ನಿತ್ಯ ಭವಿಷ್ಯ
ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ರಜಾಕಾಲದ ನಿರಾಶೆಯಿಂದ ಈ ದಿನವೂ ಮನಸ್ಸನ್ನು ಹಾಳು ಮಾಡಿಕೊಳ್ಳಬೇಡಿ. ಯಾರೂ ಸಂತೋಷವನ್ನು ನಿಮಗಾಗಿ ಧಾರೆಯೆರೆವುದಿಲ್ಲ . ಹೊರಗೆ ಹೋಗಿ, ಹೊಸ ಗೆಳೆಯರನ್ನು ಕಂಡುಕೊಳ್ಳಿ.ವೃಷಭ : ನೀವೀಗ ಚಾಲಕನ ಸ್ಥಾನದಲ್ಲಿದ್ದೀರಿ. ಎಲ್ಲರೂ ನಿಮ್ಮ ತಾಳಕ್ಕೆ ಕುಣಿಯುವುದು ಅನಿವಾರ್ಯ. ಜೀವನವೊಂದು ಚಕ್ರವಾದುದರಿಂದ ಈಗ ದುಡುಕಿದರೆ ಮುಂದೆ ಪಶ್ಚತ್ತಾಪ ಪಡುವುದು ನಿಶ್ಚಿತ.
ಮಿಥುನ : ಹೇಳುವುದು ಒಂದು ಮಾಡುವುದು ಇನ್ನೊಂದು ಅನ್ನುವ ಗುಂಪಿಗೆ ಸೇರುತ್ತಿದ್ದೀರಿ. ನೀವು ಮಾಡುತ್ತಿರುವುದು ಸರಿಯೇ ಅನ್ನುವುದನ್ನು ಮತ್ತೊಮ್ಮೆ ಯೋಚಿಸಿ.
ಕಟಕ : ಇವರು ಹೋದರು ಎಂದು ನಿಟ್ಟುಸಿರು ಬಿಡುವ ಹೊತ್ತಿಗೇನೆ ಹೊಸ ಅತಿಥಿಗಳ ಆಗಮನ. ಖರ್ಚು ಹೆಚ್ಚುತ್ತಿದೆಯಾದರೂ ನೀವು ಏನೂ ಮಾಡುವಂತಿಲ್ಲ . ವರ್ಷಾಂತ್ಯದ ರಜೆ ನಿಮ್ಮ ಪಾಲಿಗೆ ಸಜೆಯೇ ಸರಿ.
ಸಿಂಹ : ಅವರೊಂದಿಗಿನ ಜಗಳದಿಂದ ನಿಮಗೇನೂ ಗಿಟ್ಟುವುದಿಲ್ಲ . ಗುದ್ದಾಡಿದರೂ ಗಂಧದವರೊಡನೆ ಗುದ್ದಾಡಬೇಕು ಅನ್ನುವುದು ನಿಮಗೆ ಗೊತ್ತಿಲ್ಲದ್ದೇನೂ ಅಲ್ಲವಲ್ಲ.
ಕನ್ಯಾ : ವಿದ್ಯಾಭ್ಯಾಸದಲ್ಲಿ ಪ್ರಗತಿ. ಧನಲಾಭ. ಹೊಸ ವಸ್ತ್ರ ಧರಿಸುವ ಅವಕಾಶ. ಎಲ್ಲವೂ ಸರಿ, ಆದರೆ, ನೀವು ಒಲ್ಲದ ಪ್ರಯಾಣ ನಿಮಗಾಗಿ ಕಾದಿದೆ.
ತುಲಾ : ಸಾಕಪ್ಪಾ ಸಾಕು ಈ ಕೆಲಸ ! ಎಂದಿರಾ. ಹಾಗೆಂದರೆ ಹೇಗೆ, ಇಷ್ಟ ಎಂದು ಅಪ್ಪಿಕೊಂಡ ಮೇಲೆ ಅನುಭವಿಸಲೇ ಬೇಕಲ್ಲವೆ. ಬಡ್ತಿ ಹತ್ತಿರದಲ್ಲೇ ಇರುವುದರಿಂದ ತಾಳ್ಮೆಯಿಂದಿರಿ.
ವೃಶ್ಚಿಕ : ಜಗವೇ ಒಂದು ರಣರಂಗ ಎಂದು ಹೇಳುತ್ತಿರುವಿರಾದರೂ, ಯಾವತ್ತಾದರೂ ಕತ್ತಿ ಹಿಡಿದಿದ್ದೀರಾ! ಈ ದಿನ ನಿಮ್ಮ ಪಾಲಿಗೆ ಹೇಗೆ ಅನ್ನುವುದು ನೀವು ನಿರ್ಧರಿಸಿದಂತೆಯೇ.
ಧನಸ್ಸು: ನೆನೆಗುದಿಗೆ ಬಿದ್ದ ಪ್ರಣಯ ಮತ್ತೆ ಜೀವಗೊಳ್ಳಲಿದೆ. ಎರಡು ದೋಣಿಯ ಮೇಲೆ ಕಾಲಿಡುವ ಚಾಳಿಯನ್ನು ಮತ್ತೆ ಶುರು ಮಾಡುವ ಹುಂಬತನ ಬೇಡ.
ಮಕರ : ಈ ಪಾಟಿ ಮರೆವಾದರೆ ಹೇಗೆ. ನಿಮ್ಮ ಬೇಜಾರಿಗೆ ಕಾರಣ ಹೇಳುತ್ತೇನೆ ಎಂದು ಹೇಳಿದ್ದ ನಿಮ್ಮ ಮಾತನ್ನು ಅವರಿನ್ನೂ ಮರೆತಿಲ್ಲ . ಮಾತು ಉಳಿಸಿಕೊಳ್ಳಿ ಅಥವಾ ಕಡ್ಡಿ ಮುರಿದಂತೆ ಅಧಿಕ ಪ್ರಸಂಗ ಮಾಡದಿರಲು ಸೂಚಿಸಿ.
ಕುಂಭ : ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಹೆಚ್ಚು ಪ್ರಭಾವ ಶಾಲಿ ಅನ್ನುವುದು ನಿಜ. ಆದರೆ, ಕೆಲವು ಚಿತ್ರಗಳು ಮರೆ ಮಾಚುವುದೇ ಹೆಚ್ಚು . ನಿಮ್ಮ ಜಾಗ್ರತೆಯಲ್ಲಿ ನೀವಿರಿ.
ಮೀನ : ಒಡ ಹುಟ್ಟಿದವರು ನಿಮ್ಮಿಂದ ನೆರವು ಕೋರಲು ಹಿಂಜರಿಯುತ್ತಿದ್ದಾರೆ. ಅವರಿಗೆ ನೆರವಾಗುವ ಸ್ಥಿತಿಯಲ್ಲಿ ನೀವಿದ್ದೀರಾದ್ದರಿಂದ ನೆರವಿಗೆ ನೀವೇ ಮುಂದಾಗಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications