Get Updates
Get notified of breaking news, exclusive insights, and must-see stories!

ಬ್ಯಾಂಕ್‌ಗಳ ಪೂರ್ಣ ಖಾಸಗೀಕರಣದ ಪ್ರಸ್ತಾವನೆ ಸರಕಾರದ ಮುಂದಿಲ್ಲ

ನವದೆಹಲಿ : ಯಾವುದೇ ಸಾರ್ವಜನಿಕ ವಲಯದ ಬ್ಯಾಂಕನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಬಾಳ ಸಾಹೇಬ್‌ ವಿಖೆ ಪಾಟೀಲ್‌ ಹೇಳಿದ್ದಾರೆ.

ಅಂತಹ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಪಾಟೀಲ್‌ ಅವರು ಬುಧವಾರದಂದು ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಹಯೋಗಿ ಬ್ಯಾಂಕ್‌ಗಳಲ್ಲಿ ಕೂಡ ಯಾವುದೇ ಬದಲಾವಣೆ ತರುವುದಿಲ್ಲ ಎಂದರು. ಸಾರ್ವಜನಿಕ ವಲಯದ ಸಣ್ಣ ಪ್ರಮಾಣದ ಬ್ಯಾಂಕ್‌ಗಳಿಗೆ ಸರಕಾರ ಬೆಂಬಲ ನೀಡುವ ಇರಾದೆ ಇದೆಯೇ ಎನ್ನುವ ಪ್ರಶ್ನೆಗೆ ಸಚಿವರು, ಸರಕಾರ ಬ್ಯಾಂಕ್‌ಗಳ ನಿರ್ವಹಣೆಯ ಮೇಲೆ ಯಾವುದೇ ಹಿಡಿತ ಸಾಧಿಸಲು ಇಷ್ಟ ಪಡುವುದಿಲ್ಲ ಎಂದರು.

ಸಾಮಾಜಿಕ ವಲಯದಲ್ಲಿ ಬ್ಯಾಂಕ್‌ಗಳ ಬಾಧ್ಯತೆಯ ಬಗ್ಗೆ ಸರಕಾರಕ್ಕೆ ಕಾಳಜಿ ಇದೆ. ಸರಕಾರ ತನ್ನ ಬಂಡವಾಳವನ್ನು 33 ಶೇಕಡಾಕ್ಕೆ ಇಳಿಸಿರುವುದರಿಂದ ಬ್ಯಾಂಕ್‌ಗಳು, ಸಾರ್ವಜನಿಕ ವಲಯದಿಂದ ಬಂಡವಾಳ ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಿವೆ. ಸರಕಾರವು ಆರ್ಥಿಕವಾಗಿ ಬೆಂಬಲ ನೀಡುವುದಕ್ಕೆ ಕಷ್ಟವಾದಾಗ , ಸ್ವತಂತ್ರ ನಿರ್ವಹಣೆಯನ್ನು ಕಂಡುಕೊಳ್ಳಬೇಕು. ಖರ್ಚು ವೆಚ್ಚಗಳ ನಿರ್ವಹಣೆ ಬ್ಯಾಂಕಿನ ಆಡಳಿತ ವಿಭಾಗಕ್ಕೆ ಸೇರಿದ್ದಾಗ್ಯೂ, ಸರಕಾರ ಅದನ್ನು ಆಗಾಗ್ಗೆ ಪರಿಶೀಲಿಸುತ್ತಿರುತ್ತದೆ. ಭಾರತದ ಆಂತರಿಕ ಮತ್ತು ವಿದೇಶೀ ಸಾಲಕ್ಕೆ ಸಂಬಂಧಿಸಿದಂತೆ ಬಿಗುವಾದ ಕಟ್ಟು ಪಾಡುಗಳನ್ನು ಮಾಡಲಾಗಿದೆ. ಈಗಾಗಲೇ ಪ್ರತಿಯಾಬ್ಬ ಭಾರತೀಯನ ಮೇಲೆ 14,000 ರೂಪಾಯಿ ಸಾಲವಿದೆ ಎಂದು ಸಚಿವರು ವಿವರಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+