Get Updates
Get notified of breaking news, exclusive insights, and must-see stories!

ಶಾಂತಿನಾಥ ದೇಸಾಯರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

ನವದೆಹಲಿ : ಕನ್ನಡದ ಖ್ಯಾತ ಸಾಹಿತಿ ದಿವಂಗತ ಶಾಂತಿನಾಥ ದೇಸಾಯಿಯವರ ಓಂ ನಮೋ ಕಾದಂಬರಿಗೆ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.

ಶುಕ್ರವಾರ ಇಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡಮಿ ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ದೇಸಾಯರ ಈ ಕೃತಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದರೆಂದು ಅಕಾಡಮಿಯ ಕಾರ್ಯದರ್ಶಿ ಸಚ್ಚಿದಾನಂದನ್‌ ತಿಳಿಸಿದರು. 25 ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿದೆ.

ಬರುವ ಫೆಬ್ರವರಿ 20ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 21 ಭಾರತೀಯ ಭಾಷೆಗಳ ಕೃತಿಗಳಿಗೆ ಪ್ರಶಸ್ತಿ ನೀಡಲಾಗಿದ್ದು, ಸಂಸ್ಕೃತ ಭಾಷೆಯ ಕೃತಿಗೆ ಮಾತ್ರ ಕೊನೆ ಗಳಿಗೆಯಲ್ಲಿ ಉಂಟಾದ ತಾಂತ್ರಿಕ ತೊಡಕಿನಿಂದಾಗಿ ಪ್ರಶಸ್ತಿ ಪ್ರಕಟಿಸಲಾಗಲಿಲ್ಲ ಎಂದು ಸಚ್ಚಿದಾನಂದನ್‌ ತಿಳಿಸಿದರು. ಪ್ರಶಸ್ತಿಯ ನಗದು ಮೊತ್ತವನ್ನು ಹೆಚ್ಚಿಸಬೇಕು ಎಂಬ ಬಹುದಿನಗಳ ಬೇಡಿಕೆ ಪರಿಶೀಲನೆಯಲ್ಲಿದೆ ಎಂದೂ ಅವರು ಹೇಳಿದರು.

ಆಧುನಿಕ ಕನ್ನಡ ಗದ್ಯ ಪ್ರಕಾರದಲ್ಲಿ ಗಂಭೀರ ಕೃಷಿ ನಡೆಸಿರುವ ದೇಸಾಯರು ನಮ್ಮ ಮಹತ್ವದ ಬರಹಗಾರರಲ್ಲಿ ಒಬ್ಬರು. ಬೀಜ, ಸೃಷ್ಟಿ, ವಿಕ್ಷೇಪ, ರಾಕ್ಷಸ ಮೊದಲಾದ ಕೃತಿಗಳನ್ನು ರಚಿಸಿರುವ ದೇಸಾಯರಿಗೆ 1977ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರಕಿತ್ತು. ರಾಕ್ಷಸ ಕೃತಿ ಅವರಿಗೆ ಈ ಪ್ರಶಸ್ತಿ ತಂದು ಕೊಟ್ಟಿತ್ತು.

(ನಮ್ಮ ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+