ಸಚಿವರನ್ನೂ ಕಾಡಿದ ಜೇನು ನೊಣಗಳು...
ಪಿರಿಯಾಪಟ್ಟಣ : ಜೇನು ತಿನ್ನಲು ಅತಿ ಮಧುರ. ಜೇನು ನೊಣ ಕಚ್ಚಿದರೆ..... ಹಿಂಡು ಜೇನು ಅಟ್ಟಸಿಕೊಂಡು ಬಂದರಂತೂ ಮುಗಿದೇ ಹೋಯಿತು. ಜೇನು ಗೂಡಿಗೆ ಕಲ್ಲೆಸೆದು ಬದುಕುವವರುಂಟೇ...
ಬುಧವಾರ ತಾಲೂಕಿನ ಕಂಪಲಾಪುರದಲ್ಲಿ ಜೇನು ಕೆಲಕಾಲ ರಾಜ್ಯದ ಸಚಿವರುಗಳನ್ನೂ ಕಾಡಿತು. ಕಾರಿಂದ ಇಳಿದು ನಿಂತಿದ್ದ ಸಚಿವರುಗಳುಗಳನ್ನು ಕಾರಿನತ್ತಲೇ ಓಡುವಂತೆ ಮಾಡಿತು. ಕಂಪಲಾಪುರದ ಹೆಲಿಪ್ಯಾಡ್ನಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಸ್ವಾಗತಿಸಲು ಕಾದಿದ್ದ ಸಚಿವರುಗಳಾದ ಎಚ್. ವಿಶ್ವನಾಥ್ ಹಾಗೂ ಟಿ.ಬಿ. ಜಯಚಂದ್ರ ಅವರುಗಳ ಮೇಲೆ ಜೇನುಗಳು ದಾಳಿ ಮಾಡಿದವು.
ದಾರಿಕಾಣದೆ ಸಚಿವರುಗಳು ಕಾರಿನ ಕಡೆ ಕಂಬಿ ಕಿತ್ತರು. ಕಾರನ್ನು ಹೊಕ್ಕು ಬಾಗಿಲು ಮುಚ್ಚಿ, ಕಿಟಕಿಯ ಗಾಜುಗಳನ್ನು ಮೇಲೆಳೆದರು. ಸಚಿವರಿಗೇನೋ ಕಾರಿತ್ತು, ಸಚಿವರ ಬೆಂಬಲಿಗರಿಗೆ... ಹಿಂಬಾಲಕರಿಗೆ? ವಿಧಿ ಇಲ್ಲದೆ ಕಾರ್ಯಕರ್ತರು, ಹಿಂಬಾಲಕರು, ಬೆಂಬಲಿಗರು ನೆಲಕ್ಕೆ ಮುಖವಿಟ್ಟು ಬೋರಲಾಗಿ ಮಲಗಿದರು. ಅಷ್ಟು ಹೊತ್ತಿಗಾಗಲೇ ಕೆಲವರು ಜೇನು ಕಡಿತದ ರುಚಿಯನ್ನು ಸವಿದಾಗಿತ್ತು.
ವಾರ್ತಾ ಸಂಚಯ
ಮುಖಪುಟ / ಊರು ಕೇರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications