Get Updates
Get notified of breaking news, exclusive insights, and must-see stories!

ಇಂಜಿನಿಯರಿಂಗ್‌ ಕ್ಷೇತ್ರಕ್ಕೆ ಕಾಯಕಲ್ಪ : ಟೆಕ್ನಾಲಜಿ ವಿಷನ್‌ 2020

* ರಮೇಶ್‌ ಭಾನ್‌

ನವದೆಹಲಿ : ಕೃಷಿ ಉತ್ಪಾದನೆ, ಆರೋಗ್ಯ ಮತ್ತು ಮೂಲಭೂತ ಕ್ಷೇತ್ರದ ಅಭಿವೃದ್ಧಿಗಾಗಿ ಬೃಹತ್‌ ಪ್ರಮಾಣದ ತಾಂತ್ರಿಕ ಯೋಜನೆಗಳನ್ನು ಭಾರತ ಸರ್ಕಾರ ಆರಂಭಿಸಿದ್ದು, ಇನ್ನೆರಡು ದಶಕಗಳಲ್ಲಿ ಇಂಜಿನಿಯರಿಂಗ್‌ ಕ್ಷೇತ್ರವನ್ನು ಸಾಕಷ್ಟು ಬಲಪಡಿಸಲು ನಿರ್ಧರಿಸಿದೆ.

ಟೆಕ್ನಾಲಜಿ ವಿಷನ್‌ 2020 ಎಂಬ ಹೆಸರಿನಡಿಯಲ್ಲಿ ಈ ಯೋಜನೆಯು ಜಾರಿಗೆ ಬರಲಿದ್ದು, ಪ್ರಾಥಮಿಕ ಹಂತದಲ್ಲಿ 100 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ವ್ಯಯಿಸಲಾಗುವುದು. ಅಮೆರಿಕಾ, ರಷ್ಯ, ಜರ್ಮನಿ ಮತ್ತು ಜಪಾನ್‌ ದೇಶಗಳು ಈ ಯೋಜನೆಯಲ್ಲಿ ಸಹಭಾಗಿಗಳಾಗಿದ್ದು, ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ. ಕ್ಲಿಂಟನ್‌ ಭಾರತ ಭೇಟಿಯ ಸಂದರ್ಭದಲ್ಲಿ ಭಾರತ ಅಮೆರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವೊಂದವನ್ನು ತೆರೆಯುವ ಬಗ್ಗೆ ಒಪ್ಪಂದ ನಡೆದಿದೆ. ದೆಹಲಿಯಲ್ಲಿ ಎರಡೂ ದೇಶಗಳ ಹವಾಮಾನ ದತ್ತಾಂಶ ಕೇಂದ್ರವನ್ನೂ ಸ್ಥಾಪಿಸಲು ನಿರ್ಧರಿಸಲಾಗಿದೆ.

ರಷ್ಯದ ವ್ಲಾಡಿಮಿರ್‌ ಪುಟಿನ್‌ ಭಾರತಕ್ಕೆ ಬಂದ ಸಂದರ್ಭದಲ್ಲಿ ರಷ್ಯದೊಡನೆಯೂ ಇಂತಹುದೇ ಯೋಜನೆಗಳಿಗೆ ಹತ್ತು ವರ್ಷಗಳ ಅವಧಿಯ ಒಪ್ಪಂದಕ್ಕೆ ಭಾರತ ಅಂಕಿತ ಹಾಕಿದೆ. ಇದೇ ರೀತಿ ಹೈದರಾಬಾದಿನಲ್ಲಿ ಲೇಸರ್‌ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಲು ಫ್ರಾನ್ಸ್‌ ಮತ್ತು ಜರ್ಮನಿ ಜಂಟಿಯಾಗಿ ಸಹಕರಿಸಲಿದೆ. ಕಲ್ಲಿದ್ದಲು, ಜೈವಿಕ ಪರಿಸರ ಸ್ನೇಹದ ಬಗೆಗಿನ ಅಧ್ಯಯನ ಕೇಂದ್ರಕ್ಕೆ ಜಪಾನ್‌ ಮುಂದೆ ಬಂದಿದೆ.

ಈ ನಡುವೆ ಸರಕಾರವು ಅಧ್ಯಯನ ಮತ್ತು ಅಭಿವೃದ್ಧಿಯ ಶುಲ್ಕವನ್ನು 0.7 ಶೇಕಡಾದಷ್ಟು ಏರಿಸಿದೆ. ಸುಮಾರು 21 ಯೋಜನೆಗಳು ಜೈ ವಿಜ್ಞಾನ ಕಾರ್ಯಾಚರಣೆಯಡಿಯಲ್ಲಿ ಸಾಕಾರಗೊಳ್ಳಲಿವೆ. ಖಗೋಲ, ಅಣು ತಂತ್ರಜ್ಞಾನ, ಅನುವಂಶೀಯತೆ, ಇಲೆಕ್ಟ್ರಾನಿಕ್ಸ್‌ ಮತ್ತು ಸಾಗರೋತ್ಪನ್ನ ಅಭಿವೃದ್ಧಿಯ ಉದ್ದೇಶ ಸರಕಾರದ ಮುಂದಿದೆ. ಸಾಗರ ಶಾಖೋತ್ಪನ್ನ ಶಕ್ತಿ ಯಲ್ಲಿ ತಮಿಳು ನಾಡಿನ ಕರಾವಳಿ ಪ್ರದೇಶದಲ್ಲಿ ತಲೆಯತ್ತಲಿರುವ ಘಟಕ ಜಗತ್ತಿನ ಮೊದಲ ಶಾಖೋತ್ಪನ್ನ ಕೇಂದ್ರವಾಗಲಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಹೆಪಟೈಟಸ್‌ ಬಿ ಮತ್ತು ಏಡ್ಸ್‌ನಂತಹ ರೋಗಗಳನ್ನು ಹತೋಟಿಗೆ ತರುವಲ್ಲಿ ಸಹಕರಿಸಲಿವೆ. ಸಸ್ಯ ಕ್ಷೇತ್ರದಲ್ಲಿ ಅಕ್ಕಿ ಮತ್ತು ಸಾಸಿವೆ ಜೈವಿಕ ತಂತ್ರಜ್ಞಾನದ ಅಳವಡಿಕೆಯಿಂದ ಲಾಭತರಲಿವೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+