Get Updates
Get notified of breaking news, exclusive insights, and must-see stories!

ಭಾರತದ ಆನಂದ್‌ ಈಗ ಚೆಸ್‌ ‘ವಿಶ್ವನಾಥನ್‌’

ಟೆಹರಾನ್‌ : ಇಲ್ಲಿ ಈ ಖುಷಿಗೆ ಮೊದಲ ಬಾರಿಗೆ ಭಾರತದ ಧ್ವಜ ಮೆರೆಯಿತು.....

ಸ್ಪೇನ್‌ನ ಅಲೆಕ್ಸಿ ಶಿರೋವ್‌ ಅವರನ್ನು ಸೋಲಿಸುವ ಮೂಲಕ ರಷ್ಯಾದ ಪಾರುಪತ್ಯದಲ್ಲಿದ್ದ ವಿಶ್ವ ಚೆಸ್‌ ದೊರೆ ಪಟ್ಟವನ್ನು ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಭಾನುವಾರ ಕಸಿದುಕೊಂಡಿದ್ದಾರೆ.

ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿನ 4ನೇ ಪಂದ್ಯದಲ್ಲಿ ಶಿರೋವ್‌ ಅವರನ್ನು ಸೋಲಿಸುವ ಮೂಲಕ 3ನೇ ಜಯ ಸಾಧಿಸಿದ ಆನಂದ್‌, ಇನ್ನೂ 2 ಪಂದ್ಯಗಳಿರುವಂತೆಯೇ ವಿಶ್ವ ಚೆಸ್‌ ರಾಜನಾದರು. ಮೊದಲ ಪಂದ್ಯ ಡ್ರಾ ಮಾಡಿಕೊಂಡ ನಂತರ ಸತತ 3 ಜಯ ಸಾಧಿಸಿದ ಆನಂದ್‌ 3.5- 0.5 ರ ಮುನ್ನಡೆ ಪಡೆದು ವಿಶ್ವ ಚಾಂಪಿಯನ್‌ ಪಟ್ಟ ಗಿಟ್ಟಿಸಿದರು.

ಸಾಮಾನ್ಯವಾಗಿ ಅಂತಿಮ ಸುತ್ತಿನ ಹಣಾಹಣಿ ಟಂಗಾಟುಂಗಿಯದ್ದಾಗಿರುತ್ತದೆ. ಚಾಂಪಿಯನ್‌ ಆಗಲು ಕೊನೆ ಪಕ್ಷ 6ನೇ ಆಟದವರೆಗೂ ಆಡಬೇಕಾಗುವ ಪ್ರಸಂಗಗಳೇ ಹೆಚ್ಚು. ಅಂಥಾದರಲ್ಲಿ ಎದುರಾಳಿಯ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಪೂರ್ಣ ಪ್ರಮಾಣದಲ್ಲಿ ಮೇಲುಗೈ ಸಾಧಿಸಿದ ಆನಂದ್‌ 4ನೇ ಪಂದ್ಯದ 41ನೇ ನಡೆಯ ನಂತರ ಶಿರೋವ್‌ ಅವರನ್ನು ಪೇಚಿಗೆ ಸಿಕ್ಕಿಸಿದರು. ದಾರಿ ತೋರದ ಶಿರೋವ್‌ ಸೋಲೊಪ್ಪಿದರು.

ಈ ಅನಿರೀಕ್ಷಿತ ಫಲಿತಾಂಶ ಡಿಸೆಂಬರ್‌ 27ಕ್ಕೆ ನಿಗದಿಯಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಈಗ ಮುನ್ನವೇ ಆಯೋಜಿಸಲು ಎಡೆ ಮಾಡಿಕೊಟ್ಟಿದೆ. 1998ರಲ್ಲಿ ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಫೈನಲ್ಸ್‌ ಪ್ರವೇಶಿಸಿ ರಷ್ಯಾದ ಅನಾತೊಲಿ ಕಾರ್ಪೊವ್‌ ವಿರುದ್ಧ ಸೋತಿದ್ದರು. ಅಲ್ಲಿ ಕಳಕೊಂಡದ್ದನ್ನು ಆನಂದ್‌ ಭಾನುವಾರ ಸಂಪಾದಿಸಿದರು.

ಪ್ರಥಮ ಬಾರಿಗೆ ಚೆಸ್‌ ದೊರೆಯಾದ ಏಷ್ಯಾದ ಆಟಗಾರ, ತನ್ನ ಹೆಮ್ಮೆಯ ‘ವಿಶಿ’, ‘ಮದ್ರಾಸ್‌ ಹುಲಿ’ ಸ್ವಾಗತಕ್ಕೆ ಚೆನ್ನೈ ಸಜ್ಜಾಗುತ್ತಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+