Get Updates
Get notified of breaking news, exclusive insights, and must-see stories!

ಹಾಲೆಂಡ್‌ ವಿಜ್ಞಾನಿಗಳ ಶೋಧ : ಗಂಡೆದೆ ಒಡೆಯುತ್ತಿರುವ ಗಂಡಾಟ

ಲಂಡನ್‌ : ಫುಟ್‌ಬಾಲ್‌ ಪ್ರೇಮಿಗಳೇ ನಿಮಗಿದೊ ಎಚ್ಚರ...

1996ರ ಯೂರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ನಾಟಕೀಯ ತಿರುವು ಪಡೆದುಕೊಂಡ ಪಂದ್ಯ ನೆದರ್‌ಲ್ಯಾಂಡ್‌ ಸೋಲಿಗೆ ಕಾರಣವಾಯಿತು. ಇದು ದಿನನಿತ್ಯಕ್ಕಿಂತ ಶೇ. 50ರಷ್ಟು ಹೆಚ್ಚು ಪುರುಷರ ಹೃದಯಾಘಾತಕ್ಕೂ ಎಡೆ ಮಾಡಿಕೊಟ್ಟಿತು. ನೆದರ್‌ಲ್ಯಾಂಡ್ಸ್‌ನ ವಿಜ್ಞಾನಿಗಳ ಅಧ್ಯಯನದಿಂದ ಈ ವಿಚಾರ ಹೊರ ಬಿದ್ದಿದೆ. ಬ್ರಿಟನ್ನಿನ ವೈದ್ಯಕೀಯ ಪತ್ರಿಕೆಯಾಂದು ಈ ಮಾಹಿತಿಯನ್ನು ಪ್ರಕಟಿಸಿದೆ.

ಆ ಪಂದ್ಯ ನಡೆದದ್ದು ಜೂನ್‌ 22, 1996ರಲ್ಲಿ. ವಿಜ್ಞಾನಿಗಳು ಆ ಹಿಂದಿನ 5 ದಿನಗಳಲ್ಲಿ ಹಾಗೂ ಮುಂದಿನ 5 ದಿನಗಳಲ್ಲಿ ಹೃದಯಾಘಾತಕ್ಕೀಡಾದ ಪುರುಷರ ಸಂಖ್ಯೆಯನ್ನು ಹೋಲಿಸಿ ನೋಡಿದಾಗ, ಜೂನ್‌ 22ರಂದು 14 ಮಂದಿ ಹೆಚ್ಚು ಪುರುಷರು ಪಾರ್ಶ್ವವಾಯು ಅಥವಾ ಹೃದಯಾಘಾತ ತೊಂದರೆಗೆ ಈಡಾಗಿ ಸತ್ತಿರುವುದು ಗೊತ್ತಾಗಿದೆ.

ಯಾವುದೋ ಒಂದು ಸಂದರ್ಭದಲ್ಲಿ ಮಾತ್ರ ಹೀಗಾಗುತ್ತದೆಯೇ ಎಂಬುದನ್ನು ಪತ್ತೆ ಹಚ್ಚಲು ಉಟ್ರೇಚ್‌ನಲ್ಲಿನ ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರದ ಪ್ರೊಫೆಸರ್‌ ಡಿಯಡೆರಿಕ್‌ ಗ್ರೊಬೀ 1995 ಹಾಗೂ 97ರ ಜೂನ್‌ 22 ಹಾಗೂ ಆಸುಪಾಸಿನ ದಿನಗಳ ಹೃದಯಾಘಾತ- ಪಾಶ್ವವಾಯು ಸಾವಿನ ಸಂಖ್ಯೆಗಳನ್ನು ಗಮನಿಸಿದ್ದಾರೆ. 1996ರ ಜೂನ್‌ನಲ್ಲಿ ಹೃದಯಾಘಾತ- ಪಾಶ್ವವಾಯುವಿನಿಂದ ಸತ್ತ ಹೆಂಗಸರ ಸಂಖ್ಯೆಯಾಂದಿಗೆ ಗಂಡಸರ ಸಂಖ್ಯೆಯನ್ನು ಹೋಲಿಸಿದ್ದಾರೆ. ಇದರಿಂದ ಗಂಡೆದೆ ಒಡೆಯಲು ಗಂಡಾಟ ಫುಟ್‌ಬಾಲೇ ಕಾರಣ ಎಂಬುದು ಸ್ಪಷ್ಟವಾಗಿದೆ.

ಅದು ಕ್ವಾಟರ್‌ಫೈನಲ್ಸ್‌ ಪಂದ್ಯ. ಎರಡೂ ತಂಡಗಳು ಗೋಲೇ ಹೊಡೆಯದೆ ಅವಧಿ ಮುಗಿದಾಗ, ಶೂಟ್‌ಔಟ್‌ ನಡೆಯಿತು. ಫ್ರಾನ್ಸ್‌ 5-4ರಲ್ಲಿ ಗೆಲುವನ್ನು ಕಸಿದುಕೊಂಡಿತು. ಇದರಿಂದ ಭಾವನಾತ್ಮಕವಾಗಿ ಕುಸಿದ ಎಷ್ಟೋ ಮಂದಿ ಎಗ್ಗಿಲ್ಲದೆ ಕುಡಿದು, ಸಿಗರೇಟು ಸೇದಿ ಹೃದಯ ಒಡೆದು ಹಾಕಿಕೊಂಡಿರುವ ಸಾಧ್ಯತೆ ಇದೆ. ಜೊತೆಗೆ ನಿತ್ಯವೂ ಮದಿರೆಯ ದಾಸರಾಗಿರುವವರ ಠುಸ್ಸು ಹೃದಯ ಒತ್ತಡ ಸಹಿಸದೇ ಬಲೂನಿನಂತೆ ಒಡೆದಿರಲೂಬಹುದು. ಪಾರ್ಶ್ವವಾಯುವಿಗೂ ಅತ್ಯೊತ್ತಡವೇ ಮುಖ್ಯ ಕಾರಣ ಎನ್ನುತ್ತಾರೆ ಗ್ರೊಬೀ.

ಬಾಲಂಗೋಚಿ : ಅತಿಯಾದರೆ ಅಮೃತವೂ ವಿಷ

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+