Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನೌಕರಿ ಬದಲಾಗುವ ಮುನ್ಸೂಚನೆಗಳು ಬರಬಹುದು. ಇದರಿಂದ ನಷ್ಟವೇನೂ ಇಲ್ಲ. ಕಾರ್ಯ ಹಾನಿ ಆಗಬಹುದು. ಆದರೆ ಅದರಿಂದ ಅಂತಹ ದೊಡ್ಡ ಪರಿಣಾಮವೇನಿಲ್ಲ.

ವೃಷಭ : ಆರೋಗ್ಯದಲ್ಲಿ ಏರುಪೇರಾಗಬಹುದು. ಆದರೆ ಶತ್ರುದಮನದ ಖುಷಿ ನಿಮ್ಮ ನೋವುಗಳನ್ನು ಮರೆಸುತ್ತದೆ. ಖರ್ಚುಗಳಿಗೆ ತಲೆ ಬಿಸಿ ಯಾಕೆ ?

ಮಿಥುನ : ಸ್ನೇಹಿತರ ಭೇಟಿ. ಈವರೆಗೆ ಸ್ನೇಹಿತರಿಗೆ ಯಾವ ಪ್ರಾಶಸ್ತ್ಯ ಕೊಡುತ್ತಿದ್ದೀರೋ ಅದಕ್ಕೆ ಕುಂದುಂಟು ಮಾಡಬೇಡಿ.

ಕಟಕ : ಸುಮ್ಮನೇ ಬೀದಿ ಸುತ್ತುವುದರಿಂದ ಹಣ ಖಾಲಿಯಾಗುತ್ತದೆ. ತುಸು ನಿರಾಸೆ, ಬೇಸರವಿದ್ದರೂ ಹಬ್ಬದ ಮೂಡ್‌ ನಿಮ್ಮ ಖುಷಿಯಾಗಿರಿಸುತ್ತದೆ.

ಸಿಂಹ : ಭೋಜನ ಭಾಗ್ಯ. ದಿನ ಪೂರ್ತಿ ಕೈ ತುಂಬಾ ಕೆಲಸ. ನಿಮ್ಮ ನಾಯಕತ್ವವನ್ನು ಮೆರೆಯಲು ಇವತ್ತು ಸಕಾಲ.

ಕನ್ಯಾ : ನಿಮ್ಮ ಸೂಕ್ಷ್ಮತೆ ಇನ್ನೊಬ್ಬರಿಗೆ ಇರುಸು ಮುರುಸಾಗುವ ಸಂಭವವಿದೆ. ಆದರೆ ನೀವು ಇವತ್ತು ಹಾಕಿಕೊಂಡ ಪ್ಲಾನ್‌ ಎಲ್ಲ ಸಕ್ಸಸ್‌.

ತುಲಾ : ಮನಸ್ಸೇ ನೀನೆಷ್ಟು ಚಂಚಲ ಎಂದು ಕೊರಗಿದರೇನೂ ಫಲವಿಲ್ಲ . ಇಷ್ಟಕ್ಕೂ ನೀವು ಹಾಕಿಕೊಳ್ಳಬಯಸುತ್ತಿರುವ ಲಕ್ಷ್ಮಣರೇಖೆಗಳಿಗೆ ಅಷ್ಟೊಂದು ಸಮರ್ಥನೆಗಳು ನಿಮ್ಮೊಳಗೇ ಇಲ್ಲ . ಆದ್ದರಿಂದ ಹಟ ತೊರೆದು ಮನಸ್ಸನ್ನು ಹಗುರಾಗಿಸಿಕೊಳ್ಳಿ.

ವೃಶ್ಚಿಕ : ಈಸು ಕಾಲ ಏಗಿ ಏನು ಗಳಿಸಿದಿರಿ ಅನ್ನುವುದರ ಆತ್ಮಾವಲೋಕನಕ್ಕೆ ತಕ್ಕನಾದ ಕಾಲ. ಇದರಿಂದಾಗಿ ಮುಂದಿನ ನಿಮ್ಮ ನಡೆಗಳು ಸ್ಪಷ್ಟವಾಗಲು ಅನುಕೂಲವಾಗುತ್ತದೆ.

ಧನಸ್ಸು: ಕ್ರಿಸ್‌ಮಸ್‌ ಖುಷಿಯ ಲಹರಿಯಲ್ಲಿದ್ದೀರಿ. ನಿಮ್ಮನ್ನು ಇಷ್ಟಪಡುವವರು ಕೊಡುವ ಉಡುಗೊರೆ ಜೀವಮಾನದಲ್ಲೇ ಮರೆಯದಂಥಹದ್ದು .

ಮಕರ : ಸೃಜನಶೀಲತೆಯ ಮತ್ತೊಂದು ಮಗ್ಗುಲನ್ನು ಕಂಡುಕೊಳ್ಳುತ್ತೀರಿ. ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಹೊಳಪನ್ನೂ ತಂದುಕೊಟ್ಟೀತು. ಕ್ರಿಸ್‌ಮಸ್‌ ಸಂಜೆ ಗೆಳೆಯರ ಒಡನಾಟವಿದೆ.

ಕುಂಭ : ಲೋಕೋಭಿನ್ನರುಚಿಯನ್ನು ಅರ್ಥ ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತಿಲ್ಲ . ಅದರಿಂದಾಗಿ ವೈಯಕ್ತಿಕ ನಷ್ಟವೇನೂ ಇಲ್ಲದಿದ್ದರೂ, ವಾಸ್ತವಕ್ಕೆ ಬೆನ್ನು ಹಾಕಿದಂತಾಗುವುದು ಖಚಿತ.

ಮೀನ : ಸದಾ ಹೊಸತರ ಹುಡುಕಾಟದಲ್ಲಿರುವ ನೀವು ಹೊಸ ಸಂಗಾತಿಯ ಹುಡುಕಾಟದಲ್ಲಿದ್ದೀರಿ. ಈ ಹುಡುಕಾಟ ನಿಮ್ಮ ಕುಟುಂಬದ ನೆಮ್ಮದಿಯನ್ನು ಹಾಳುಮಾಡದಂತೆ ಎಚ್ಚರ ವಹಿಸಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+