Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಆರ್ಥಿಕ ವಿಷಯದಲ್ಲಿ ಹಿನ್ನಡೆ ಇದೆ. ಹೊಸ ವೃತ್ತಿಯಲ್ಲಿ ಅಪಜಯದ ಭೀತಿಯೂ ಇದೆ. ದೇವರನ್ನು ನಂಬಿದರೆ ಸಂಕಷ್ಟ ಪರಿಹಾರ.

ವೃಷಭ : ಪ್ರಯಾಣ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಬಾಸ್‌ ನಿಮ್ಮ ಬಗ್ಗೆ ಮುನಿಸಿಕೊಂಡಿದ್ದಾರೆಂಬ ಶಂಕೆ ಬೇಡ. ನಿಮ್ಮ ಮಾತು ಹಿತವಾಗಿದ್ದರೆ, ಜಗವನ್ನೇ ಗೆಲ್ಲುತ್ತೀರಿ.

ಮಿಥುನ : ಕೈತುಂಬ ಕೆಲಸ ಇದೆ. ಮನಸ್ಸಿಗೆ ನೆಮ್ಮದಿಯಿಲ್ಲ. ಹಣವೇ ಮುಖ್ಯವಲ್ಲ ಎಂದು ನಿಮಗನಿಸಿದೆ. ವಿಶ್ರಾಂತಿಗೆ ಮನಸ್ಸು ಹಾತೊರೆಯುತ್ತಿದೆ. ಎಲ್ಲ ಸಂತೋಷಗಳೂ ಒಮ್ಮೆಲೆ ಹರಿದು ಬರುತ್ತವೆ. ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ.

ಕಟಕ : ಹಿರಿಯರ ನಿಂದಿಸುವ ಸಾಹಸ ಮಾಡಬೇಡಿ. ಪಿತ್ರಾರ್ಜಿತ ಆಸ್ತಿ ನಿಮ್ಮನ್ನೇ ಹುಡುಕಿಕೊಂಡು ಬರುತ್ತಿದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳದೆ, ಕಾರ್ಯ ಪ್ರವೃತ್ತರಾಗಿ. ವ್ಯಾಪಾರದಲ್ಲಿ ಅಖಂಡ ಸೌಭಾಗ್ಯವಿದೆ.

ಸಿಂಹ : ಅಲಸ್ಯಪಟ್ಟರೆ ಅಮೃತವೂ ವಿಷವಾಗುತ್ತದೆ. ಜಡತ್ವ ಮರೆತು, ಮನಸ್ಸು ಚುರುಕು ಮಾಡಿದರೆ, ಬಡ್ತಿಗೆ ಮೋಸವಿಲ್ಲ. ನಿಮ್ಮ ಕೆಲಸವನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಸ್ನೇಹಿತರೇ ದ್ರೋಹ ಮಾಡುವ ಹುನ್ನಾರ ನಡೆಸಿದ್ದಾರೆ. ಎಚ್ಚರಿಕೆಯಿಂದಿರಿ.

ಕನ್ಯಾ :ಮೃದು ಮಾತು ಮೂರು ಲೋಕವನ್ನೂ ಗೆಲ್ಲುತ್ತದೆ. ನಿಮ್ಮ ನಾಲಿಗೆಗೆ ಕೊಂಚ ಕಡಿವಾಣ ಹಾಕಿದರೆ, ನಿಮಗಿಂತ ದೊಡ್ಡವರು ಮತ್ತೊಬ್ಬರಿಲ್ಲ. ಪ್ರೀತಿಯಿಂದ ಜಗವ ಗೆಲ್ಲಲು ಅಡ್ಡಿಯಿಲ್ಲ. ದ್ವೇಷ ಬಿಟ್ಟ ಹೊರತು ನಿಮಗೆ ಜಯವಿಲ್ಲ. ಹಿರಿಯರಿಗೆ, ಅವರ ಅನುಭವಕ್ಕೆ ಗೌರವ ಕೊಡಿ.

ತುಲಾ : ತಕ್ಕಡಿಗೆ ಕಬ್ಬಿಣವೂ ಹತ್ತಿಯೂ ಎರಡೂ ಒಂದೇ. ಅದು ತೋರುವುದು ತೂಕ ಮಾತ್ರ. ನಿಮ್ಮ ಮನಸ್ಸಿನ ತಕ್ಕಡಿ ಈಗ ವಾಲಿದೆ. ಮನಸ್ಸನ್ನು ನಿಯಂತ್ರಿಸಿದರೆ ಒಳಿತು. ಹೊಸ ವ್ಯಾಪಾರಕ್ಕೆ ಕೈ ಹಾಕಬೇಡಿ. ಕೌಟುಂಬಿಕ ತೊಂದರೆ ನಿಭಾಯಿಸಲು ಸಜ್ಜಾಗಿ.

ವೃಶ್ಚಿಕ : ಚಳಿಯಿದೆ ಎಂದು ಕಂಪಿಸುತ್ತಾ ಕುಳಿತರೆ ಹೇಗೆ. ಬೆಚ್ಚನೆಯ ಬಟ್ಟೆ ತೊಟ್ಟು ಹೊರಗೆ ನಡೆಯಿರಿ. ಧೈರ್ಯವಿದ್ದಲ್ಲಿ ಜಯ ಇದ್ದೇ ಇದೆ. ಷೇರು, ಕೋರ್ಟ್‌ ವ್ಯವಹಾರ ನಿಮ್ಮ ಪರವಾಗೇ ಇದೆ. ಅನಿರೀಕ್ಷಿತ ಧನ ಲಾಭವೂ ಇದೆ.

ಧನಸ್ಸು : ಕೆಲಸ ಮಾಡುವೆಡೆ ಅನುಕೂಲಕರ ವಾತಾವರಣ ಇದೆ. ಅಸಮಾಧಾನ, ಆತಂಕ ಬೇಡ. ಕಾಣುವ ಕತ್ತಲು, ಬೆಳಕಿಗೆ ಹೆದರೇ ತೀರುತ್ತದೆ. ಹೃದಯಾಂತರಾಳದ ಜ್ಯೋತಿ ಬೆಳಗಿಸಿ, ನೀವು ಉಜ್ವಲವಾಗಿ ಬೆಳಗುತ್ತೀರಿ. ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಕಾಯುತ್ತಿದೆ.

ಮಕರ : ಉತ್ತಮ ಅವಕಾಶಗಳು ನಿಮಗಾಗಿ ಕಾಯುತ್ತಿವೆ. ನಿಮ್ಮ ಶಕ್ತಿ ಸಾಮರ್ಥ್ಯ ತೋರಲು ಇದು ಸಕಾಲ. ಎನಗಿಂತ ಕಿರಿಯರಿಲ್ಲ ಎಂಬ ವಿಶಾಲ ಮನೋಭಾವ ನಿಮ್ಮದು. ನಿಮ್ಮ ಒಳ್ಳೆಯತನವೇ ನಿಮ್ಮ ಯಶಸ್ಸಿನ ಗುಟ್ಟು. ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ ಎಂಬುದನ್ನು ಮರೆಯದಿರಿ.

ಕುಂಭ : ಕಾರ್ಯಕ್ಷೇತ್ರದಲ್ಲಿ ತೊಡಕುಗಳಿವೆ. ನಿಮ್ಮನ್ನು ಅನುಮಾನಿಸುವವರೂ ಇದ್ದಾರೆ. ನಿಮ್ಮ ಇತಿ ಮಿತಿ ನಿಮಗೇ ಗೊತ್ತಿದೆ. ಯಾರೊಂದಿಗೂ ಸಂಘರ್ಷ ಬೇಡ ಎಂದು ಸುಮ್ಮನಿದ್ದರೂ ಕಾಲ್ಕೆರೆದು ಬರುವವರ ದೂರವಿಡಿ.

ಮೀನ : ನಿಮ್ಮ ಯಶಸ್ಸಿನ ಬಗ್ಗೆ ಕರುಬುವವರನ್ನು ಕಡೆಗಣಿಸಿ, ಅಲ್ಪವಾದ್ದನ್ನು ತ್ಯಜಿಸಿ, ಭೂಮವಾದ್ದು ಮುಂದಿದೆ. ಗಗನ ಕುಸುಮಕ್ಕೆ ಕೈ ಚಾಚುವವರು ನೀವಲ್ಲ. ನೀವು ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಅವರೇ ಪಶ್ಚಾತ್ತಾಪ ಪಟ್ಟು ನಿಮ್ಮಲ್ಲಿಗೆ ಬರುವ ಕಾಲ ದೂರವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+