Get Updates
Get notified of breaking news, exclusive insights, and must-see stories!

‘ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಜಾಗೃತರಾಗದಿದ್ದರೆ ಸಾಮ್ರಾಜ್ಯದ ಪತನ’

ಕಾರವಾರ : ಕನ್ನಡದ ಪ್ರಪ್ರಥಮ ಸಾಮ್ರಾಜ್ಯ ಎಂಬ ಕೀರ್ತಿಗೆ ಭಾಜನವಾದ ಆದಿಕವಿ ಪಂಪನ ಬೀಡು ಬನವಾಸಿಯಲ್ಲಿ ಗುರುವಾರ ವರ್ಣರಂಜಿತವಾಗಿ ಕದಂಬೋತ್ಸವ ಆರಂಭಗೊಂಡಿತು. ಖ್ಯಾತ ಸಂಶೋಧಕ ಪ್ರೊ. ಎ. ಬಸವರಾಜು ಅವರಿಗೆ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರಿಂದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸವರಾಜು ಅವರು ನಾಡಿನ ಸಂಸ್ಕೃತಿ, ಸಾಹಿತ್ಯ, ಕಲೆಯ ಪೋಷಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೋರಿದರು. ನಮ್ಮ ಕಲೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಜನ ಜಾಗೃತರಾಗದಿದ್ದರೆ, ಎಲ್ಲಾ ಸಾಮ್ರಾಜ್ಯಗಳೂ ಬಸವಾಸಿಯಂತೆಯೇ ಪತನವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಇಂದು ಧರ್ಮ ಅಹಂಕಾರದಲ್ಲೇ ಸಾರ್ಥಕತೆ ಕಾಣುತ್ತಿದೆ ಎಂದು ವಿಷಾದಿಸಿದ ಅವರು, ಧರ್ಮ ಹಾಗೂ ರಾಜಕಾರಣದ ಹೆಸರಿನಲ್ಲಿ ಪುಂಡಾಟಿಕೆ ಬೇಡ ಎಂದರು. ಹಿಂದೆ ಜನರು ಏಳುವ ಮೊದಲೇ ದಾಸರು ತಮ್ಮ ಪದಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಎಂದು ಬಸವರಾಜ್‌ ಹೇಳಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ, ನೀರಾವರಿ ಸಚಿವ ಎಚ್‌.ಕೆ. ಪಾಟೀಲ್‌, ಕನ್ನಡ ಸಂಸ್ಕೃತಿ ಸಚಿವೆ ರಾಣಿ ಸತೀಶ್‌, ನಿರ್ದೇಶಕ ರಾಮಮೂರ್ತಿ ಪಾಲ್ಗೊಂಡಿದ್ದರು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+