Get Updates
Get notified of breaking news, exclusive insights, and must-see stories!

ಶಬರಿಗಿರಿಯ ಅಯ್ಯಪ್ಪನಿಗಿಂತ ಹೆಚ್ಚು ಸುದ್ದಿಮಾಡಿದ ‘ಪ್ರಸಾದ’

ಶಬರಿಮಲೆ : ಈ ಬಾರಿಯಂತೂ ಶಬರಿಗಿರಿಯ ಸ್ವಾಮಿ ಶರಣಂ ಅಯ್ಯಪ್ಪನಿಗಿಂತ, ದೇವಾಲಯದಲ್ಲಿ ನೀಡುವ ಪ್ರಸಾದವೇ ಭಾರಿ ಸುದ್ದಿ ಮಾಡಿದೆ. ಭಕ್ತಾದಿಗಳಿಗೆ ನೀಡಲಾಗುವ ಆರವಣ ಪ್ರಸಾದದ ವಿವಾದ ನ್ಯಾಯಾಲಯ, ಪ್ರಯೋಗಾಲಯಗಳ ಮೆಟ್ಟಿಲೂ ಹತ್ತಿದೆ.

ಬೀಡಿಯ ತುಂಡುಗಳು, ಇಲಿಯ ಬಾಲ ಆರವಣ ಪ್ರಸಾದದಲ್ಲಿ ದೊರಕಿತ್ತು ಎಂಬ ಸುದ್ದಿ ಜನಮಾನಸದಿಂದ ಮರೆಯಾಗುವ ಮೊದಲೇ ಮತ್ತೆ ಪ್ರಸಾದದಲ್ಲಿ ಕತ್ತೆ, ಇಲಿ ಹಾಗೂ ಮನುಷ್ಯನ ಕೂದಲುಗಳು ದೊರಕಿವೆ. ಈ ಹಿನ್ನೆಲೆಯಲ್ಲಿ ಪ್ರಸಾದದ ಮಾದರಿಗಳನ್ನು ಪ್ರಾಥಮಿಕ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೂ ಕಳುಹಿಸಿಕೊಡುವಂತೆ ಕೇರಳದ ಹೈಕೋರ್ಟ್‌ ಆದೇಶ ನೀಡಿದೆ.

ಪ್ರಯೋಗಾಲಯ ಪ್ರಸಾದವನ್ನು ಪರೀಕ್ಷಿಸಿ ವರದಿ ನೀಡಿದ ನಂತರ ಕ್ರಮ. ಈ ವರದಿ ಬರಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಅಷ್ಟು ಹೊತ್ತಿಗೆ ಮಕರ ಸಂಕ್ರಮಣ ಮುಗಿದು, ಅಯ್ಯಪ್ಪನ ಸೀಸನ್‌ ಮುಗಿದೇ ಹೋಗಿರುತ್ತದೆ. ಆದರೆ, ಪ್ರಸಾದದಲ್ಲಿ ಇಲಿಯ ಕೂದಲು ಸೇರಿದ ಬಗ್ಗೆ ಸುಳಿವು ದೊರಕಿಲ್ಲ ಎಂದು ಅಪರಾಧ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರು ನೀಡಿರುವ ಮಧ್ಯಂತರ ವರದಿ ತಿಳಿಸಿದೆ.

26ರಂದು ಮಂಡಲ ಪೂಜೆ : ಡಿಸೆಂಬರ್‌ 26ರಂದು ಮಧ್ಯಾಹ್ನ 12.30ಕ್ಕೆ ಶಬರಿಗಿರಿಯಲ್ಲಿ ಮಂಡಲಪೂಜೆ ನಡೆಯಲಿದೆ. ಅಂದು ಸ್ವಾಮಿಗೆ ತಂಗ ಅಂಗಿ ತೊಡಿಸಿ, ವಿಶೇಷ ಪೂಜೆ ಮಾಡಲಾಗುತ್ತದೆ. ಇದಕ್ಕಾಗಿಯೇ 24ರಂದೇ ಆರನ್ಮುಳ ಪಾರ್ಥಸಾರಥಿ ಕ್ಷೇತ್ರದಿಂದ ತಂಗ ಅಂಗಿಯನ್ನು ತರಲಾಗುತ್ತದೆ.

ಈ ಮಧ್ಯೆ ಶಬರಿಗಿರಿಗೆ ಬರುತ್ತಿರುವ ಅಯ್ಯಪ್ಪನ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ ಒಂದು ವಾರದಿಂದ ದೇವರ ದರ್ಶನಕ್ಕಾಗಿ ಗಂಟೆಗಟ್ಟೆಲೆ ಸರದಿಯ ಸಾಲಿನಲ್ಲಿ ನಿಂತು ಭಕ್ತರು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+