ಚುಕ್ಕಿಯಿಟ್ಟು ಗೆರೆ ಎಳೆಯುವುದ ಮರೆತ ಪುಟ್ಟಿ
ಡಿಸೆಂಬರ್ ತಿಂಗಳ ರಾತ್ರಿಗಳಲ್ಲಿ ಬಾನ ತುಂಬಾ ಚುಕ್ಕಿಗಳ ಸಿಂಗಾರ...ಚಳಿಗೆ ಹೊದ್ದ ದುಪ್ಪಟ್ಟದೆಡೆಯಲ್ಲಿ ನೀವು ನೋಡುವ ಆಕಾಶದಲ್ಲಿ ಪುಟಾಣಿ ಪುಟ್ಟಿ ರಂಗೋಲಿ ಚುಕ್ಕಿಗಳನ್ನಿಟ್ಟು ಗೆರೆ ಎಳೆಯುವುದನ್ನು ಮರೆತು ಹೋದ ಹಾಗೆ... ನಿಮ್ಮ ದಿನದ ಎಲ್ಲ ಬೇಸರಕ್ಕೊಂದು ಪೂರ್ಣ ವಿರಾಮದಂತೆ ಮಿನುಗುವ ಚುಕ್ಕಿ ....ಹೀಗೆ ಎಳೆ ಬೆಳದಿಂಗಳಿಲ್ಲದ ಈ ಕೃಷ್ಣ ಪಕ್ಷದಲ್ಲಿ ಬಾನು ಬಂಗಾರವಾಗಿ ನಿಮ್ಮಂಗಳದಲ್ಲಿ ಪ್ರತಿಫಲಿಸುತ್ತಿರುತ್ತದೆ.
ಇವತ್ತು ನಿಮ್ಮ ಫ್ಲಾಟ್‌ನ ಕೊನೆಯ ಮಾಳಿಗೆಗೆ ಹೋಗಿ ನಾಲ್ಕು ಚುಕ್ಕಿಗಳ ಮುಖ ನೋಡುವುದನ್ನು ಮರೆಯಬೇಡಿ. ಲೆಕ್ಕ ಮಾಡುವ ಆಸೆ ಉಕ್ಕೇರಿಸುವ ಬೆಳ್ಳಿ ಚುಕ್ಕಿಗಳ ಬೆಳಕಿನಲ್ಲಿ ಇವತ್ತು ರಾತ್ರಿ 12 ಗಂಟೆಗೆ ಕಾಶ್ಮೀರಿ ಶಾಲು ಹೊದ್ದುಕೊಂಡು ಚರ್ಚ್‌ಗೆ ನಡೆಯುವ ಸಾಲು ಸಾಲು ಕ್ರಿಶ್ಚಿಯನ್ನರು ಇವತ್ತು ಕಾಣುವ ಎಲ್ಲ ಚುಕ್ಕಿಗಳನ್ನು ನೋಡಬಹುದು. ಮನೆಯಾಳಗೆ ಬೆಚ್ಚಗೆ ಕೂರುವವರಿಗೆ ಟೇರಿಸಿನ ರುಮು ರುಮು ಗಾಳಿಯಲ್ಲಿ ಇಣುಕುವ ಚುಕ್ಕಿ ಬೆಳಕು. ಆ ಬೆಳಕಿನಲ್ಲಿ ನೆನಪುಗಳ ಹರವಿಕೊಂಡು ಮೈ ಮರೆತವರಿಗೆ ಯಾವ ಒಲೆಯುಕ್ಕೂ ಕೇಳಿಸದು.
ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ನಿಮ್ಮ ಮನೆಯ ಬಿಯರ್ ಕೊಡುವ ಖುಷಿಯನ್ನು ಹಿಂದೆ ಹಾಕಲೆಂದೇ ಹವಾಮಾನ ಇಲಾಖೆಯವರು ಇಂದು ಬೆಂಗಳೂರಿನ ಆಕಾಶ ಶುಭ್ರವಾಗಿರುತ್ತದೆ ಎಂದು ಕಣಿ ಹೇಳಿದ್ದಾರೆ. ರಾಜ್ಯಾದ್ಯಂತ ಯಥಾಪ್ರಕಾರ ಒಣ ಹವೆ ಮುಂದುವರಿಯುತ್ತದೆ. ನಿಮಗೆಲ್ಲಾ ಕ್ರಿಸ್‌ಮಸ್ ಶುಭಾಶಯಗಳು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications