳಕ್ಕಿಂತಲೂ ಹೆಚ್ಚಿರುತ್ತದೆ ಎನ್ನಲಾಗಿದೆ.

ಕುಂಭ ಮೇಳ ಕುರಿತ ಒಂದು ಗಂಟೆಯ ಸಾಕ್ಷ್ಯಚಿತ್ರವನ್ನು ಚಾನೆಲ್‌ ಫೋರ್‌ ಬರುವ ಶನಿವಾರ (ಸ್ಥಳೀಯ ಕಾಲಮಾನ ಸಂಜೆ 7ಕ್ಕೆ ) ಪ್ರಸಾರ ಮಾಡಲಿದೆ. ಇದರ ಜೊತೆಗೆ ಮೇಳದ ನಿತ್ಯ ಸಿದ್ಧತೆಗಳನ್ನು ಪ್ರತಿ ಬುಧವಾರ ಪ್ರಸಾರ ಮಾಡಲಿದ್ದು, ಕುಂಭ ಮೇಳ ಮುಗಿವವರೆಗೆ ಈ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡಬಹುದಾಗಿದೆ ಎಂದು ಚಾನೆಲ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ.

ಕೇವಲ ಜನರ ನೂಕುನುಗ್ಗಲು, ಗಂಗಾ ಸ್ನಾನ ಇವನ್ನಷ್ಟೇ ಚಾನೆಲ್‌ ತೋರುವುದಿಲ್ಲ. ಪಹರೆಯ ಉಸ್ತುವಾರಿ ವಹಿಸಿರುವ ಪೊಲೀಸನಿಂದ ಹಿಡಿದು, ದೇಶದ ಯಾವುದೋ ಮೂಲೆಯಿಂದ ಬಂದ 92 ವರ್ಷದ ಹಣ್ಣು ಮುದುಕನ ಅನುಭವ, ಆಶೋತ್ತರ, ಬೇಡಿಕೆಗಳನ್ನೂ ನಾವು ತೋರಲಿದ್ದೇವೆ ಎನ್ನುತ್ತಾರೆ ಚಾನೆಲ್‌ನ ವಕ್ತಾರ.

ಕಾರ್ಯಕ್ರಮದ ಸಂಪಾದಕತ್ವದ ಹೊಣೆ ಹೊತ್ತಿರುವ ಎಲಿಜಬೆತ್‌ ಕ್ಲಾಫ್‌ ಹೀಗೆನ್ನುತ್ತಾರೆ- ಇಂಥ ಅಪರೂಪ ಹಾಗೂ ಆಕರ್ಷಕ ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸುವಲ್ಲಿ ನಾವು ರೇಡಿಯೋ ರೀತಿಯ ಕೆಲಸ ಮಾಡಬೇಕಾಗುತ್ತದೆ. ಅದನ್ನು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮದಂತೆ ತೋರದೆ, ಎಲ್ಲಾ ವರ್ಗಗಳನ್ನೂ ತಟ್ಟುವ ಒಂದು ರೋಡ್‌ ಷೋದಂತೆ ಪ್ರಸಾರ ಮಾಡಬೇಕೆಂಬುದು ನಮ್ಮ ಉದ್ದಿಶ್ಯ. ಅದು ಕ್ರಿಸ್‌ಮಸ್‌ ಆಚರಣೆ ‘ಗ್ಲ್ಯಾಸ್ಟೋನ್‌ಬರಿ’ಯಷ್ಟೇ ಜನಾಪ್ತವಾಗುವಂತೆ ಪ್ರಸಾರವಾಗಬೇಕು.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X