ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈ-ಕ ದಲ್ಲಿ 2.18 ಲಕ್ಷ ಶೌಚಾಲಯ ನಿರ್ಮಾಣ ಎಸ್‌.ಎಂ. ಕೃಷ್ಣ

By Staff
|
Google Oneindia Kannada News

ಬೆಂಗಳೂರು : ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ 100 ಕೋಟಿ ರುಪಾಯಿ ವೆಚ್ಚದಲ್ಲಿ 2.18 ಲಕ್ಷ ಶೌಚಾಲಯ ನಿರ್ಮಿಸುವ ಹುಡ್ಕೋ ನೆರವಿನ ಯೋಜನೆ-ಗೆ ಬುಧವಾರ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಚಾಲ-ನೆ ನೀಡಿದರು.

ಪ್ರತಿ ಶೌಚಾಲಯಕ್ಕೆ 8 ಸಾವಿರ ರುಪಾಯಿ ವೆಚ್ಚ ತಗುಲಲಿದ್ದು, ನಿರ್ಮಾಣ ವೆಚ್ಚದಲ್ಲಿ ಹುಡ್ಕೋ ಶೇ.30ರಷ್ಟು ಸಬ್ಸಿಡಿ ನೀಡಲಿದೆ. ಶೌಚಾಲಯ ರಹಿತ ಮನೆಗಳಿಗೆ ಈ ಯೋಜನೆ ಅನ್ವಯಿಸಲಿದೆ ಎಂದು ವಿಧಾನಸೌಧದಲ್ಲಿ ಯೋಜನೆ ಉದ್ಘಾಟಿಸಿದ ನಂತರ ಮಾಧ್ಯಮಗೋಷ್ಠಿ-ಯ-ಲ್ಲಿ -ಮಾ-ತ-ನಾ-ಡು-ತ್ತಿ--ದ್ದ ಕೃ-ಷ್ಣ ಹೇಳಿದರು.

ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿಯ ಮೊತ್ತವನ್ನು 200 ಕೋಟಿ ರುಪಾಯಿಗಳಿಂದ 600 ಕೋಟಿ ರುಪಾಯಿಗಳಿಗೆ ಏರಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸ್ಥಳೀಯ ಆಡಳಿತ ಯಂತ್ರಗಳೂ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆ ಸಂಗ್ರಹಿಸಬೇಕು. ಮುನ್ಸಿಪಾಲಿಟಿಗಳಂತೂ ಚಿಕ್ಕಾಸಿಗೂ ಸರ್ಕಾರವನ್ನೇ ಅವಲಂಬಿಸಿವೆ. ಇದೊಂದು ಅನಾರೋಗ್ಯಕರ ಅಭ್ಯಾಸ. ಸಾರ್ವಜನಿಕರು ಈ ಬಗ್ಗೆ ಚರ್ಚಿಸಬೇಕು ಎಂದು ಮುಖ್ಯ-ಮಂ-ತ್ರಿ ಹೇಳಿ-ದ-ರು.

ಬೆಂಗಳೂರನ್ನು 21ನೇ ಶತಮಾನದತ್ತ ಕೊಂಡೊಯ್ಯುವ ಸರ್ಕಾರದ ಆಸಕ್ತಿ ಕಿಂಚಿತ್ತೂ ಕುಂದಿಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಬಗ್ಗೆ ಕೆಲವರು ಚಕಾರ ಎತ್ತಿದ್ದರು. ಅದು ಯಶಸ್ವಿಯಾಗಲಿಲ್ಲವೇ? ಯೋಜನೆ ಜಾರಿಗೆ ತರುವ ಮುನ್ನವೇ ಮೂಗು ತೂರಿಸುವ ಅಭಿವೃದ್ಧಿ ವಿರೋಧಿ ಆಲೋಚನೆಗಳ ಜನರ ಧೋರಣೆ ಬದಲಾಗಬೇಕು ಎಂದು ಕೃಷ್ಣ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಹುಡ್ಕೋ ಮುಖ್ಯಸ್ಥ ಎಚ್‌.ಆರ್‌.ಆಳ್ವ, ಅಭಿವೃದ್ಧಿ ಕಾರ್ಯಗಳಿಗಾಗಿ ತಮ್ಮ ಸಂಸ್ಥೆ ರಾಜ್ಯಕ್ಕೆ 1 ಸಾವಿರ ಕೋಟಿ ರುಪಾಯಿ ನೆರವು ಕೊಡಲು ಸಿದ್ಧವಿರುವುದಾಗಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X