Get Updates
Get notified of breaking news, exclusive insights, and must-see stories!

ಕೋಡಿಮಠದ ಸ್ವಾಮಿಗಳ ಹೆಸರಿನಲ್ಲಿ ವಂಚನೆಗೆ ಯತ್ನ

ಶಿರಾ : ತಾಲ್ಲೂಕಿನ ಮಾಜಿ ಸಚಿವ ಬಿ. ಸತ್ಯನಾರಾಯಣ ಅವರಿಗೆ ಕೋಡಿಮಠದ ಸ್ವಾಮೀಜಿ ಹೆಸರಿನಲ್ಲಿ ವ್ಯಕ್ತಿಯಾಬ್ಬ ಮೋಸ ಮಾಡಲು ಪ್ರಯತ್ನಿಸಿ ವಿಫಲವಾಗಿರುವ ಕುತೂಹಲಕಾರಿ ಸಂಗತಿ ವರದಿಯಾಗಿದೆ.

ಬರುವ ಪುರಸಭೆ ಚುನಾವಣೆಯಲ್ಲಿ ತಮ್ಮ ಬಳಗಕ್ಕೆ ಒಳ್ಳೆಯದಾಗುತ್ತದೆ. ನಿಮ್ಮ ಶ್ರೇಯಸ್ಸಿಗಾಗಿ ನವರತ್ನ ಉಂಗುರವನ್ನು ಪಕ್ಷಕ್ಕೆ ನೀಡುತ್ತೇನೆ. ಉಂಗುರ ತಯಾರಿಕೆಗೆ ತಗುಲಿರುವ ವೆಚ್ಚ 5 ಸಾವಿರ ರುಪಾಯಿಗಳನ್ನು ಹಿರಿಯೂರಿನಲ್ಲಿರುವ ಸೂರ್ಯ ಲಾಡ್ಜ್‌ನ ಬಾಲು ಅಥವಾ ಅನಿಲ್‌ಗೆ ತಲುಪಿಸಿ ಎಂದು ಕೋಡಿ ಮಠದ ಸ್ವಾಮಿಗಳ ಹೆಸರಿನಲ್ಲಿ ಮಾಜಿ ಸಚಿವರಿಗೆ ಫೋನಾಯಿಸಿದ್ದಾನೆ. ಹಣ ನೀಡಿದ ನಂತರ ಶಿರಾ ಸಮೀಪದ ಆಂಜನೇಯ ಗುಡಿಗೆ ಮಡಿಯುಟ್ಟು ಬಂದರೆ ಉಂಗುರ ನೀಡುವುದಾಗಿ ತಿಳಿಸಿದ್ದಾನೆ.

ಫೋನಿನಲ್ಲಿ ಮಾತನಾಡಿದ ವ್ಯಕ್ತಿಯ ಮಾತುಗಳ ಬಗ್ಗೆ ಸಂಶಯಗೊಂಡ ಸತ್ಯನಾರಾಯಣ ಅವರು, ಕೋಡಿಮಠವನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಸ್ವಾಮಿಗಳು ಊರಿನಲ್ಲಿಲ್ಲ . ವಂಚಕರ ಜಾಲದ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಮಠದ ಮೂಲಗಳು ಅವರಿಗೆ ತಿಳಿಸಿವೆ. ಫೋನ್‌ ಕರೆಯ ಬಗ್ಗೆ ಮಾಜಿ ಸಚಿವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಹಿರಿಯೂರಿನ ಸೂರ್ಯ ಲಾಡ್ಜ್‌ನಲ್ಲಿ ತಪಾಸಣೆ ನಡೆಸಿದರೂ, ಜಾಗೃತರಾಗಿರುವ ವಂಚಕರು ತಪ್ಪಿಸಿಕೊಂಡಿದ್ದಾರೆ.

(ಇನ್ಫೊ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+