ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಳುಕು ಹಲ್ಲಿನ ಕಲೆಯಿಲ್ಲದ ಮುದ್ದುಮಗು ನಿಮ್ಮ ಮನೆಯಲ್ಲಿದೆಯೇ?

By Staff
|
Google Oneindia Kannada News

ನವದೆಹಲಿ : ದೇಶದಲ್ಲಿ ಪ್ರತಿಶತ 60 ರಿಂದ 80 ಮಕ್ಕಳು ಹುಳುಕು ಹಲ್ಲಿನ ಸಮಸ್ಯೆಯಿಂದ ಹಾಗೂ ಶೇ.90 ರಷ್ಟು ವಯಸ್ಕರು ವಸಡಿನ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

ಹಲ್ಲಿನ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಿದೆ, ಜೊತೆಯಲ್ಲಿಯೇ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯ ಪ್ರಮಾಣವೂ ಹೆಚ್ಚುತ್ತಿದೆ. ಸುಮಾರು ಶೇ.80 ರಷ್ಟು ದಂತ ತಜ್ಞರು ಪಟ್ಟಣ ಪ್ರದೇಶಗಳಲ್ಲಿಯೇ ನೆಲೆಸಿರುವುದರಿಂದ ದೇಶದ ಒಟ್ಟು ಜನಸಂಖ್ಯೆಯ ಪ್ರಮಾಣವಾದ ಶೇ.70 ರಷ್ಟು ಗ್ರಾಮೀಣರು ದಂತ ಚಿಕಿತ್ಸೆಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಅಧ್ಯಯನ ಗುರ್ತಿಸಿದೆ.

ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ನಡುವಿನ ದಂತ ವೈದ್ಯಕೀಯ ಸೇವೆಯ ತಾರತಮ್ಯದ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ. ಹರಿ ಪ್ರಕಾಶ್‌, ಈ ತಾರತಮ್ಯವನ್ನು ಜರೂರಾಗಿ ಕೊನೆಗಾಣಿಸಬೇಕು ಎಂದು ಒತ್ತಿ ಹೇಳುತ್ತಾರೆ.

ಗ್ರಾಮೀಣರು ಯಾವುದೇ ವೈದ ್ಯಕೀಯ ಸೇವೆಯ ಸಂರಕ್ಷಣೆ ಹೊಂದಿಲ್ಲ . 2010 ರೊಳಗೆ ಎಲ್ಲರಿಗೂ ದಂತ ಆರೋಗ್ಯ ಎನ್ನುವ ಗುರಿಯನ್ನು ಸಾಧಿಸಲು ಮಕ್ಕಳ ಹಲ್ಲಿನ ಆರೋಗ್ಯದ ಬಗ್ಗೆ ನಾವು ಹೆಚ್ಚಿನ ನಿಗಾ ವಹಿಸಬೇಕು ಎಂದು ಹರಿ ಪ್ರಕಾಶ್‌ ಅಭಿಪ್ರಾಯ ಪಟ್ಟಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X